Advertisement

ಕಣ್ಣುಗಳ ರಕ್ಷಣೆ ಬೇಡ ನಿರ್ಲಕ್ಷ್ಯ

05:39 PM Apr 03, 2018 | |

ಕಣ್ಣು ಎಷ್ಟು ಅಗತ್ಯ ಅನ್ನುವುದು ಎಲ್ಲರಿಗೂ ಗೊತ್ತು. ಕಣ್ಣಿಲ್ಲದೇ ಹೋದರೆ, ಕಣ್ಣಿದ್ದು ದೃಷ್ಟಿ ಕಳೆದುಕೊಂಡರೆ, ಸಂಪೂರ್ಣ ಬದುಕು ಕತ್ತಲಾಗುತ್ತದೆ.

Advertisement

ಆಧುನಿಕ ಜಗತ್ತಿನಲ್ಲಿ ಕಣ್ಣಿದ್ದು, ಅನೇಕ ತೊಂದರೆ ಉಂಟಾಗಿ ದೃಷ್ಟಿ ಸಮಸ್ಯೆಗೆ ಒಳಗಾದವರು ಸಾವಿರಾರು ಸಂಖ್ಯೆಯಲ್ಲಿದ್ದಾರೆ. ಬಹುತೇಕ ಅಪಾಯಗಳು ನಿರ್ಲಕ್ಷ್ಯದಿಂದಲೇ ಸಂಭವಿಸುತ್ತವೆ. ಹಾಗಾಗಿ ಪ್ರತಿ ವರ್ಷ ಎ. 1 ರಿಂದ 7ರ ವರೆಗೆ ಅಂಧತ್ವ ತಡೆಗಟ್ಟುವ ವಾರ ಎಂದು ಆಚರಿಸಿ, ಜಾಗೃತಿ ಮೂಡಿಸಲಾಗುತ್ತದೆ. ಕಂಪ್ಯೂಟರ್‌ ಯುಗದ ಪ್ರವೇಶದ ಅನಂತರ ದೃಷ್ಟಿ ಸಮಸ್ಯೆ ದುಪ್ಪಟ್ಟಾಗಿದೆ. ತಂತ್ರಜ್ಞಾನದ ಬಳಕೆಯಿಂದ ನಮ್ಮ ದಿನನಿತ್ಯದ ಕೆಲಸದಲ್ಲಿ ವೇಗ ಪಡೆದುಕೊಂಡರೂ, ಅವು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿವೆ. ಅದರ ಜತೆಗೆ ವಾತಾವರಣದಲ್ಲಿನ ಅನಾರೋಗ್ಯಕರ ಬೆಳವಣಿಗೆಯು ಕಣ್ಣಿನ ಆರೋಗ್ಯದ ಮೇಲೆ ದುಷ್ಪಾರಿಣಾಮ ಬೀರುತ್ತಿದೆ.

ಟಿ.ವಿ., ಕಂಪ್ಯೂಟರ್‌ ಪರದೆಯನ್ನು ಹತ್ತಿರದಿಂದ ಅಥವಾ ತದೇಕಚಿತ್ತದಿಂದ ನೋಡುವುದು ಕೂಡ ದೃಷ್ಟಿ ಸಮಸ್ಯೆಗೆ ಕಾರಣವಾಗುತ್ತದೆ. ಆಗಾಗ ರೆಪ್ಪೆ ಬಡಿತ, ದೃಷ್ಟಿ ಬದಲಾಯಿಸುವುದು, ಮಧ್ಯದಲ್ಲಿ ಕಣ್ಣಿಗೆ ನೀರು ಹಾಕಿಕೊಳ್ಳುವುದು ಉತ್ತಮ. ಜತೆಗೆ ಕತ್ತಲಲ್ಲಿ ಮೊಬೈಲ್‌ ಫೋನ್‌ ವೀಕ್ಷಿಸುವುದು, ಮೊಬೈಲ್‌ ಬ್ರೈಟ್‌ನೆಸ್‌ ಹೆಚ್ಚಿಸುವುದು ಕೂಡ ದೃಷ್ಟಿ ದೋಷಕ್ಕೆ ಕಾರಣವಾಗುತ್ತದೆ. 

ಧೂಳು ಕಂಟಕ
ಬೇಸಗೆಯಲ್ಲಿ  ಧೂಳು ಮಿಶ್ರಿತ ವಾತಾವರಣ ಹೆಚ್ಚು. ಧೂಳು ಕಣ್ಣಿಗೆ ಅಪಾಯಕಾರಿ. ಹಾಗಾಗಿ ಮುಖ್ಯವಾಗಿ ಸಂಚಾರದ ಸಂದರ್ಭದಲ್ಲಿ ಧೂಳು ಕಣ್ಣಿಗೆ ಕಾಡುವುದು ಅಧಿಕ. ಅಲ್ಟ್ರಾ ವೈಲೆಟ್‌ ರೇಸ್‌ ಅನ್ನು ನಿಯಂತ್ರಿಸುವ ಸನ್‌ ಗ್ಲಾಸ್‌ಗಳನ್ನು ಬಳಸುವುದು ಅಗತ್ಯ. ಇದರಿಂದ ಧೂಳಿನಿಂದ ರಕ್ಷಣೆ ಪಡೆಯಬಹುದು. ಕಣ್ಣಿಗೆ ಧೂಳು ಪ್ರವೇಶಿಸಿದ್ದರೆ, ತಂಪು ನೀರಲ್ಲೇ ಆಗಾಗ ಮುಖ ತೊಳೆಯಬೇಕು.

ಓದುವಾಗ ಎಚ್ಚರ
ಕೆಲವರಿಗೆ ಮಂದ ಬೆಳಕಿನಲ್ಲಿ ಓದುವ ಅಭ್ಯಾಸ ಇರುತ್ತದೆ. ತೀರ ಮಂದ ಬೆಳಕಿನಲ್ಲಿ ಪುಸ್ತಕ ಓದಿದರೆ ಅದರಿಂದ ಕಣ್ಣಿಗೆ ಶ್ರಮ ಉಂಟಾಗುತ್ತದೆ. ಇದರಿಂದ ದೃಷ್ಟಿ ದೋಷ ಉಂಟಾಗುವ ಸಾಧ್ಯತೆ ಇದೆ. ಜತೆಗೆ ನಿದ್ರಾಹೀನತೆಯಿಂದಲೂ ಕೂಡ ಕಣ್ಣಿನ ಸಮಸ್ಯೆ ಕಾಣಿಸುತ್ತದೆ. 

Advertisement

ಕಣ್ಣಿನ ಆರೋಗ್ಯ ವೃದ್ಧಿಸಿ
ಹಣ್ಣುಗಳ ಸೇವೆನೆಯು ಕಣ್ಣಿನ ಆರೋಗ್ಯ ಕಾಪಾಡಲು ಅನುಕೂಲ. ಮಾವು, ಬಾಳೆಹಣ್ಣು, ಕಲ್ಲಂಗಡಿ, ದ್ರಾಕ್ಷಿ, ಕ್ಯಾರೆಟ್‌, ಮೊಟ್ಟೆ, ಮೀನು, ಹಸಿರೆಲೆ ತರಕಾರಿ, ಧಾನ್ಯಗಳನ್ನು ಆಹಾರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಳಸಬೇಕು. ಇದರಿಂದ ಪೌಷ್ಟಿಕಾಂಶಗಳು ವೃದ್ಧಿಯಾಗಿ ಕಣ್ಣಿನ ಆರೋ ಗ್ಯ ವನ್ನೂ ಕಾಪಾಡುತ್ತದೆ. 

ಇರಲಿ ಸ್ವಯಂ ಕಾಳಜಿ
ಕಣ್ಣಿಗೆ ಧೂಳು, ಇನ್ನಿತರ ಕಸಗಳು ಬಿದ್ದರೆ, ತತ್‌ಕ್ಷಣ ಕೈಯಿಂದ ಉಜ್ಜಬಾರದು. ತಣ್ಣೀರಿನಿಂದ ನಿಧಾನವಾಗಿ ಕಣ್ಣನ್ನು ತೊಳೆದುಕೊಳ್ಳಬೇಕು. ನುರಿತ ವೈದ್ಯರಿಂದ ಕಣ್ಣಿನ ತಪಾ ಸ ಣೆ ಮಾಡಿಕೊಳ್ಳಬೇಕು. ವಿದ್ಯುತ್‌ ದೀಪದ ಬೆಳಕಿಗೆ ಲೈಟ್‌ಹುಳುಗಳು ಕಣ್ಣಿಗೆ ಬೀಳುವ ಸಾಧ್ಯತೆ ಹೆಚ್ಚು. ಆ ಸಂದರ್ಭದಲ್ಲಿ ನೀರು ಅಥವಾ ಕಾಟನ್‌ಬಟ್ಟೆ ಬಳಸಿ, ಬೇರೆಯವರ ಸಹಾಯ ಪಡೆದು ಕಣ್ಣು ಒರೆ ಸಿ ಕೊ ಳ್ಳ ಬೇಕು. ಕಣ್ಣಿನ ಸಮಸ್ಯೆ ಉಂಟಾದಾಗ ಸ್ವಯಂ ಪ್ರೇರಿತ ಚಿಕಿತ್ಸೆಗೆ ಒಳಪಡದೆ, ಸ್ಥಳೀಯ ವೈದ್ಯರನ್ನು ಭೇಟಿ ಮಾಡಿ ಚಿಕಿತ್ಸೆ ಪಡೆಯಬೇಕು. ಇನ್ನೊಬ್ಬರ ಕನ್ನಡಕವನ್ನು ಸುಖಾಸುಮ್ಮನೆ ಧರಿಸಿ, ಪ್ರಯೋಗಕ್ಕೆ ಒಡ್ಡಬಾರದು. ಕಣ್ಣುಗಳಿಗೆ ಮೇಕಪ್‌ ಹಚ್ಚಿ ಕೊಂಡರೆ ರಾತ್ರಿ ಮಲಗುವ ಮುಂಚೆ ಸ್ವತ್ಛಗೊಳಿಸುವುದನ್ನು ಮರೆಯಬಾರದು.

 ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next