ಕಾಪು: ಕಟಪಾಡಿ ಮೂಡಬೆಟ್ಟು ನಿವಾಸಿ ಫ್ರಾನ್ಸಿಸ್ ಕಿರಣ್ ಲಸ್ರಾದೊ ಅವರ ಬಳಿಯಿಂದ ಅಮೀರ್ ಸಾಹೇಬ್ ಎಂಬಾತ ಮದುವೆ ಕಾರ್ಯಕ್ರಮಕ್ಕೆ ಹಾಜರಾಗಲೆಂದು ಕೊಂಡೊಯ್ದಿದ್ದ ಕಾರನ್ನು ಮರಳಿಸದೇ ವಂಚಿಸಿರುವ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಒಂದು ತಿಂಗಳ ಅವಧಿಗೆ ಆರೋಪಿ ಕಾರನ್ನು ಪಡೆದುಕೊಂಡಿದ್ದು ಆತನ ಈ ಬಗ್ಗೆ ಬಳಿ ವಿಚಾರಿಸಿದಾಗ ಸ್ವಲ್ಪ ಹಣವನ್ನು ನೀಡಿ, ಮುಂಬೈಗೆ ಹೋಗಲು ಕಾರಿನ ಅಗತ್ಯವಿರುವುದಾಗಿ ತಿಳಿಸಿದ್ದನು. ಅದರಂತೆ ಆರೋಪಿಗೆ ಕಾರು ಬಿಟ್ಟು ಕೊಟ್ಟಿದ್ದು ಆರೋಪಿ ಅಮೀರ್ ಸಾಹೇಬ್ ಮುಂಬೈನಿಂದ ಬಂದ ನಂತರ ಫ್ರಾನ್ಸಿಸ್ ಅವರನ್ನು ಸಂಪರ್ಕಿಸದೇ ಹಾಗೂ ಕಾರು ಸಹ ಹಿಂತಿರುಗಿಸದೇ ವಂಚಿಸಿರುವುದಾಗಿ ಆರೋಪಿಸಲಾಗಿದೆ.
ಆರೋಪಿ ಮುಂಬೈಯಿಂದ ಮರಳಿದ ಬಳಿಕ ಬೆಂಗಳೂರಿಗೆ ಹೋಗಿದ್ದು ಅಲ್ಲಿಂದ ಬಂದ ನಂತರವೂ ಕಾರನ್ನು ನೀಡದೇ ಈ ಬಗ್ಗೆ ವಿಚಾರಿಸಿದಾಗ ಬೇರೆ ಬೇರೆ ಕಾರಣ ನೀಡಿ ಕಾರನ್ನು ಮರಳಿಸಿದೇ ಬಳಸಿದ ಹಣವನ್ನೂ ನೀಡದೇ ಸತಾಯಿಸಿದ್ದನು. ಮತ್ತೆ ಒತ್ತಡ ಹಾಕಿದಾಗ ಆರೋಪಿ ಕಾರನ್ನು ತನ್ನ ಗೆಳೆಯ ಡೇವಿಡ್ ಎಂಬಾತನಿಗೆ ನೀಡಿದ್ದು ಆತ ಬೆಂಗಳೂರಿನಲ್ಲಿರುವುದಾಗಿ ತಿಳಿಸಿದ್ದನು. ಎರಡು ತಿಂಗಳ ನಂತರವೂ ಮರಳಿ ಬಾರದೇ, ಯಾವುದೇ ಪ್ರತಿಕ್ರಿಯೆಯನ್ನೂ ನೀಡದೇ ವಂಚಿಸಿದ್ದಾನೆ. ಈ ಬಗ್ಗೆ ಆರೋಪಿಯ ಮನೆಗೆ ಹೋಗಿ ವಿಚಾರಿಸಿದಾಗ ಆರೋಪಿ ಅಮೀರ್ ಸಾಹೇಬ್ ಮತ್ತು ಆತನ ಪರಿಚಯದ ಮಂಗಳೂರಿನ ಕೋಟೆಕಾರ್‌ನ ಸಿದ್ದಿಕ್ ಎಂಬವರ ನಡುವೆ ಹಣಕಾಸಿನ ವ್ಯವಹಾರವಿದ್ದು, ಹಣ ಪಾವತಿ ಮಾಡದ ಕಾರಣ ಸಿದ್ದಿಕ್ ಕಾರನ್ನು ತೆಗೆದುಕೊಂಡು ಹೋಗಿದ್ದಾನೆ. ಕಾರು ಸಿದ್ದಿಕ್ ಬಳಿಯಿದ್ದು ಆತನ ಹಣ ಪಾವತಿ ಮಾಡಿದ ನಂತರ ಕಾರು ನೀಡುವುದಾಗಿ ತಿಳಿಸಿದ್ದನು. ಆ
ಆರೋಪಿ ಮತ್ತು ಸಿದ್ದಿಕ್ ನಡುವಿನ ವ್ಯವಹಾರ ಕಾರಣದಿಂದಾಗಿ ಕಾರನ್ನು ಇಟ್ಟುಕೊಂಡಿದ್ದು, ಅಮೀರ್ ಸಾಹೇಬ್ ನಂಬಿಕೆ ದ್ರೋಹ ಮಾಡಿ ಕಾರನ್ನು ಪಡೆದುಕೊಂಡಿದ್ದಾನೆ. ಆರೋಪಿ ಅಮೀರ್ ಸಾಹೇಬ್ ತನ್ನ ಕಾರನ್ನು ಯಾವುದೇ ಕಾನೂನು ಬಾಹಿರ ಕೃತ್ಯಗಳಿಗೆ ಬಳಸಿಕೊಳ್ಳುವ ಭಯವಿದೆ ಎಂದು ಫ್ರಾನ್ಸಿಸ್ ಕಿರಣ್ ಲಸ್ರಾದೊ ಅವರು ನ್ಯಾಯಾಲಯದಲ್ಲಿ ಖಾಸಗಿ ದೂರು ನೀಡಿದ್ದಾರೆ.
ನ್ಯಾಯಾಲಯದ ಆದೇಶದಂತೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.