Advertisement

ಮಕ್ಕಳಲ್ಲೂ ಹೃದಯ ಸಂಬಂಧಿ ಕಾಯಿಲೆ; ತಾಯಂದಿರು ಎಚ್ಚರ ವಹಿಸಲೇ ಬೇಕು

10:17 AM Mar 23, 2023 | ವಿಷ್ಣುದಾಸ್ ಪಾಟೀಲ್ |

ಇತ್ತೀಚಿನ ದಿನಗಳಲ್ಲಿ ಅತೀ ಹೆಚ್ಚು ಎನ್ನುವ ಮಟ್ಟದಲ್ಲಿ ಹಠಾತ್ ಹೃದಯ ಸಂಬಂಧಿ ರೋಗಗಳು ಮತ್ತು ಮೃತ್ಯುಗಳ ವರದಿಯಾಗುತ್ತಿದೆ. ಜನರಲ್ಲೂ ಆತಂಕಕ್ಕೆ ಕಾರಣವಾಗಿದೆ.ಮಕ್ಕಳಲ್ಲಿ ಗರ್ಭವಾಸ್ಥೆಯಲ್ಲಿಯೇ ಹೃದಯ ಸಂಬಂಧಿ ಕಾಯಿಲೆಗಳು ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ.

Advertisement

ಸಾಮಾನ್ಯವಾಗಿ ಮಕ್ಕಳಲ್ಲಿ ಜನ್ಮಜಾತವಾಗಿ ಬರುವ ಹೃದಯ ಕಾಯಿಲೆಗಳು, ಕೆಲವು ರೋಗಲಕ್ಷಣಗಳನ್ನು ತೋರಿಸುತ್ತವೆ.ಹೆಚ್ಚಿದ ಹೃದಯ ಬಡಿತದ ಗತಿ, ಉಸಿರಾಟದ ತೊಂದರೆ, ಉಸಿರುಗಟ್ಟುವಿಕೆ, ಚರ್ಮ ಹಾಗೂ ನಾಲಗೆಯು ನೀಲಿ ಬಣ್ಣಕ್ಕೆ ತಿರುಗುವುದು. ಕಡಿಮೆ ತೂಕ ಹೊಂದಿರುವುದು

ಜನ್ಮಜಾತವಾಗಿ ಬರುವ ಹೃದಯ ಕಾಯಿಲೆಗಳು ಅವುಗಳ ತೀವ್ರತೆಯನ್ನು ಅವಲಂಬಿಸಿ ವಿವಿಧ ರೋಗಲಕ್ಷಣಗಳನ್ನು ಬಿಂಬಿಸಿ ರೋಗದ ಮುನ್ಸೂಚನೆ ನೀಡುತ್ತವೆ. ಈ ಕಾಯಿಲೆ ಗಳಲ್ಲಿ ,ಹೃದಯ ಕೋಣೆಗಳ ನಡುವೆ ಇರುವ ರಂಧ್ರ , ಹೃದಯ ಕೋಣೆಗಳ ಬೆಳವಣಿಗೆ ಕುಂಠಿತವಾಗಿರುವುದು, ಕವಾಟಗಳಲ್ಲಿ ತಡೆ/ ಸೋರಿಕೆ ಇರುವುದು, ಹೃದಯಕ್ಕೆ ಸರಬರಾಜು ಆಗುವ ರಕ್ತನಾಳಗಳ ಅಸಹಜ ಸಂಪರ್ಕ , ಅಪಧಮನಿಗಳು ಹಾಗೂ ಅಭಿಧಮನಿಗಳ ಅನಿಯಮಿತ ಸಂಬಂಧ, ಒಂದೇ ಸಾಮಾನ್ಯ ಹೃತ್ಕುಕ್ಷಿ/ ಹೃತ್ಕರ್ಣ ಮುಂತಾದವುಗಳನ್ನು ಒಳಗೊಂಡಿರುತ್ತವೆ.

ಈ ಕಾಯಿಲೆಗಳಿಂದ ಶ್ವಾಸಕೋಶಕ್ಕೆ ರಕ್ತ ಸರಬರಾಜು ಶ್ವಾಸಕೋಶಕ್ಕೆ ರಕ್ತ ಸಂಚಾರ ಹೆಚ್ಚಾದರೆ ಇದರಿಂದ ಮಗುವಿಗೆ ಉಸಿರಾಟ ದ ಸಮಸ್ಯೆ ಹಾಗೂ ಹೃದಯ ವೈಫಲ್ಯ ಗೊಳ್ಳುವ ಸಾಧ್ಯತೆ ಇರುತ್ತದೆ. ಹಾಗೆಯೇ ಶ್ವಾಸಕೋಶಕ್ಕೆ ರಕ್ತ ಸಂಚಾರ ಕಡಿಮೆಯಾದಲ್ಲಿ , ದೇಹದಲ್ಲಿ ಆಮ್ಲಜನಕಯುಕ್ತ ರಕ್ತದ ಸಂಚಾರ ಕಡಿಮೆಯಾಗಿ ಮಗು ನೀಲಿ ಬಣ್ಣಕ್ಕೆ ತಿರುಗುತ್ತದೆ.

ಕೆಲವೊಂದು ಸಂಕೀರ್ಣ ಜನ್ಮಜಾತ ಹೃದಯ ಕಾಯಿಲೆಗಳು ಮಗುವಿನ ಮೇಲೆ ಬಹಳ ವ್ಯತಿರಿಕ್ತ ಪರಿಣಾಮವನ್ನು ಮೂಡಿಸಬಹುದು. ಹಾಗೂ ಸೂಕ್ತ ಚಿಕಿತ್ಸೆ /ಶಸ್ತ್ರ ಚಿಕಿತ್ಸೆ ದೊರೆಯದೆ ಹೋದಲ್ಲಿ ಮಗುವಿನ ಮೃತ್ಯು ಸಂಭವಿಸಲೂ ಬಹುದು.ಆದ್ದರಿಂದ ಸರಿಯಾದ ಸಮಯಕ್ಕೆ ರೋಗಲಕ್ಷಣಗಳನ್ನು ಅರಿತು, ಸೂಕ್ತ ಸಮಯದಲ್ಲಿ ಹೃದ್ರೋಗ ತಜ್ಞರಿಂದ ರೋಗ ನಿರ್ಣಯ ಮಾಡಿಸಿಕೊಂಡು ಸೂಕ್ತ ಚಿಕಿತ್ಸೆ ಪಡೆಯುವುದರಿಂದ ಮಗುವನ್ನು ಕಾಪಾಡಬಹುದು.

Advertisement

ಹಾಗೆಯೇ ಹೆಚ್ಚಿನ ಸಂಕೀರ್ಣವಾದ ಜನ್ಮಜಾತ ಹೃದಯ ಸಂಬಂಧಿ ಕಾಯಿಲೆಗಳನ್ನು ಭ್ರೂಣ ಅವಸ್ತೆಯಲ್ಲಿಯೇ ಪತ್ತೆ ಹಚ್ಚುವುದರಿಂದ ಮಗುವಿಗೆ ಜನನ ನಂತರ ಬೇಕಾಗುವ ಚಿಕಿತ್ಸೆಯ ಬಗ್ಗೆ ಮುಂದಾಲೋಚನೆ ಮಾಡಲು ಸಾಧ್ಯವಾಗುತ್ತದೆ. ಈಗಿನ ಅತ್ಯಾಧುನಿಕ ತಂತ್ರಜ್ಞಾನಗಳಲ್ಲಿ ಭ್ರೂಣದಲ್ಲಿರುವಾಗಲೇ ಮಗುವಿನ ಹೃದಯದ ಆರೋಗ್ಯದ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಿದೆ. ಅನೇಕರು ಸೂಕ್ತ ಸ್ಕ್ಯಾನ್ ಮಾಡಿಕೊಳ್ಳದೆ ಸಮಸ್ಯೆ ಅನುಭವಿಸಿ ಮಕ್ಕಳನ್ನು ಕಳೆದುಕೊಂಡ ದುರಂತ ನಿದರ್ಶನಗಳಿವೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next