ಬೆಂಗಳೂರು: ಸ್ಯಾಂಡಲ್‌ವುಡ್ ನಿರ್ದೇಶಕ, ನಟ ಗುರುಪ್ರಸಾದ್ (Director Guruprasad) ವಿರುದ್ದ ದೂರು ದಾಖಲಾಗಿದೆ.
ಸ್ಯಾಂಡಲ್‌ವುಡ್(Sandalwood) ನಲ್ಲಿ ʼ ಮಠʼ , ʼಎದ್ದೇಳು ಮಂಜುನಾಥʼದಂತಹ ಸಿನಿಮಾಗಳನ್ನು ಪ್ರೇಕ್ಷಕರಿಗೆ ವಿಭಿನ್ನವಾಗಿಯೇ ಆಪ್ತವಾದ ನಿರ್ದೇಶಕ ಗುರುಪ್ರಸಾದ್ ವಿರುದ್ಧ ಪುಸ್ತಕ ಮತ್ತು ಸಿಡಿಗಳನ್ನು ಖರೀದಿಸಿ ಹಣ ನೀಡದಿರುವ ಆರೋಪ ಕೇಳಿಬಂದಿದೆ.
ಜಯನಗರದ ಟೋಟಲ್ ಕನ್ನಡ ಮಳಿಗೆ ಮಾಲೀಕ ಲಕ್ಷ್ಮೀಕಾಂತ್ ಅವರು ಗುರುಪ್ರಸಾದ್ ವಿರುದ್ಧ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ: Actress: ಮನೆಯಲ್ಲಿ ನಿಷೇಧಿತ ಮಾದಕ ವಸ್ತು ಬಳಕೆ; ಖ್ಯಾತ ಕಿರುತೆರೆ ನಟಿ ಬಂಧನ
ದೂರಿನಲ್ಲಿ ಏನಿದೆ?: ಗುರುಪ್ರಸಾದ್ 2019ರಲ್ಲಿ ಟೋಟಲ್ ಕನ್ನಡ ಮಳಿಗೆಯಲ್ಲಿ ಕನ್ನಡ ಸಾಹಿತ್ಯ ಹಾಗೂ ಸಿನಿಮಾ ಸಂಬಂಧಿತ ಪುಸ್ತಕಗಳನ್ನು ಖರೀದಿ ಮಾಡಿದ್ದರು. ಇದರೊಂದಿಗೆ ಅವರು ಸಾಹಿತ್ಯಕ್ಕೆ ಸಂಬಂಧಿಸಿದ್ದ ಸಿಡಿಗಳನ್ನು ಖರೀದಿ ಮಾಡಿದ್ದರು.
ತಾವು ತರಬೇತಿ ನೀಡುವ ವಿದ್ಯಾರ್ಥಿಗಳಿಗೆ ಓದಲು ಬೇಕಾದ ನೂರು ಪುಸ್ತಕ ಬೇಕು ರಿಯಾಯಿತಿ ದರದಲ್ಲಿ ಕೊಡಿ ಎಂದು ಕೇಳಿದ್ದರು. 75 ಪುಸ್ತಕಗಳ ಐದು ಸೆಟ್ ಖರೀದಿಸಿದ್ದರಂತೆ. ಒಂದು ಸೆಟ್ಗೆ 13 ಸಾವಿರದಂತೆ ಐದು ಸೆಟ್ ಪುಸ್ತಕಗಳಿಗೆ 65 ಸಾವಿರ ನೀಡಬೇಕಿತ್ತಂತೆ. ಪುಸ್ತಕ ಮತ್ತು ಸಿಡಿಗಳ ಹಣ ಕೊಡದೆ ಸತಾಯಿಸುತ್ತಿದ್ದಾರೆ. ಕರೆ ಮಾಡಿದರೂ ರಿಸೀವ್ ಮಾಡುತ್ತಿಲ್ಲ. ಇದಲ್ಲದೆ ತನ್ನ ಮನೆಯ ವಿಳಾಸ ಕೂಡ ಬದಲಾಯಿಸಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.