Advertisement

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

06:55 PM Apr 05, 2021 | Team Udayavani |

ಇನ್ನೇನು ಆರ್ಥಿಕ ವರ್ಷ ಮುಗಿಯಿತು. ಈ ತಿಂಗಳಿಂದಲೇ ಹೊಸ ಆರ್ಥಿಕ ವರ್ಷ ಶುರುವಾಗಿದೆ. ಹೀಗಾಗಿಯೇ ಹೊಸ ಕಾರುಗಳ ಬಿಡುಗಡೆಗೂ ಕಂಪನಿಗಳು ತಯಾರಿ ನಡೆಸಿವೆ. ಈ ಸಾಲಿನಲ್ಲಿ ಹಲವಾರು ಕಾರುಗಳು ಇವೆ. ಅವುಗಳೆಂದರೆ,

Advertisement

ಹುಂಡೈ ಅಲ್ಕಾಝಾರ್‌ :

ಇದು ಏಪ್ರಿಲ್‌ 6ರಂದು ಅನಾವರಣಗೊಳ್ಳಲಿದ್ದು, ಏಪ್ರಿಲ್‌ ತಿಂಗಳ ಅಂತ್ಯಕ್ಕೆ ಮಾರುಕಟ್ಟೆಗೆ ಬರಲಿದೆ. ಸುಮಾರು 13 ಲಕ್ಷದಿಂದ ಆರಂಭಗೊಂಡು ಬೆಲೆ ಶುರುವಾಗಲಿದೆ. ಎಂಜಿಹೆಕ್ಟರ್‌ ಪ್ಲಸ್‌ ಮತ್ತು ಟಾಟಾ ಸಫಾರಿಗೆ ಈ ಕಾರು ಸ್ಪರ್ಧೆ ನೀಡಲಿದೆ. ಕ್ರೀಟಾದ ಮುಂದುವರಿದ ಭಾಗದಂತೆ ಇದು ಇರಲಿದೆ ಎಂದೇ ಹೇಳಲಾಗುತ್ತಿದೆ.

ಸಿಟ್ರಾನ್‌ ಸಿ5 ಏರ್‌ ಕ್ರಾಸ್‌ :

ಫ್ರಾನ್ಸ್ ನ ಈ ಕಾರು ಇದೇ ಮೊದಲ ಬಾರಿಗೆ ಭಾರತದಲ್ಲಿ ಬಿಡುಗಡೆಯಾಗಲುಸಿದ್ಧವಾಗಿದೆ. ಏಪ್ರಿಲ್‌ 7ರಂದು ಮಾರುಕಟ್ಟೆಗೆ ಬರಲಿದೆ. ಸುಮಾರು13 ಲಕ್ಷದಿಂದ ಬೆಲೆ ಆರಂಭವಾಗಲಿದೆ. ಜೀಪ್‌ ಕಂಪಾಸ್‌ ಮತ್ತು ಪೋಕ್ಸ್ ವೋಗನ್‌ ಟೈಗುನ್‌ ಫೇಸ್‌ ಲಿಫ್ಟ್ ಗೆ ಸ್ಪರ್ಧೆಯೊಡ್ಡಲಿದೆ. ಇದು 2 ಲೀ.

Advertisement

ಸಾಮರ್ಥ್ಯದ ಡೀಸೆಲ್‌ ಎಂಜಿನ್‌ ಹೊಂದಿರಲಿದೆ. 8 ಸ್ಪೀಡ್‌ ಆಟೋಮ್ಯಾಟಿಕ್‌ ಟ್ರಾನ್ಸ್ ಮಿಷನ್‌ ಹೊಂದಿರಲಿದೆ.

ವೋಕ್ಸ್ ವೋಗನ್‌ ಟೈಗುನ್‌ ಫೇಸ್‌ ಲಿಫ್ಟ್ :

ಏಪ್ರಿಲ್‌ ಅಂತ್ಯಕ್ಕೆ ಈ ಕಾರು ಬಿಡುಗಡೆಯಾಗಲಿದ್ದು, 28 ಲಕ್ಷ ರೂ.ಗಳಿಂದ ಬೆಲೆ ಆರಂಭವಾಗಲಿದೆ. ಸಿಟ್ರಾನ್‌ ಸಿ5 ಏರ್‌ ಕ್ರಾಸ್‌ ಮತ್ತು ಜೀಪ್‌ಕಂಪಾಸ್‌ ನ ಟಾಪ್‌ ವೇರಿಯಂಟ್‌ ಗಳಿಗೆ ಈ ಕಾರು ಸ್ಪರ್ಧೆ ನೀಡಲಿದೆ. ಇದೂ 2.0 ಲೀಟರ್‌ ಸಾಮರ್ಥ್ಯದ ಟಬೋರ್‌ ಪೆಟ್ರೋಲ್‌ ಎಂಜಿನ್‌ ಹೊಂದಿದೆ. ಇದು ಫೇಸ್‌ ಲಿಫ್ಟ್ ಕಾರಾಗಿದ್ದು, ಕೆಲವೊಂದು ಬದಲಾವಣೆಗಳೊಂದಿಗೆ ಮಾರುಕಟ್ಟೆಗೆ ಬರಲಿದೆ.

2021 ಸ್ಕೋಡಾ ಕಾಡಿಕ್‌ :

ಏಪ್ರಿಲ್‌ 13ರಂದು ಈ ಕಾರು ಅನಾವರಣಗೊಳ್ಳಲಿದ್ದು, 33 ಲಕ್ಷ ರೂ.ಗಳಿಂದ ಬೆಲೆ ಆರಂಭವಾಗಲಿದೆ.ವೋಕ್ಸ್ ವೋಗನ್‌ ಟಿಗುನ್‌ ಆಲ್‌ ಸ್ಪೇಸ್‌,ಫೋರ್ಡ್‌ಎಂಡೋವರ್‌, ಟೋಯೋಟಾ ಫಾರ್ಚುನರ್‌, ಎಂಜಿಗ್ಲೋಸ್ಟರ್‌ ಕಾರಿಗೆ ಇದು ಸ್ಪರ್ಧೆ ನೀಡಲಿದೆ. ಈ ವರ್ಷದಮಧ್ಯಭಾಗದಲ್ಲಿ ಇದು ಮಾರುಕಟ್ಟೆಗೆ ಪ್ರವೇಶ ಮಾಡಲಿದೆ. ಇದು 7 ಸೀಟಿನ ಎಸ್‌ ಯು ವಿ ಆಗಿದ್ದು, 2.0 ಲೀ. ಟಬೋರ್‌ ಪೆಟ್ರೋಲ್‌ ಎಂಜಿನ್‌ ಹೊಂದಿದೆ

2021 ಕಿಯಾ ಸೆಲ್ಟೋಸ್‌ : ಏಪ್ರಿಲ್‌ 27ರಂದು ಈ ಕಾರು ಮಾರುಕಟ್ಟೆಗೆಬಿಡುಗಡೆ ಯಾಗಲಿದೆ.10ರಿಂದ 17 ಲಕ್ಷ ರೂ.ಗಳ ವರೆಗೆ ಬೆಲೆಇರಲಿದೆ. ಹುಂಡೈ ಕ್ರೀಟಾ, ಎಂಜಿಹೆಕ್ಟರ್‌, ಟಾಟಾ ಹ್ಯಾರಿಯರ್‌, ನಿಸಾನ್‌ ಕಿಕ್ಸ್ ಮತ್ತು ರಿನಾಲ್ಟ್ ಡಸ್ಟರ್‌ಗೆ ಸ್ಪರ್ಧೆ ನೀಡಲಿದೆ. ಹೊಸ ಲೋಗೋ ಮತ್ತು ಹೊಸವೇರಿಯಂಟ್‌ನಲ್ಲಿ ಇದು ಮಾರುಕಟ್ಟೆಗೆ ಬರಲಿದ್ದು, ಉಳಿದಂತೆ ಹೆಚ್ಚು ಬದಲಾವಣೆ ಇರುವುದಿಲ್ಲ ಎಂದು ಹೇಳಲಾಗುತ್ತಿದೆ. ಹೊಸ ಪೀಳಿಗೆಯ ಮಾರುತಿ

ಸುಜುಕಿ ಸೆಲೆರಿಯೋ : ಏಪ್ರಿಲ್‌ನಲ್ಲೇ ಈ ಕಾರು ಕೂಡ ಅನಾವರಣವಾಗುವ ಸಾಧ್ಯತೆ ಇದೆ. 5ರಿಂದ 7ಲಕ್ಷದ ವರೆಗೆ ಬೆಲೆಇರಲಿದೆ. ಹುಂಡೈಸೆಂಟ್ರೋ,ಮಾರುತಿವ್ಯಾಗನಾರ್‌, ಟಾಟಾ ಟಿಯಾಗೋ ಮತ್ತು ಡಸ್ಟನ್‌ ಗೋಗೆ ಸ್ಪರ್ಧೆನೀಡಲಿದೆ. 2014ರಲ್ಲಿ ಸೆಲಾರಿಯೋ ಲಾಂಚ್‌ ಆಗಿತ್ತು. ಈಗ ಹೊಸ ಫೀಚರ್‌, ಎಂಜಿನ್‌ ಮತ್ತು ಹೊಸ ಫ್ಲಾಟ್‌ ಫಾರ್ಮ್ ನೊಂದಿಗೆ ಸಂಪೂರ್ಣ ಹೊಸ ಲುಕ್‌ ನೊಂದಿಗೆ ಇದು ಬಿಡುಗಡೆಯಾಗಲಿದೆ. ­

 

ಸೋಮಶೇಖರ ಸಿ.ಜೆ

Advertisement

Udayavani is now on Telegram. Click here to join our channel and stay updated with the latest news.

Next