ಕಲಬುರಗಿ: ಜಿಲ್ಲೆಯ ಕಮಲಾಪುರ ಪಟ್ಟಣದ ಹೊರವಲಯದ ಭೀಮನಾಳ ಕ್ರಾಸ್ ಬಳಿ ಭಾನುವಾರ ಬೆಳಿಗ್ಗೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ತೆಲಂಗಾಣ ಮೂಲದ ಇಬ್ಬರು ಸಾವನ್ನಪ್ಪಿ, ಮೂವರಿಗೆ ಗಾಯಗಳಾದ ಘಟನೆ ನಡೆದಿದೆ.
ಅಪಘಾತದಲ್ಲಿ ಸಾವನ್ನಪ್ಪಿದವರನ್ನು ತೆಲಂಗಾಣದ ಹನುಮಕೊಂಡ ನಗರದ ನಿವಾಸಿ ಮೊಹಮ್ಮದ್ ಅಬ್ದುಲ್ ಮಜೀದ್ ಸಿದ್ದಿಕಿ (71) ಹಾಗೂ ಹೈದ್ರಾಬಾದ್ ಬಾಲಾಜಿನಗರದ ಸಾದಿಯಾ ಉನ್ನಿಸಾ ಬೇಗಂ(55) ಎಂದು ಗುರುತಿಸಲಾಗಿದೆ.
ಭೀಮನಾಳ ಕ್ರಾಸ್ ಬಳಿ ಕ್ರೂಸರ್ – ಕಾರು ಮುಖಾಮುಖಿ ಢಿಕ್ಕಿಯಾದ ಪರಿಣಾಮ ಈ ಭೀಕರ ಘಟನೆ ನಡೆದಿದೆ.
ಇದನ್ನೂ ಓದಿ: ಲೈಂಗಿಕ ಕಿರುಕುಳ: ಮಹಿಳಾ ಅಂಡರ್ 17 ತಂಡದ ಕೋಚ್ ಅಲೆಕ್ಸ್ ರನ್ನು ವಜಾಗೊಳಿಸಿದ ಫೆಡರೇಶನ್
Related Articles
ಗಾಯಾಳುಗಳಾದ ಹುಸೇನ್, ಫರ್ಹತ್ ಸುಲ್ತಾನಾ, ಇಂತಿಮಾ ಸುಲ್ತಾನ ಮೂವರನ್ನು ಕಲಬುರಗಿಯ ಜಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.
ಮೃತರು ಕ್ರೂಸರ್ ವಾಹನದಲ್ಲಿ ಕಲಬುರಗಿಯ ಖಾಜಾ ಬಂದೇನವಾಜ್ ದರ್ಗಾದ ದರ್ಶನ ಮಾಡಿಕೊಂಡು ಬೀದರ್ ಕಡೆಗೆ ಪ್ರಯಾಣಿಸುತ್ತಿದ್ದರು ಎಂದು ತಿಳಿದಿದೆ.
ಈ ಕುರಿತು ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.