Advertisement

ನಂದಳಿಕೆಯಲ್ಲಿ ಭೀಕರ ಅಪಘಾತ: ಸಹೋದರರಿಬ್ಬರು ಸಾವು

04:06 PM Jul 10, 2022 | Team Udayavani |

ಬೆಳ್ಮಣ್: ಇನ್ನೋವಾ ಕಾರು-ಸ್ಕೂಟರ್‌ ಢಿಕ್ಕಿ ಹೊಡೆದ ಪರಿಣಾಮ ಸಹೋರರಿಬ್ಬರು ಸಾವನ್ನಪ್ಪಿರುವ ದಾರುಣ ಘಟನೆ ಭಾನುವಾರ ನಂದಳಿಕೆ ಮಾವಿನಕಟ್ಟೆಯ ಬಳಿ ನಡೆದಿದೆ.

Advertisement

ನಂದಳಿಕೆಯ ನಿವಾಸಿಗಳಾದ ಸತೀಶ್ ಕುಲಾಲ್(28) ಹಾಗೂ ಸಂದೀಪ್ ಕುಲಾಲ್ ಮೃತ ದುರ್ದೈವಿಗಳು.

ಕಾರ್ಕಳ ಕಡೆಯಿಂದ ಬೆಳ್ಮಣ್ ಕಡೆಗೆ ಸ್ಕೂಟಿಯಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಕಾರ್ಕಳ ಕಡೆಗೆ ಪ್ರಯಾಣಿಸುತ್ತಿದ್ದ ಇನೋವಾ ಕಾರಿಗೆ ಢಿಕ್ಕಿ ಹೊಡೆದಿದೆ. ಢಿಕ್ಕಿಯ ಪರಿಣಾಮ ಸಂದೀಪ್ ಸ್ಥಳದಲ್ಲಿಯೇ ಮೃತ ಪಟ್ಟರೆ,  ಸತೀಶ್ ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾರೆ.

ಇದನ್ನೂ ಓದಿ: ಚಿಕ್ಕಮಗಳೂರಿನಲ್ಲಿ ಮುಂದುವರೆದ ಮಳೆ: 6 ತಾಲೂಕುಗಳ ಶಾಲಾ ಕಾಲೇಜುಗಳಿಗೆ ರಜೆ

ಸಂದೀಪ್ ಅವಿವಾಹಿತರಾಗಿದ್ದು, ಸತೀಶ್ ಗೆ ಒಂದು ವರ್ಷದ ಹಿಂದೆಯಷ್ಟೇ ವಿವಾಹವಾಗಿತ್ತು ಎಂದು ತಿಳಿದು ಬಂದಿದೆ.

Advertisement

ಘಟನೆ  ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಠಾಣಾಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next