Advertisement

ಕಾಪು: ಕಾರು ನುಗ್ಗಿಅಂಗಡಿ ಧ್ವಂಸ

11:30 AM Nov 25, 2021 | Team Udayavani |

ಕಾಪು: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ರಸ್ತೆ ಬದಿಯ ಅಂಗಡಿಯೊಂದಕ್ಕೆ ಗುದ್ದಿ ಅಂಗಡಿ ಧ್ವಂಸಗೊಳಿಸಿದ ಘಟನೆ ಮಲ್ಲಾರು ಸ್ವಾಗತ ನಗರ ಬಳಿ ಗುರುವಾರ ಬೆಳಿಗ್ಗೆ ನಡೆದಿದೆ.

Advertisement

ಶಿರ್ವದಿಂದ ಕಾಪುವಿಗೆ ತೆರಳುತ್ತಿದ್ದ ಕುಂದಾಪುರದ ವ್ಯಕ್ತಿಯೋರ್ವರಿಗೆ ಸೇರಿದ್ದ ಕಾರು ಮಲ್ಲಾರು ಸ್ವಾಗತ ನಗರದ ಬಳಿ ಚಾಲಕನ ನಿಯಂತ್ರಣ ತಪ್ಪಿ ಅಂಗಡಿಗೆ ನುಗ್ಗಿದ್ದು ಅಂಗಡಿಯ ಗೋಡೆ ಸಂಪೂರ್ಣ ಧ್ವಂಸಗೊಂಡಿದೆ.

ಇದನ್ನೂ ಓದಿ:ಚಾ.ಬೆಟ್ಟದಲ್ಲಿ ಪರಿಸರ ಹಾನಿಗೆ ಸರ್ಕಾರವೇ ಹೊಣೆ- ಪ್ರಮೋದಾದೇವಿ ಒಡೆಯರ್‌

ಢಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ನಜ್ಜು ಗುಜ್ಜಾಗಿದ್ದು, ಅಂಗಡಿಯ ಒಂದು ಭಾಗದ ಗೋಡೆ ನೆಲಕ್ಕುರುಳಿದೆ. ಅಂಗಡಿಯಲ್ಲಿದ್ದ ಮಾಲೀಕರು ಸಣ್ಣ ಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಕಾಪು ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next