Advertisement

ವೃತ್ತಿಯಾಚೆಗಿನ ಚಟುವಟಿಕೆಗಳು ಮುಖ್ಯ: ನಿಖೀಲ್‌

05:03 PM Nov 07, 2021 | Team Udayavani |

ರಾಯಚೂರು: ಜೀವನದಲ್ಲಿ ಕೇವಲ ವೃತ್ತಿಯನ್ನೆ ನೆಚ್ಚಿಕೊಂಡಿರದೆ ಅದರಾಚೆಗಿನ ಚಟುವಟಿಗೆಗಳನ್ನು ನಡೆಸುವುದು ಬಹಳ ಮುಖ್ಯ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಿಖೀಲ್‌ ಬಿ. ಹೇಳಿದರು.

Advertisement

ನಗರದ ಕೃಷಿ ವಿಜ್ಞಾನಗಳ ವಿವಿ ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಪತ್ರಿಕಾ ದಿನಾಚರಣೆ 2021ರ ಅಂಗವಾಗಿ ರಾಯಚೂರು ರಿಪೋರ್ಟ್‌ರ್ಸ್‌ ಗಿಲ್ಡ್‌ ಮಾಧ್ಯಮದವರಿಗಾಗಿ ಆಯೋಜಿಸಿದ್ದ ಕ್ರಿಕೆಟ್‌ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು.

ಎಲ್ಲಾ ಕಾರ್ಯಕ್ರಮಗಳಲ್ಲಿ ನಮಗೆ ಎದುರಿಗೆ ಕುಳಿತಿರು ವರದಿ ಮಾಡುವ ಪತ್ರಕರ್ತರು ಇಂದು ತಾವೇ ಕ್ರೀಡಾ ತಂಡಗಳಾಗಿ ಎದುರು ಬದಿರು ನಿಂತಿದ್ದಾರೆ. ಕ್ರಿಕೆಟ್‌ ಆಡುವ ಮೂಲಕ ಕ್ರೀಡಾ ಸ್ಫೂರ್ತಿ ಮೆರೆಯುತ್ತಿದ್ದಾರೆ. ಕ್ರೀಡೆ ಮನೋರಂಜನೆ ಹಾಗೂ ಆರೋಗ್ಯಕ್ಕೆ ಅಗತ್ಯವಾಗಿದೆ ಎಂದರು.

ಮೂರು ತಂಡಗಳಾಗಿ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ ಮಾಧ್ಯಮದವರಿಗೆ ಶುಭ ಕೋರಿದರು. ಕೃಷಿ ವಿವಿ ದೈಹಿಕ ಶಿಕ್ಷಣ ನಿರ್ದೇಶಕ ಡಾ| ರಾಜಣ್ಣ ಮಾತನಾಡಿ, ಆರೋಗ್ಯ ಮತ್ತು ಆಟಗಳ ಕುರಿತು ಕೆಲ ಘೋಷವಾಕ್ಯಗಳನ್ನ ತಿಳಿಸಿದರು. ನಂತರ ನಡೆದ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಚನ್ನಬಸವಣ್ಣ ನೇತೃತ್ವದ ತಂಡ ಪ್ರಥಮ ಸ್ಥಾನ ಪಡೆಯಿತು. ಬಸವರಾಜ ನಾಗಡದಿನ್ನಿ ನೇತೃತ್ವದ ತಂಡ ರನ್ನರ್‌ ಅಪ್‌ ಗಳಿಸಿದರೆ, ಬಿ.ವೆಂಕಟಸಿಂಗ್‌ ನೇತೃತ್ವದ ತಂಡ 3ನೇ ಸ್ಥಾನ ಗಳಿಸಿತು. ಉತ್ತಮ ಆಲ್‌ ರೌಂಡರ್‌ ಆಟ ಪ್ರದರ್ಶಿಸಿದ ಶ್ರೀಕಾಂತ್‌ ಸಾವೂರ್‌ 57 ರನ್‌ ಬಾರಿಸಿ 3 ವಿಕೆಟ್‌ ಪಡೆದರೆ, ಶ್ರೀನಿವಾಸ ಕೆ. 43 ರನ್‌ ಬಾರಿಸಿ 4 ವಿಕೆಟ್‌ ಪಡೆದು ಇಬ್ಬರೂ ಮ್ಯಾನ್‌ ಆಫ್‌ ದಿ ಸೀರೀಸ್‌ಗೆ ಭಾಜನರಾದರು.

ಕಾರ್ಯನಿರತ ಪತ್ರಕರ್ತ ಸಂಘದ ರಾಜ್ಯ ಸಮಿತಿ ಸದಸ್ಯ ಶಿವಮೂರ್ತಿ ಹಿರೇಮಠ, ರಾಯಚೂರು ರಿಪೋರ್ಟ್‌ರ್ಸ್‌ ಗಿಲ್ಡ್‌ನ ಪ್ರಧಾನ ಕಾರ್ಯದರ್ಶಿ ವಿಜಯ್‌ ಜಾಗಟಗಲ್‌ ಸೇರಿ 40ಕ್ಕೂ ಹೆಚ್ಚು ಪತ್ರಕರ್ತರು ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next