ಭೋಪಾಲ್: ಎದುರಿನಿಂದ ಬರುತ್ತಿದ್ದ ರಿಕ್ಷಾಗೆ ಡಿಕ್ಕಿ ಹೊಡೆಯುದನ್ನು ತಪ್ಪಿಸಲು ಹೋಗಿ ಕಾರೊಂದು ನದಿಗೆ ಬಿದ್ದ ಘಟನೆ ಮಧ್ಯಪ್ರದೇಶದ ನಿವಾರಿ ಜಿಲ್ಲೆಯಲ್ಲಿ ನಡೆದಿದೆ.
ಕಾರಿನಲ್ಲಿ ಮಗು ಸಹಿತ ಐವರು ಪ್ರಯಾಣಿಸುತ್ತಿದ್ದರು.
ಸುದ್ದಿಸಂಸ್ಥೆಯೊಂದು ಇದರ ಸಿಸಿಟಿವಿ ಫೂಟೇಜ್ ಹೊರಹಾಕಿದ್ದು, ಅದರಲ್ಲಿ ಎಲ್ಲಾ ಘಟನಾವಳಿಗಳು ಸೆರೆಯಾಗಿವೆ.
ಎದುರಿನಿಂದ ಬರುತ್ತಿದ್ದ ಆಟೋ ರಿಕ್ಷಾಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋದ ಕಾರು ಚಾಲಕನ ನಿಯಂತ್ರಣ ತಪ್ಪಿ ನದಿಗೆ ಬೀಳುತ್ತದೆ. ಕಾರು ಮುಳುಗುತ್ತಿದ್ದಂತೆ ಕಾರಿನಲ್ಲಿದ್ದ ಓರ್ವ ಮಗುವನ್ನು ಸೇತುವೆಯ ಜನರತ್ತ ಎಸೆಯುತ್ತಾನೆ. ಆದರೆ ಮಗು ಪುನಃ ನದಿಗೆ ಬೀಳುತ್ತದೆ. ಕೂಡಲೇ ಸೇತುವೆಯಿಂದ ಓರ್ವ ನದಿಗೆ ಹಾರಿ ಮಗುವನ್ನು ರಕ್ಷಿಸುತ್ತಾನೆ. ಇತರರನ್ನು ರಕ್ಷಿಸಲಾಗಿದೆ.
ಈ ವೀಡಿಯೋ ವೈರಲ್ ಆಗಿದ್ದು, ಆಟೋ ಚಾಲಕ ಪರಾರಿಯಾಗಿದ್ದಾನೆ.