Advertisement

ಟೊರಾಂಟೊ ಟೆನಿಸ್‌: ಪ್ಲಿಸ್ಕೋವಾ ಕ್ವಾರ್ಟರ್‌ ಫೈನಲ್‌ ಪ್ರವೇಶ

07:25 AM Aug 13, 2017 | Team Udayavani |

ಟೊರಾಂಟೊ: ವಿಶ್ವದ ನಂಬರ್‌ ವನ್‌ ಆಟಗಾರ್ತಿ ಕ್ಯಾರೋಲಿನಾ ಪ್ಲಿಸ್ಕೋವಾ “ಡಬ್ಲ್ಯುಟಿಎ ಟೊರಾಂಟೊ’ ಟೆನಿಸ್‌ ಪಂದ್ಯಾವಳಿಯ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. ಆದರೆ ವೀನಸ್‌ ವಿಲಿಯಮ್ಸ್‌, ಆ್ಯಂಜೆಲಿಕ್‌ ಕೆರ್ಬರ್‌ ಸೋತು ಹೊರಬಿದ್ದಿದ್ದಾರೆ.

Advertisement

ಜೆಕ್‌ ಆಟಗಾರ್ತಿ ಕ್ಯಾರೋಲಿನಾ ಪ್ಲಿಸ್ಕೋವಾ ವಿರುದ್ಧ ಆಡುತ್ತಿದ್ದ ಜಪಾನಿನ ನವೋಮಿ ಒಸಾಕಾ ಪಂದ್ಯದ ವೇಳೆ ಗಾಯಾಳಾಗಿ ಹಿಂದೆ ಸರಿಯಬೇಕಾಯಿತು. ಆಗ ಪ್ಲಿಸ್ಕೋವಾ 6-2, 6-7 (4-7), 1-0 ಮುನ್ನಡೆಯಲ್ಲಿದ್ದರು. ಪ್ಲಿಸ್ಕೋವಾ ಅವರಿನ್ನು ಮಾಜಿ ನಂಬರ್‌ ವನ್‌ ಆಟಗಾರ್ತಿ ಕ್ಯಾರೋಲಿನ್‌ ವೋಜ್ನಿಯಾಕಿ ವಿರುದ್ಧ ಆಡಲಿದ್ದಾರೆ. ವೋಜ್ನಿಯಾಕಿ 6-3, 6-1ರಿಂದ ಅಗ್ನಿàಸ್ಕಾ ರಾದ್ವಂಸ್ಕಾಗೆ ಸೋಲುಣಿಸಿದರು.

ವೀನಸ್‌ ವಿಲಿಯಮ್ಸ್‌ ಅವರಿಗೆ ಉಕ್ರೇನಿನ ಎಲಿನಾ ಸ್ವಿಟೋಲಿನಾ 6-2, 6-1 ಅಂತರದಿಂದ ಆಘಾತವಿಕ್ಕಿದರು. ಜರ್ಮನಿಯ ಆ್ಯಂಜೆಲಿಕ್‌ ಕೆರ್ಬರ್‌ ಅವರನ್ನು ಅಮೆರಿಕದ ಸ್ಲೋನ್‌ ಸ್ಟೀಫ‌ನ್ಸ್‌ 6-2, 6-2ರಿಂದ ಸುಲಭದಲ್ಲಿ ಸೋಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next