Advertisement

ಹೃದಯ ಸಂಬಂಧಿ ಕಾಯಿಲೆ ನಿರ್ಲಕ್ಷ್ಯ ಸಲ್ಲ: ಡಾ|ಕೌಜಲಗಿ

03:37 PM Apr 16, 2018 | |

ಬಸವಕಲ್ಯಾಣ: ಹೃದಯ ಸಂಬಂಧಿ ಕಾಯಿಲೆಗಳು ಕಂಡು ಬಂದಲ್ಲಿ ನಿರ್ಲಕ್ಷ್ಯ ವಹಿಸದೇ ತಕ್ಷಣ ಆಸ್ಪತ್ರೆಗೆ ತೆರಳಿ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಕಲಬುರಗಿಯ ಜಯದೇವ ಹೃದ್ರೋಗ ಮತ್ತು ಸಂಶೋಧನಾ ಕೇಂದ್ರದ ಹೃದಯ ತಜ್ಞ ಡಾ| ಕೌಜಲಗಿ ಹೇಳಿದರು.

Advertisement

ನಗರದ ಬಸವೇಶ್ವರ ಸಿಬಿಎಸ್‌ಇ ಶಾಲೆಯಲ್ಲಿ ಬಸವ ಜಯಂತಿ ಹಾಗೂ ಮಹಾತ್ಮ ಬಸವೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಬಸವೇಶ್ವರ ದೇವಸ್ಥಾನ ಪಂಚಕಮಿಟಿ ಹಾಗೂ ವಿಶ್ವಸ್ಥ ಸಮಿತಿ ಆಶ್ರಯದಲ್ಲಿ ಆಯೋಜಿಸಿದ್ದ ಹೃದಯ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬರಿಗೂ ಹೃದಯ ಕಾಯಿಲೆ ಇದೆಯೋ ಇಲ್ಲವೋ ಎಂಬ ಅನುಮಾನ ಇರುತ್ತದೆ. ಎದೆ ನೋವು ಕಾಣಿಸಿಕೊಂಡರೆ ಯಾರೊಬ್ಬರುಅದನ್ನು ನಿರ್ಲಕ್ಷಿಸಬಾರದು ಎಂದರು.

 ಮಧ್ಯ ವಯೋಮಾನದವರು, ವಯೋವೃದ್ಧರಲ್ಲಿ ಹೃದಯ ಕಾಯಿಲೆ ಸಹಜವಾಗಿ ಇರುತ್ತವೆ. ಧೂಮ್ರಪಾನ, ಮದ್ಯಪಾನ, ಮಧುಮೇಹ ಇರುವವರು ಎದೆ ನೋವು ನಿರ್ಲಕ್ಷಿಸದೆ ತಜ್ಞ ವೈದ್ಯರನ್ನು ಕಾಣಬೇಕು. ಎಲ್ಲ ಅಂಗಗಳಿಗೆ ರಕ್ತ ಹರಿಯಲು ಹೃದಯ ಬಡಿತ ಅವಶ್ಯ. ನಿತ್ಯದ ಚಟುವಟಿಕೆಗಳಲ್ಲಿ ಹೃದಯ ಮೌನವಾಗಿ ಕೆಲಸ ಮಾಡುತ್ತಿರುತ್ತದೆ. ಹೃದಯ ನಿಂತರೆ ಜೀವ ಮತ್ತು ಜೀವನ ನಿಲ್ಲುತ್ತವೆ ಎಂದರು.

ಮಕ್ಕಳಿಗೆ ವಿದ್ಯಾಭ್ಯಾಸದ ಜತೆಗೆ ದೈಹಿಕ ಚಟುವಟಿಕೆಗಳು ಅಗತ್ಯ. ಅಂಗಾಂಗಗಳ ಓಡಾಟ ಮತ್ತು ಚಟುವಟಿಕೆಗಳು ಚೆನ್ನಾಗಿದ್ದರೆ ಹೃದಯ ಕ್ರಿಯಾಶೀಲವಾಗಿರುತ್ತದೆ. ಆಹಾರ ಪದ್ಧತಿಯಲ್ಲಿ ಹಣ್ಣು ತರಕಾರಿ ನಾರಿನಂಶ ಬಳಕೆಯಿಂದ ದೇಹದಲ್ಲಿ ಕೊಬ್ಬಿನ ಪ್ರಮಾಣ ಕಡಿಮೆಯಾಗುತ್ತದೆ ಎಂದರು.
 
ಬಿಡಿಪಿಸಿ ಅಧ್ಯಕ್ಷ ವೀರಣ್ಣಾ ಹಲಶೆಟ್ಟೆ ಅಧ್ಯಕ್ಷತೆ ವಹಿಸಿದ್ದರು. ಡಾ| ವಿಜಯಕುಮಾರ ಅಂತಪ್ಪನವರು, ಡಾ| ಜಿ.ಎಸ್‌.ಭುರಾಳೆ ಮಾತನಾಡಿದರು. ಡಾ| ಪೃಥ್ವಿರಾಜ ಬಿರಾದಾರ, ಡಾ| ಸದಾನಂದ ಪಾಟೀಲ, ಡಾ| ಸುರ್ಯಕಾಂತ ಬಾಳೂರಕರ್‌, ಬಿಡಿವಿಸಿ ಅಧ್ಯಕ್ಷ ಮಲ್ಲಯ್ನಾ ಹಿರೇಮಠ, ಬಿಡಿಪಿಸಿ ಉಪಾಧ್ಯಕ್ಷ ಜಗನ್ನಾಥ ಖೂಬಾ, ಕಾರ್ಯದರ್ಶಿ ರೇವಣಪ್ಪ ರಾಯವಾಡೆ, ಸಹಕಾರ್ಯದರ್ಶಿ ಬಸವರಾಜ ಬಾಲಕಿಲೆ, ವಿಶ್ವಸ್ಥರಾದ ಸೋಮಶೇಖರಯ್ನಾ ವಸ್ತ್ರದ, ಬಿಡಿಪಿಸಿ ನಿರ್ದೇಶಕರಾದ ಸುಭಾಷ ಹೊಳಕುಂದೆ,
ಮಲ್ಲಿಕಾರ್ಜುನ್‌ ಕುರಕೋಟೆ, ಕಾಶಪ್ಪಾ ಸಕ್ಕರಭಾವಿ, ಮಲ್ಲಿಕಾರ್ಜುನ್‌ ಚಿರಡೆ, ಅನೀಲಕುಮಾರ ರಗಟೆ, ಶಿವರಾಜ ಶಾಶಟ್ಟೆ ಉಪಸ್ಥಿತರಿದ್ದರು. ಕೋಶಾಧ್ಯಕ್ಷ ಅಶೋಕ ನಾಗರಾಳೆ ಸ್ವಾಗತಿಸಿದರು. ಜ್ಯೋತಿ ತೂಗಾವೆ ನಿರೂಪಿಸಿ, ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next