Advertisement

ಎನ್‌ಎಂಪಿಯಿಂದ ದಾಖಲೆಯ ಕಾರ್ಗೊ ಕಂಟೈನರ್‌ ನಿರ್ವಹಣೆ

01:00 AM Jul 27, 2022 | Team Udayavani |

ಪಣಂಬೂರು: ನವಮಂಗಳೂರು ಬಂದರಿನಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಅತೀ ದೊಡ್ಡದಾದ ಬರ್ತ್‌ ನಿರ್ಮಾಣವಾದ ಬಳಿಕ ಇದೇ ಮೊದಲ ಬಾರಿಗೆ ದಾಖಲೆಯ ಕಾರ್ಗೊ ಕಂಟೈನರ್‌ ನಿರ್ವಹಣೆಯನ್ನು ಮಾಡಲಾಗಿದೆ.

Advertisement

2022ರ ಜು. 23ರಂದು ಸಿಮಾ ಮೆರೈನ್‌ ಇಂಡಿಯಾಕ್ಕೆ ಸೇರಿದ 1,936 ಕಂಟೈನರ್‌ಗಳನ್ನು ಹೊತ್ತ ಎಂ.ವಿ. ನೆಯ್ಯರ್‌ ಹಡಗು ಬಂದರಿಗೆ ಆಗಮಿಸಿ ಜು. 25ರಂದು ನಿರ್ಗಮಿಸಿತು.

2021ರಲ್ಲಿ 1,521 ಕಂಟೈನರ್‌ ನಿರ್ವಹಣೆ ಮಾಡಿದ್ದೇ ದಾಖಲೆಯಾಗಿತ್ತು. ಸರಕು ನಿರ್ವಹಣೆಯ ಕುರಿತು ಎನ್‌ಎಂಪಿಎ ಚೇರ್ಮನ್‌ ಡಾ| ಎ.ವಿ. ರಮಣ ಮಾತನಾಡಿ, ಬಂದರಿನಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನು ಕಂಟೈನರ್‌ ನಿರ್ವಹಣೆಗೆ ಬಳಸಲಾಗುತ್ತಿದೆ. ಆನ್‌ಲೈನ್‌ ವ್ಯವಸ್ಥೆಯಿಂದಾಗಿ ದಾಖಲೆ ಪರಿಶೀಲನೆಯೂ ತ್ವರಿತ ಗತಿಯಲ್ಲಿ ನಡೆಯತ್ತಿದೆ. ಬಂದರು ಮತ್ತು ಜೆಎಸ್‌ಡಬ್ಲ್ಯೂ ಸಂಸ್ಥೆಯ ಉತ್ತಮ ಗುಣಮಟ್ಟದ ಸೇವೆಯಿಂದ ಈ ಪ್ರಗತಿ ಸಾಧ್ಯವಾಗಿದೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next