ನೀವು ಸ್ನೇಹಿತರ ಮನೆಗೋ, ಪಾರ್ಟಿಗಳಿಗೋ ಹೋಗುವಾಗ ಜೊತೆಯಲ್ಲಿ ಇಸ್ಪೀಟ್ ಕಾರ್ಡ್ ಪ್ಯಾಕ್ ಇದ್ದರೆ ಮ್ಯಾಜಿಕ್ ಮಾಡಿ, ಅಲ್ಲಿ ನೀವು ಹೀರೋ ಆಗಬಹುದು. ಈಗಾಗಲೇ ನಾನು ಅನೇಕ ಇಸ್ಪೀಟಿನ ಟ್ರಿಕ್‌ಗಳನ್ನು ಹೇಳಿಕೊಟ್ಟಿದ್ದೇನೆ. ಈ ವಾರಾವೂ ಒಂದು ಒಳ್ಳೆಯ ಟ್ರಿಕ್ ಹೇಳಿ ಕೊಡುತ್ತೇನೆ.
ಹತ್ತು ಇಸ್ಪೀಟ್ ಕಾರ್ಡುಗಳನ್ನು ಮುಖ ಕೆಳಗಿರುವಂತೆ ಹಿಡಿದುಕೊಳ್ಳಿ.O-n-e ಅನ್ನುತ್ತಾ ಸ್ಪೆಲ್ಲಿಂಗಿನ ಒಂದೊಂದು ಅಕ್ಷರಕ್ಕೆ ಒಂದೊಂದು ಕಾರ್ಡ್ ಅನ್ನು ಮೇಲಿನಿಂದ ಕೆಳಗೆ (ಅಂದರೆ 10 ಕಾರ್ಡಿನ ಕೆಳಗೆ) ಇಡುತ್ತಾ ಹೋಗಿ. ನಾಲ್ಕನೇ ಕಾರ್ಡ್ ತೆಗೆದು ನೋಡಿದಾಗ ಅದು O-n-e ಅಂದರೆ ಎಕ್ಕ ಆಗಿರುತ್ತದೆ. ಈಗ TWO ಎನ್ನುತ್ತಾ ಮೊದಲಿನಂತೆಯೇ ಒಂದೊಂದಾಗಿ ಮೂರು ಕಾರ್ಡ್‌ಗಳನ್ನು ಮೇಲಿನಿಂದ ಕೆಳಗೆ ಇಡುತ್ತಾ ಹೋಗಿ. ನಾಲ್ಕನೇ ಕಾರ್ಡ್ ಖಗO ಅಂದರೆ ಎರಡು ಆಗಿರುವುದು.
ಇದೇ ರೀತಿ 3,4,5 ಹೀಗೆ 9 ವರೆಗೆ ಮಾಡುತ್ತಾ ಹೋಗಿ. ಸ್ಪೆಲ್ಲಿಂಗಿಗೆ ಸರಿಯಾಗಿ ಮೇಲಿನ ಕಾರ್ಡ್ ಇರುತ್ತದೆ. ನೋಡುವವರಿಗೆ ಇದು ಆಶ್ಚರ್ಯ ಹುಟ್ಟಿಸುತ್ತದೆ ಅಲ್ವೇ?
ಇದರ ಗುಟ್ಟನ್ನು ಹೇಳುತ್ತೇನೆ, ಕೇಳಿ. ಕಾರ್ಡ್‌ಗಳನ್ನು ಮೊದಲೇ 4, 9, 10, 0, 3, 6, 8, 2, 5, 7-ಈ ಕ್ರಮದಲ್ಲಿ ಜೋಡಿಸಿ ಕಾರ್ಡುಗಳ ಮುಖ ಕೆಳಗಿರುವಂತೆ ಪ್ಯಾಕಿನಲ್ಲಿ ಮೊದಲೇ ಇಟ್ಟುಕೊಳ್ಳಿ. ಪ್ರದರ್ಶನದ ಸಮಯದಲ್ಲಿ ಕಾರ್ಡ್ ಪ್ಯಾಕಿನಿಂದ ಎಲ್ಲಾ ಕಾರ್ಡ್‌ಗಳನ್ನು ಹೊರ ತೆಗೆದು ಮೇಲಿನ ಹತ್ತು ಕಾರ್ಡ್‌ಗಳನ್ನು ಅವುಗಳ ಮುಖ ಕೆಳಗೆ ಇರುವಂತೆ ಎಣಿಸಿ ವಿಂಗಡಿಸಿಕೊಳ್ಳಿ. ನೆನಪಿಡಿ. ಈಗ ನಿಮ್ಮ ಕೈಯಲ್ಲಿರುವ ಹತ್ತು ಕಾರ್ಡ್‌ಗಳ ಗುಂಪಿನ ಮೇಲ್ಭಾಗದಲ್ಲಿ 4 ನಂಬರಿನ ಕಾರ್ಡ್ ಇರುತ್ತದೆ ಮತ್ತು ಕೆಳಭಾಗದಲ್ಲಿ 7 ನಂಬರಿನ ಕಾರ್ಡ್ ಇರುತ್ತದೆ. ನಂತರ ಮೇಲೆ ಹೇಳಿದ ರೀತಿಯಲ್ಲಿ ಸ್ಪೆಲ್ಲಿಂಗಿಗೆ ಸರಿಯಗಿ ಕಾರ್ಡ್‌ಗಳನ್ನು ಕೆಳಗಿಡುತ್ತಾ ಹೋದರೆ ಮೇಲಿನ ಕಾರ್ಡ್ ಆ ನಂಬರಿನದ್ದೇ ಆಗಿರುತ್ತದೆ.
ಉದಯ್ ಜಾದೂಗಾರ್