ನ್ಯೂಯಾರ್ಕ್: ವಿಶ್ವದಲ್ಲಿ ಸಾಮಾನ್ಯವಾಗಿ ಆಹಾರ ಪದಾರ್ಥಗಳಲ್ಲಿ ಬಳಸುವ ಕೃತಕ ಸ್ವೀಟ್‌ನರ್ “ಆಸ್ಪರ್ಟೇಮ್”ನಲ್ಲಿ ಕ್ಯಾನ್ಸರ್ ಜನಕ ಅಂಶ ಇರುವುದರ ಬಗ್ಗೆ ಅಂತಾರಾಷ್ಟ್ರೀಯ ಕ್ಯಾನ್ಸರ್ ಸಂಶೋಧನಾ ಸಂಸ್ಥೆ(ಐಎಆರ್‌ಸಿ) ಮತ್ತು ವಿಶ್ವ ಆರೋಗ್ಯ ಸಂಸ್ಥೆ(ಡಬ್ಲೂಎಚ್‌ಒ) ಮುಂದಿನ ತಿಂಗಳು ಘೋಷಿಸಲಿದೆ ಎಂದು ಮೂಲಗಳು ತಿಳಿಸಿವೆ.
ಕೊಕೊ-ಕೊಲಾದ ಡಯಟ್ ಸೋಡಾ, ಚೀವಿಂಗ್ ಗಮ್ ಸೇರಿದಂತೆ ಪಾನಿಯಾಗಳಲ್ಲಿ ಆಸ್ಪರ್ಟೇಮ್ ಸ್ವೀಟ್‌ನರ್ ಬಳಸಲಾಗುತ್ತದೆ.
ಐಎಆರ್‌ಸಿ ಮತ್ತು ಡಬ್ಲೂಎಚ್‌ಒ ಸಂಶೋಧಕರ ತಂಡವು ಆಸ್ಪರ್ಟೇಮ್‌ನಲ್ಲಿ ಕ್ಯಾನ್ಸರ್‌ಕಾರಕ ಅಂಶ ಇರುವುದನ್ನು ಪತ್ತೆಹಚ್ಚಿದ್ದಾರೆ. ಆದರೆ ಒಬ್ಬ ವ್ಯಕ್ತಿ ಸುರಕ್ಷಿತವಾಗಿ ಎಷ್ಟು ಪ್ರಮಾಣದ ಆಸ್ಪರ್ಟೇಮ್‌ಸ್ವೀಟ್‌ನರ್ ಬಳಸಬಹುದು ಎಂಬುದನ್ನು ತಂಡ ತಿಳಿಸಿಲ್ಲ.
ಆಹಾರ ಸೇರ್ಪಡೆಗೆ ಸಂಬಂಧಿಸಿದಂತೆ ಡಬ್ಲೂಎಚ್‌ಒ ನ ತಜ್ಞರ ಸಮಿತಿಯಾದ ಜೆಇಸಿಎಫ್ಎ 1981ರಲ್ಲಿ, ಕಡಿಮೆ ಪ್ರಮಾನದಲ್ಲಿ ಆಸ್ಪರ್ಟೇಮ್‌ಸ್ವೀಟ್‌ನರ್ ಬಳಕೆ ಹಾನಿಕಾರವಲ್ಲ ಎಂದು ಹೇಳಿತ್ತು. ಪಾನಿಯಾದಲ್ಲಿ ಬಳಸಲಾದ ಆಸ್ಪರ್ಟೇಮ್ ಪ್ರಮಾಣದ ಆಧಾರದಲ್ಲಿ ದಿನಕ್ಕೆ ಎಷ್ಟು ಪ್ರಮಾಣದ ಪಾನೀಯಾ ಸೇವಿಸಬಹುದು ಮತ್ತು ಸುರಕ್ಷಿತ ಎಂಬುದು ನಿರ್ಧಾರವಾಗುತ್ತದೆ.
ಆದರೆ ಇತ್ತೀಚಿನ ಸಂಶೋಧನೆಗಳಲ್ಲಿ ಆಸ್ಪರ್ಟೇಮ್ ಮಾನವನ ಆರೋಗ್ಯಕ್ಕೆ ಸುರಕ್ಷಿತವಲ್ಲ ಎಂಬುದನ್ನು ಪತ್ತೆಹಚ್ಚಲಾಗಿದೆ. ಈ ಕುರಿತು ಐಎಆರ್‌ಸಿ ಮತ್ತು ಡಬ್ಲೂಎಚ್‌ಒ ಸಂಶೋಧಕರು ಈ ತಿಂಗಳಲ್ಲಿ ಸಭೆ ನಡೆಸಿದ್ದು, ಜು.14ರಂದು ಈ ಬಗ್ಗೆ ಅಧಿಕೃತವಾಗಿ ಘೋಷಣೆಯಾಗಲಿದೆ ಎಂದು ವರದಿಗಳು ತಿಳಿಸಿವೆ.