Advertisement

ಸಿಎಂ ವಿರುದ್ಧ ಪ್ರಕರಣ ದಾಖಲು

06:00 AM Nov 03, 2018 | Team Udayavani |

ಶಿವಮೊಗ್ಗ: ಉಪ ಚುನಾವಣೆಯ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಹಿರಂಗ ಪ್ರಚಾರ ಸಭೆಯಲ್ಲಿ ಸರ್ಕಾರದಿಂದ ಯೋಜನೆಗಳನ್ನು ಒದಗಿಸುವ ಬಗ್ಗೆ ಮಾತನಾಡಿದ ಆರೋಪದ ಮೇಲೆ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ
ಪ್ರಕರಣ ದಾಖಲಾಗಿದೆ. ಜಿಲ್ಲೆಯ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ ಪಟ್ಟಣದ ಇಂದಿರಾ ಗಾಂಧಿ ಸ್ಟೇಡಿಯಂನಲ್ಲಿ ಅ.28ರಂದು ನಡೆದ ಪ್ರಚಾರ ಸಭೆಯಲ್ಲಿ ಮೈತ್ರಿಕೂಟದ ಅಭ್ಯರ್ಥಿ ಪರ ಮತಯಾಚಿಸುವ ವೇಳೆ ಕುಮಾರಸ್ವಾಮಿಯವರ ಭಾಷಣದ ವಿಡಿಯೋ
ಪರಿಶೀಲಿಸಿ ಪ್ರಕರಣ ದಾಖಲಿಸಲಾಗಿದೆ. ಸಭೆಯಲ್ಲಿ ಕುಮಾರಸ್ವಾಮಿ ಅವರು, 26.55 ನಿಮಿಷ ಭಾಷಣ ಮಾಡಿದ್ದಾರೆ. ಅದರಲ್ಲಿ ಏತ ನೀರಾವರಿ ಯೋಜನೆ ಮತ್ತು ಈ ಭಾಗದ ಆನವಟ್ಟಿ, ಉಡುಗಣಿ, ತಾಳಗುಂದ, ಹೊಸೂರು ಹೋಬಳಿಗಳಲ್ಲಿ ನೀರಾವರಿ ಸೌಲಭ್ಯ ಕಲ್ಪಿಸುವ ಸಂಬಂಧ ಸಂಜೆ 5.08ರಿಂದ 6.55ರ ವರೆಗೆ ಮಾತನಾಡಿದ್ದಾರೆ. ಅಲ್ಲದೆ ಭಾಷಣದಲ್ಲಿ 14.22ರಿಂದ 15.55ದ ನಿಮಿಷವರೆಗೆ ಬೀದಿ ಬದಿ ವ್ಯಾಪಾರಿ ಗಳಿಗೆ ಮೊಬೈಲ್‌ ಬ್ಯಾಂಕಿಂಗ್‌ ಮೂಲಕ ಬಡ್ಡಿ ರಹಿತ ಸಾಲ ಸೌಲಭ್ಯ ನೀಡುವ ಬಗ್ಗೆ ಮಾತನಾಡಿ ದ್ದರು. ಉಡುಗಣಿ ಹೋಬಳಿಯ ವಿಡಿಯೋ ಸರ್ವೆಲೆನ್ಸ್‌ ತಂಡದ ಮಿಥುನ್‌ ಕುಮಾರ್‌ ಅವರು ಈ ಸಭೆಯ ವಿಡಿಯೋ ಚಿತ್ರೀಕರಣ ಮಾಡಿದ್ದು, ಇದರ ಅಡಕ ಮುದ್ರಿಕೆ ಯನ್ನು ವಿಡಿಯೋ ವಿಂಗ್‌ ತಂಡದ ಕೆ. ಮಂಜಪ್ಪ ಅವರಿಗೆ ಸಲ್ಲಿಸಿದ್ದರು. ಇದರ ಪರಿಶೀಲನೆ ಬಳಿಕ ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಎಂದು ಮಾದರಿ ನೀತಿ ಸಂಹಿತೆ ನೋಡೆಲ್‌ ಅಧಿಕಾರಿಗೆ ವರದಿ ಸಲ್ಲಿಸಲಾಗಿತ್ತು. ಈ ಬಗ್ಗೆ ಶಿಕಾರಿಪುರ ಸಹಾಯಕ ಚುನಾವಣಾ ಅಧಿಕಾರಿ ಅವರು  ಕ್ರಮ ಕೈಗೊಳ್ಳುವಂತೆ ಸೂಚಿಸಿರುವ ಹಿನ್ನೆಲೆಯಲ್ಲಿ ಚುನಾವಣೆ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಬಗ್ಗೆ ಶಿರಾಳಕೊಪ್ಪ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next