Advertisement

ರಿವರ್ಸ್‌ ತೆಗೆಯುವಾಗ ಕಾರು ಪಲ್ಟಿ

07:22 PM Mar 21, 2023 | Team Udayavani |

ಮಂಗಳೂರು: ರಿವರ್ಸ್‌ ತೆಗೆಯುವ ಸಂದರ್ಭದಲ್ಲಿ ಕಾರು ಮಗುಚಿ ಬಿದ್ದ ಘಟನೆ ಮಂಗಳವಾರ ಮಧ್ಯಾಹ್ನ ನಗರದ ಕೊಡಿಯಾಲ್‌ಬೈಲ್‌ನಲ್ಲಿರುವ ಜಿಲ್ಲಾ ನ್ಯಾಯಾಲಯ ಸಮೀಪದ ರಸ್ತೆಯಲ್ಲಿ ಸಂಭವಿಸಿದೆ.

Advertisement

ಇಳಿಜಾರಾದ ರಸ್ತೆಯಲ್ಲಿ ಕಾರನ್ನು ರಿವರ್ಸ್‌ ತೆಗೆಯುವಾಗ ಪಲ್ಟಿಯಾಗಿ ಆಟೋರಿಕ್ಷಾ ಹಾಗೂ ಮತ್ತೂಂದು ಕಾರಿಗೆ ಬಡಿದು ಆ ವಾಹನಗಳಿಗೂ ಹಾನಿಯಾಗಿದೆ. ಕಾರು ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಎಕ್ಸಲೇಟರ್‌ ಪೆಡಲ್‌ ಮಧ್ಯೆ ಚಪ್ಪಲ್‌ ಸಿಕ್ಕಿಕೊಂಡು ಕಾರಿನ ವೇಗ ಹೆಚ್ಚಾಗಿದ್ದರಿಂದ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದೆ ಎನ್ನಲಾಗಿದೆ.

 

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next