Advertisement

ಬಿಡುಗಡೆ ವೇಳೆ ಕೋವಿಡ್‌ ನಿಯಮ ಉಲ್ಲಂಘನೆ|ವಿನಯ್ ಸೇರಿ 400 ಮಂದಿ ವಿರುದ್ಧ ದೂರು

01:54 PM Aug 22, 2021 | Team Udayavani |

ಬೆಳಗಾವಿ:ಗಡಿಭಾಗ ಬೆಳಗಾವಿ ಜಿಲ್ಲೆಯಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ತರಲು ಜಿಲ್ಲಾಡಳಿತ ಹರಸಾಹಸ ಪಡುತ್ತಿದ್ದರೆ ಇತ್ತ ಹಿಂಡಲಗಾ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾದ ವಿನಯ ಕುಲಕರ್ಣಿ ಅವರನ್ನು ಸ್ವಾಗತಿಸಲು ಶನಿವಾರ ಪಾಲ್ಗೊಂಡಿದ್ದ ಅಪಾರ ಸಂಖ್ಯೆಯ ಜನರು ಕೋವಿಡ್‌ ನಿಯಮ ಉಲ್ಲಂಘಿಸಿದರು.

Advertisement

ಮಾಸ್ಕ್ ಹಾಕಿಕೊಳ್ಳದೇ, ಸಾಮಾಜಿಕ ಅಂತರವಿಲ್ಲದೇ ಸಾವಿರಾರು ಜನರು ಪಾಲ್ಗೊಂಡಿದ್ದರು. ಆದರೆ ಪೊಲೀಸರು ಮಾತ್ರ ಕಣ್ಣುಮುಚ್ಚಿ ಕುಳಿತಿದ್ದರು. ನಂತರ ಎಚ್ಚೆತ್ತುಕೊಂಡ ಪೊಲೀಸರು ಬೆಳಗಾವಿ ಗ್ರಾಮೀಣ ಠಾಣೆಯಲ್ಲಿ ವಿನಯ ಕುಲಕರ್ಣಿ ಸೇರಿ 400 ಜನರ ವಿರುದ್ಧ ಎರಡು ಪ್ರತ್ಯೇಕ ದೂರು ದಾಖಲಿಸಿಕೊಂಡಿದ್ದಾರೆ.

ವಾರಾಂತ್ಯ ಕರ್ಫ್ಯೂ ಹಾಗೂ ಕೋವಿಡ್‌ ಮಾರ್ಗಸೂಚಿ ಉಲ್ಲಂಘನೆ ಆರೋಪದಲ್ಲಿ ಬೆಳಗಾವಿ ಗ್ರಾಮೀಣ ಪೊಲೀಸರು ಒಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹಿಂಡಲಗಾ ಗ್ರಾಪಂ ಪಿಡಿಒ ಅವರು ಕೋವಿಡ್‌ ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ ಕರ್ನಾಟಕ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕಾಯ್ದೆಯಡಿ ದೂರು ದಾಖಲಿಸಿದ್ದಾರೆ. ಕೋವಿಡ್‌ ನಿಯಮಗಳನ್ನು ಉಲ್ಲಂಘಿಸಿ ಸಾಮಾಜಿಕ ಅಂತರ ಮರೆತು ರೋಡ್‌ ಶೋ ನಡೆಸಿದ್ದಾರೆ. ರಸ್ತೆ ಇಕ್ಕೆಲಗಳಲ್ಲಿ ಅಪಾರ ಜನರು ಭಾಗವಹಿಸಿದ್ದರು. ಮೆರವಣಿಗೆ ವೇಳೆ ವಿನಯ ಕುಲಕರ್ಣಿ ಅವರೂ ಮಾಸ್ಕ್ ಧರಿಸಿರಲಿಲ್ಲ. ಪೊಲೀಸರು ಸ್ಥಳದಲ್ಲಿ ಇದ್ದರೂ ಜನಜಂಗುಳಿಯನ್ನು ತಡೆಯಲು ಸಾಧ್ಯವಾಗಲಿಲ್ಲ. ವಿನಯ ಕುಲಕರ್ಣಿ ಬಿಡುಗಡೆ ಹಿನ್ನೆಲೆಯಲ್ಲಿ ಶನಿವಾರ ಬೆಳಗ್ಗೆಯಿಂದಲೇ ಜೈಲಿನ ಆವರಣದಲ್ಲಿ ಪೊಲೀಸ್‌ ಬಂದೋಬಸ್ತ್ ಮಾಡಲಾಗಿತ್ತು. ಜೈಲಿನಿಂದ ಸ್ವಲ್ಪ ದೂರದ ಮೈದಾನದಲ್ಲಿ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿತ್ತು.

ಧಾರವಾಡ ಕ್ಷೇತ್ರದಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಂದಿದ್ದರು. ಬೆಂಬಲಿಗರ ಕೆಲವೊಂದು ವಾಹನಗಳನ್ನು ಹಿರೇಬಾಗೇವಾಡಿ ಟೋಲ್‌ ನಾಕಾ ಬಳಿಯೇ ನಿಲ್ಲಿಸಲಾಗಿತ್ತು. ರೊಡ್‌ ಶೋ ವೇಳೆ ನಗರದಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು.

ಕರ್ಫ್ಯೂ ಉಲ್ಲಂಘಿಸಿದ ಕುಲಕರ್ಣಿಗೆ ಸೇನಾ ಅಧಿಕಾರಿಯಿಂದ ಕ್ಲಾಸ್‌

Advertisement

“ವೀಕೆಂಡ್‌ ಕರ್ಫ್ಯೂ ಇದ್ದರೂ ದೇವಸ್ಥಾನಕ್ಕೆ ಹೇಗೆ ಬಂದಿದ್ದೀರಿ’ ಎಂದು ಸೇನಾ ಅಧಿ ಕಾರಿ ರಾಕೇಶ್‌ ಸಾವಂತ್‌ ಅವರು ವಿನಯ ಕುಲಕರ್ಣಿ ಅವರನ್ನು ತರಾಟೆಗೆ ತೆಗೆದುಕೊಂಡರು ಸೇನೆಯ ಸುಪರ್ದಿಯಲ್ಲಿರುವ ಹಿಂಡಲಗಾ ಗಣಪತಿ ದೇವಸ್ಥಾನಕ್ಕೆ ವಿನಯ ಕುಲಕರ್ಣಿ ದರ್ಶನ ಪಡೆದುಕೊಂಡರು. ಜತೆಗೆ ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಟಾಳಕರ ಹಾಗೂ ಬೆಂಬಲಿಗರು ಇದ್ದರು. ಈ ವೇಳೆ ಸ್ಥಳಕ್ಕೆ ಬಂದ ಸೇನಾ ಅಧಿಕಾರಿ ರಾಕೇಶ್‌ ಸಾವಂತ ಅವರು ವಿನಯ ಕುಲಕರ್ಣಿಯನ್ನು ತರಾಟೆಗೆ ತೆಗೆದುಕೊಂಡರು. “ದೇವಸ್ಥಾನಕ್ಕೆ ಬಂದಿದ್ದಾದರೂ ಏಕೆ. ವೀಕೆಂಡ್‌ ಕರ್ಫ್ಯೂ ಇರುವುದು ನಿಮಗೆ ಗೊತ್ತಿಲ್ಲವೇ’ ಎಂದು ತರಾಟೆಗೆ ತೆಗೆದುಕೊಂಡು ಹೊರಗೆ ಕಳುಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next