ಮುಂಬಯಿ: ನಟಿ ಕಂ ಸೋಶಿಯಲ್ ಮೀಡಿಯಾ ಸ್ಟಾರ್ ಉರ್ಫಿ ಜಾವೇದ್ ವಿರುದ್ಧ ಪೊಲೀಸರು ದೂರು ದಾಖಲಿಸಿದ್ದಾರೆ.
ತನ್ನ ವಿಭಿನ್ನ ಫ್ಯಾಷನ್ ಹಾಗೂ ಸಣ್ಣ ಸಣ್ಣ ಬಟ್ಟೆಗಳನ್ನು ಹಾಕಿ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸುವ ಉರ್ಫಿ ಜಾವೇದ್ ತನ್ನ ವಿಡಿಯೋವೊಂದರ ಮೂಲಕ ಪೊಲೀಸ್ ಠಾಣಾ ಮೆಟ್ಟಿಲೇರುವ ಸಂಕಷ್ಟದಲ್ಲಿ ಸಿಲುಕಿದ್ದಾರೆ.
ನಕಲಿ ಪೊಲೀಸರೊಂದಿಗೆ ವಿಡಿಯೋ.. ಇತ್ತೀಚೆಗಷ್ಟೇ ಉರ್ಫಿ ಜಾವೇದ್ ಅವರನ್ನು ಕೆಲ ಪೊಲೀಸರು ಠಾಣೆಗೆ ಕರೆದುಕೊಂಡು ಹೋಗುವ ವಿಡಿಯೋ ವೈರಲ್ ಆಗಿತ್ತು. ಸಣ್ಣ ಸಣ್ಣ ಬಟ್ಟೆ ಹಾಕಿದ್ದರಿಂದ ನಿಮ್ಮನ್ನು ಅರೆಸ್ಟ್ ಮಾಡುತ್ತಿದ್ದೇವೆ ಎಂದು ವಿಡಿಯೋದಲ್ಲಿರುವ ಪೊಲೀಸರು ಹೇಳಿದ್ದರು.
ಈ ವಿಡಿಯೋ ನೋಡಿ ಅನೇಕರು ಅಸಲಿ ನಟಿ ಉರ್ಫಿ ಅರೆಸ್ಟ್ ಆಗಿದ್ದಾರೆ ಎಂದೇ ಅಂದುಕೊಂಡಿದ್ದರು.ವಿಡಿಯೋ ವೈರಲ್ ಆದ ನಂತರ ಯಾವುದೇ ಬಂಧನವಾಗಿಲ್ಲ ಎಂದು ಮುಂಬೈ ಉಪ ಪೊಲೀಸ್ ಆಯುಕ್ತ (ಡಿಸಿಪಿ) ಕೃಷ್ಣಕಾಂತ್ ಉಪಾಧ್ಯಾಯ ಸ್ಪಷ್ಟಪಡಿಸಿದ್ದರು.
ಇದೀಗ ಓಶಿವಾರಾ ಪೊಲೀಸ್ ಠಾಣಾ ಪೊಲೀಸರು ಕೇಸ್ ದಾಖಲಿಸಿದ್ದಾರೆ. ಉರ್ಫಿ ಜಾವೇದ್ ಸೇರಿದಂತೆ ಇತರೆ ನಾಲ್ವರ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 171, 419, 500 ಮತ್ತು 34 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
(ವಂಚನೆಯ ಉದ್ದೇಶದಿಂದ (171) ಸಾರ್ವಜನಿಕ ಸೇವಕರು ಬಳಸುವ ವಸ್ತ್ರವನ್ನು ಧರಿಸುವುದು ,ವ್ಯಕ್ತಿಗತವಾಗಿ ವಂಚನೆ (419), ಮಾನಹಾನಿ (50 )
ಜಾವೇದ್ ಕಾನೂನು ತೊಂದರೆ ಎದುರಿಸುತ್ತಿರುವುದು ಇದೇ ಮೊದಲಲ್ಲ. ಡಿಸೆಂಬರ್ 2022 ರಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಕಾನೂನುಬಾಹಿರ ಮತ್ತು ಅಶ್ಲೀಲ ಕೃತ್ಯಗಳಿಗಾಗಿ ಆಕೆಯ ವಿರುದ್ಧ ಅಂಧೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು.