Advertisement

ಕಾರೂ ಸೇಲಾಗ್ತಿಲ್ಲ.. ಕೆಲ್ಸಾನೂ ಹೋಯ್ತಲ್ಲಾ!

05:25 PM Aug 05, 2019 | Hari Prasad |

ಹೊಸದಿಲ್ಲಿ: ದೇಶಾದ್ಯಂತ ಕಾರು ಮಾರುಕಟ್ಟೆ ತೀವ್ರವಾಗಿ ಕುಸಿತ ಕಂಡಿರುವಂತೆಯೇ, ಆಟೋಮೊಬೈಲ್ ಮಾರಾಟಗಾರರ (ಡೀಲರ್‌ ಶಿಪ್) ವಲಯದಲ್ಲಿ ಸುಮಾರು 2.5 ಲಕ್ಷ ಕೆಲಸಗಾರರ ಉದ್ಯೋಗಕ್ಕೂ ಕತ್ತರಿ ಬಿದ್ದಿದೆ.

Advertisement

ಕಳೆದ ಮೂರು ತಿಂಗಳಿಂದ ಕಾರು ಮಾರಾಟಗಾರರು ಉತ್ತಮ ಮಾರಾಟಕ್ಕೆ ಹೆಣಗಾಡುತ್ತಿದ್ದರೂ ಹೊಸ ಕಾರುಗಳನ್ನು ಕೊಳ್ಳಲು ಗ್ರಾಹಕರೇ ಮುಂದೆ ಬರುತ್ತಿಲ್ಲ. ಇದೆಲ್ಲದರ ನೇರ ಪರಿಣಾಮ ಈ ಕ್ಷೇತ್ರದಲ್ಲಿ ದುಡಿಯುವ ಉದ್ಯೋಗಿಗಳ ಮೇಲಾಗುತ್ತಿದೆ. ಮಾರಾಟ ಕುಂಠಿತಗೊಂಡಿರುವುದರಿಂದ ಆಗುತ್ತಿರುವ ನಷ್ಟವನ್ನು ತಪ್ಪಿಸಲು ಡೀಲರ್ ಗಳು ತಮ್ಮ ಉದ್ಯೋಗಿಗಳ ಸಂಖ್ಯೆಯನ್ನು ಕಡಿಮೆ ಮಾಡಲು ಮುಂದಾಗಿದ್ದಾರೆ. ಆಟೋಮೊಬೈಲ್ ಡೀಲರ್‌ ಗಳ ಒಕ್ಕೂಟ (ಎಫ್.ಎ.ಡಿ.ಎ.) ಈ ಆಘಾತಕಾರಿ ಮಾಹಿತಿಯನ್ನು ಹೊರಹಾಕಿದೆ.

ಸದ್ಯದ ಪರಿಸ್ಥಿತಿಯಲ್ಲಿ ಕಾರುಗಳ ಮಾರಾಟ ಚೇತರಿಸಿಕೊಳ್ಳುವ ನಿರೀಕ್ಷೆ ಇಲ್ಲ. ಇದರೊಂದಿಗೆ ಮುಂದಿನ ದಿನಗಳಲ್ಲಿ ಇನ್ನಷ್ಟು ಉದ್ಯೋಗ ಕಡಿತ ಭೀತಿ ಎದುರಾಗಬಹುದು ಎಂಬ ಮುನ್ಸೂಚನೆಯನ್ನೂ ಸಹ ಎಫ್.ಎ.ಡಿ.ಎ. ಹೇಳಿದೆ. ಕೇಂದ್ರ ಸರಕಾರ ಜಿ.ಎಸ್‌.ಟಿ.ಯಲ್ಲಿ ಕಡಿತ ಮಾಡಿದರೆ ಕಾರುಗಳ ಮಾರಾಟ ಪ್ರಮಾಣ ತುಸು ಸುಧಾರಿಸಬಹುದು ಎನ್ನುವ ಆಶಾವಾದವನ್ನೂ ಒಕ್ಕೂಟ ಇದೇ ಸಂದರ್ಭದಲ್ಲಿ ವ್ಯಕ್ತಪಡಿಸಿದೆ.

ದೇಶಾದ್ಯಂತ ಸುಮಾರು 26 ಸಾವಿರ ಶೋರೂಂಗಳಿದ್ದು, 15 ಸಾವಿರ ಡೀಲರ್‌ ಗಳಿದ್ದಾರೆ. ಈಕ್ಷೇತ್ರದಲ್ಲಿ ಕಳೆದ ಮೂರು ತಿಂಗಳಲ್ಲಿ 2.5 ಲಕ್ಷ ಉದ್ಯೋಗ ಕಡಿತವಾಗಿದೆ.ಹೀಗೆ ಉದ್ಯೋಗ ಕಳೆದುಕೊಂಡವರು ಸುಮಾರು 286 ಶೋರೂಂಗಳಲ್ಲಿ ಕೆಲಸ ಮಾಡಿಕೊಂಡಿದ್ದರು. 271 ನಗರಗಳ ವಿವಿಧ ಕಾರು ಶೋರೂಂಗಳಲ್ಲಿ ಉದ್ಯೋಗ ಕಡಿತವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next