Advertisement

ಫಾಜಿಲ್‌ ಹತ್ಯೆಗೆ ಬಳಸಿದ ಕಾರು ಕಾರ್ಕಳ ಇನ್ನಾ ಗ್ರಾಮದ ನಿರ್ಜನ ಪ್ರದೇಶದಲ್ಲಿ ಪತ್ತೆ

02:28 PM Jul 31, 2022 | Team Udayavani |

ಉಡುಪಿ/ಮಂಗಳೂರು: ಸುರತ್ಕಲ್‌ ನಲ್ಲಿ ನಡೆದ ಫಾಜಿಲ್‌ ಹತ್ಯೆಗೆ ಬಳಸಿದ ಇಯಾನ್ ಕಾರು ಕಾರ್ಕಳ ತಾಲೂಕಿನ ಇನ್ನಾ ಗ್ರಾಮದ ನಿರ್ಜನ ಪ್ರದೇಶದಲ್ಲಿ ಪತ್ತೆಯಾಗಿದೆ.

Advertisement

ರವಿವಾರ ಇನ್ನಾ ಗ್ರಾಮದ ಸ್ಥಳೀಯರು ಕಾರನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.  ಈ ಕಾರು ಕಳೆದ ಮೂರು ದಿನದಿಂದ ಇನ್ನಾ ಗ್ರಾಮದ ಉಕ್ಕುಡ ಎಂಬಲ್ಲಿ ನಿಂತಿತ್ತು. ಇಂದು ಮಂಗಳೂರು ಪೊಲೀಸರಿಗೆ ಸ್ಥಳೀಯರು ಮೆಸೇಜ್‌ ಮಾಡಿ ಮಾಹಿತಿ ನೀಡಿದ್ದಾರೆ.

ಮಂಗಳೂರು ಪೊಲೀಸರು ಸ್ಥಳಕ್ಕೆ ತೆರಳಿದ್ದಾರೆ. ಇದು ಫಾಝಿಲ್ ಕೊಲೆ ಕೃತ್ಯದಲ್ಲಿ ಬಳಸಿದ ಕಾರು ಎಂದು ಹೇಳಲಾಗಿದೆ. ಇನ್ನಷ್ಟೇ ಹೆಚ್ಚಿನ ಮಾಹಿತಿ ಬರಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next