Advertisement

ದಿಲ್ಲಿಯಲ್ಲಿ ಖಾಸಗಿ ದ್ವಿಚಕ್ರ ವಾಹನದ ಸಾರಿಗೆ ಸೇವೆ ಶಿಕ್ಷಾರ್ಹ

08:51 PM Feb 20, 2023 | Team Udayavani |

ನವದೆಹಲಿ: ಖಾಸಗಿ ನೋಂದಣಿಯ ದ್ವಿಚಕ್ರ ವಾಹನಗಳನ್ನು ಟ್ಯಾಕ್ಸಿ ಸೇವೆಗೆ ಬಳಸುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಇಂಥ ಪ್ರಕರಣಗಳಲ್ಲಿ ಸಿಕ್ಕಿಬಿದ್ದರೆ ಶಿಕ್ಷೆ ಜತೆಗೆ 10 ಸಾವಿರ ರೂ.ದಂಡವನ್ನೂ ಪಾವತಿಸುವ ನಿಯಮವನ್ನು ದೆಹಲಿ ಸರ್ಕಾರ ಜಾರಿಗೊಳಿಸಿದೆ.

Advertisement

ಖಾಸಗಿ ನೋಂದಣಿ ದ್ವಿಚಕ್ರವಾಹನಗಳಲ್ಲಿ ಗ್ರಾಹಕರಿಗೆ ಸಾರಿಗೆ ಸೇವೆ ಒದಗಿಸುವುದು ಮೋಟಾರು ವಾಹನ ಕಾಯ್ದೆಯ ಉಲ್ಲಂಘನೆಯಾಗುತ್ತದೆ ಅಲ್ಲದೇ, ಸೆಕ್ಷನ್‌ 192ರ ಅನ್ವಯ ಶಿಕ್ಷಾರ್ಹ ಅಪರಾಧ ಎಂದಿದೆ.

ಜತೆಗೆ ಇಂಥ ಪ್ರಕರಣಗಳು ವರದಿಯಾದರೆ ವಾಹನದ ಮಾಲೀಕರಿಗೆ ಮೊದಲ ಬಾರಿಗೆ 5 ಸಾವಿರ ದಂಡ, 2ನೇ ಬಾರಿಗೆ 10 ಸಾವಿರ ದಂಡ ವಿಧಿಸಲಾಗುತ್ತದೆ. ಜತೆಗೆ 1 ವರ್ಷದ ವೆರೆಗೆ ನಿರ್ಬಂಧ, ಪರವಾನಗಿ ನಿಷೇಧವನ್ನೂ ಹೇರಲಾಗುವುದು ಎಂದಿದೆ.

ಅಲ್ಲದೆ, ಇಂಥ ಸೇವೆಗಳಿಗೆ ಮಧ್ಯವರ್ತಿಯಾಗುವ ವೇದಿಕೆಗಳ ವಿರುದ್ಧವೂ ಪ್ರಕರಣ ದಾಖಲಿಸಿ, ಶಿಕ್ಷೆಗೆ ಗುರಿ ಪಡಿಸುವುದಲ್ಲದೆ, 1 ಲಕ್ಷ ರೂ.ದಂಡ ವಿಧಿಸುವುದಾಗಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next