Advertisement
ಡ್ರೈವಿಂಗ್ ಗೊತ್ತಿದ್ದರೂ, ಹೊಸ ಕಾರು ತೆಗೆದುಕೊಳ್ಳಲು ಹಣಕಾಸಿನ ಸಮಸ್ಯೆ. ಆದರೆ ಈಗ ಅದಕ್ಕಾಗಿ ಚಿಂತಿಸಬೇಕಿಲ್ಲ. ನಿಮಗೆ ಕಾರು ಬಿಡಲು ಗೊತ್ತಿದ್ದರೆ ಸಾಕು, ನೀವೇ ಚಾಲನೆ ಮಾಡಿಕೊಂಡು ಎಲ್ಲಿ ಬೇಕಾದರಲ್ಲಿಗೆ ಹೋಗಿ ಬರುವುದಕ್ಕೆ ಬಾಡಿಗೆ ಕಾರು ನೀಡುವ ಅನೇಕ ಕಂಪೆನಿಗಳು ಮಾರುಕಟ್ಟೆಯಲ್ಲಿ ಈಗ ಹವಾ ಸೃಷ್ಟಿಸಿದೆ.
Related Articles
ಕೆಲವೊಂದು ಸೆಲ್ಫ್ ಬಾಡಿಗೆ ಕಾರು ಕಂಪೆನಿಗಳು ಬಾಡಿಗೆಗೆ ಕಾರು ಕೊಡುವ ಮುನ್ನ ಗ್ರಾಹಕನಿಂದ ಸುಮಾರು 5,000 ರೂ. ನಷ್ಟು ಅಡ್ವಾನ್ಸ್ ಪಡೆದುಕೊಳ್ಳುತ್ತಾರೆ. ಆ ಹಣವನ್ನು ಕಾರು ಹಿಂಪಡೆಯು ವಾಗ ವಾಪಸ್ ನೀಡಲಾಗುತ್ತದೆ. ಸಾಮಾನ್ಯವಾಗಿ ಫಿಗೋ, ಅಮೇಝ್, ಸಿಟಿ, ಇಕೋ ನ್ಪೋರ್ಟ್, ಸ್ಕಾರ್ಪಿಯೋ, ಸಫಾರಿ, ಇ-20, ವ್ಯಾಗನರ್, ಇ-20 ಪ್ಲಸ್, ಮಾರುತಿ ಸ್ವಿಪ್ಟ್, ಮಹೇಂದ್ರ ಕೆಯುವಿ ಸಹಿತ ಮತ್ತಿತರ ಕಾರುಗಳು ಬಾಡಿಗೆಗೆ ಇವೆ.
Advertisement
ದರ ಎಷ್ಟು?ನಾವು ಯಾವ ಕಾರುಗಳನ್ನು ಬಾಡಿಗೆಗೆ ಆಯ್ಕೆ ಮಾಡುತ್ತೇವೆ, ಎಷ್ಟು ತಿಂಗಳುಗಳವರೆಗೆ ಕಾರು ಬೇಕು ಎನ್ನುವುದರ ಮೇಲೆ ಕಾರಿನ ಬಾಡಿಗೆ ದರ ನಿಗದಿಯಾಗುತ್ತದೆ. ಬಾಡಿಗೆ ಕಾರು ಗಳಲ್ಲಿ ಡೀಸೆಲ್ ಜತೆ ಮತ್ತು ಡೀಸೆಲ್ ಇಲ್ಲದೆಯೇ ಎರಡು ಪ್ರಕಾರದಲ್ಲಿ ಆಯ್ಕೆ ಇದೆ. ಡೀಸೆಲ್ ಇದ್ದು ಕಾರು ಬಾಡಿಗೆಗೆ ತೆಗೆದುಕೊಳ್ಳುವುದಾದರೆ 3 ಗಂಟೆಗೆ 15 ಕಿಲೋ ಮೀಟರ್‌ಗೆ 180 ರೂ. ದರದಿಂದ ಪ್ರಾರಂಭವಾಗುತ್ತದೆ. ತಿಂಗಳುಗಳ ಕಾಲ ಬಾಡಿಗೆ ಕಾರ್ ಬುಕ್ಕಿಂಗ್ ಮಾಡುವುದಾದರೆ ಡೀಸೆಲ್ ಇಲ್ಲದೇ ಕಾರು ಪಡೆಯುವ ಆಯ್ಕೆ ಉತ್ತಮ. ಈ ವೇಳೆ ಹೆಚ್ಚಿನ ಆಫರ್‌ಗಳನ್ನು ಆಯಾ ಕಂಪೆನಿಗಳು ನೀಡುತ್ತವೆ. ಉಪಯೋಗ ಬಹಳ
ಬಾಡಿಗೆ ಕಾರುಗಳನ್ನು ಪಡೆಯುವು ದರಿಂದ ಉಪಯೋಗ ಬಹಳಷ್ಟಿದೆ. ಲಕ್ಷಾಂತರ ರೂಪಾಯಿ ಕೊಟ್ಟು ಹೊಸ ಕಾರು ಖರೀದಿ ಮಾಡಲು ಕಷ್ಟವಾಗುವವರಿಗೆ ಇದು ವರದಾನವಾಗಿದೆ. ಹೊಸ ಕಾರು ಕೊಂಡುಕೊಳ್ಳುವುದು ಸುಲಭ. ಆದರೆ ಮುಂದಿನ ನಿರ್ವಹಣೆ ಕಷ್ಟ. ಬಾಡಿಗೆ ಕಾರು ಪಡೆದುಕೊಂಡರೆ ಇದು ತಪ್ಪಲಿದೆ. ಆ್ಯಪ್ ಮೂಲಕವೇ ಬುಕ್ಕಿಂಗ್
ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನ ಮುಂದುವರಿದಿದ್ದು, ಬೆರಳ ತುದಿಯಲ್ಲೇ ಕ್ಲಿಕ್ ಮಾಡುವ ಮೂಲಕ ಕಾರು ಬುಕ್ ಮಾಡಬಹುದಾಗಿದೆ. ಸ್ಮಾರ್ಟ್‌ಫೋನ್‌ನ ಗೂಗಲ್ ಪ್ಲೇಸ್ಟೋರ್‌ನಲ್ಲಿ ಬಾಡಿಗೆ ಕಾರುಗಳ ಹತ್ತಾರು ಆ್ಯಪ್ ಇದ್ದು, ಇದರ ಮೂಲಕ ಮನೆಯಲ್ಲೇ ಕೂತು ಕಾರು ಬುಕ್ ಮಾಡಬಹುದು. ಅದರಲ್ಲಿಯೂ ಜೂಮ್, ಎಕೋ ಕಾರ್ ರೆಂಟ್, ಮೈಲ್ಸ್, ಎವಿಸ್, ಡ್ರೈವ್ ಈಸೀ, ಲೆಟ್ ಮಿ ಡ್ರೈವ್ ಮುಂತಾದ ಆ್ಯಪ್‌ಗ್ಳು ಪ್ರಸಿದ್ಧಿ ಪಡೆದಿವೆ. ಹೊಸ ಕಾರು ಖರೀದಿ ಮಾಡುವುದಕ್ಕಿಂತ ಆನ್‌ಲೈನ್‌ನಲ್ಲಿ ಕಾರು ಬಾಡಿಗೆಗೆ ಪಡೆಯುವುದೇ ಉತ್ತಮ. ಇದರಿಂದ ಲಕ್ಷಾಂತರ ರೂಪಾಯಿ ಹಣ ಹೊಂದಿಸುವುದು ಉಳಿಯುತ್ತದೆ. ಅಲ್ಲದೆ, ಇನ್ಶೂರೆನ್ಸ್ ಸಹಿತ ಕಾರಿನ ನಿರ್ವಹಣೆಯ ವೆಚ್ಚ ಕಡಿಮೆಯಾಗಲಿದೆ.
– ಸತ್ಯನಾರಾಯಣ, ಉದ್ಯೋಗಿ ಮಂಗಳೂರಿನಲ್ಲಿ ಇತ್ತೀಚೆಗೆ ಆನ್‌ಲೈನ್ ಕಾರುಗಳಿಗೆ ಬೇಡಿಕೆ ಬರುತ್ತಿದೆ. ಅದರಲ್ಲಿಯೂ ಇಲ್ಲಿಗೆ ಬರುವ ಪ್ರವಾಸಿಗರು, ಕಾಲೇಜು ವಿದ್ಯಾರ್ಥಿಗಳು ಹೆಚ್ಚಾಗಿ ಬಳಸುತ್ತಿದ್ದಾರೆ. ಬಾಡಿಗೆಗೆ ವಾಹನ ನೀಡುವಾಗ ದೃಢೀಕೃತ ಚಾಲನಾ ಪರವಾನಗಿಯನ್ನು ಕಡ್ಡಾಯವಾಗಿ ಇರಿಸಿಕೊಳ್ಳುತ್ತೇವೆ.
– ಆದೇಶ್,
ಕಾರು ಡೀಲರ್ ಹಂಪನಕಟ್ಟೆ ಮಂಗಳೂರಿನಲ್ಲೂ ಬೇಡಿಕೆ
ಮಂಗಳೂರಿನಲ್ಲಿ ಆನ್‌ಲೈನ್ ಕಾರುಗಳಿಗೆ ಇತ್ತೀಚಿನ ದಿನಗಳಲ್ಲಿ ಬೇಡಿಕೆ ಬರುತ್ತಿದೆ. ಅದರಲ್ಲಿಯೂ ಬೇರೆ ರಾಜ್ಯದಿಂದ ಮಂಗಳೂರಿಗೆ ಬಂದವರು, ಪ್ರವಾಸಿಗರು, ಕಾಲೇಜು ವಿದ್ಯಾರ್ಥಿಗಳಿಂದ ಬೇಡಿಕೆ ಬರುತ್ತಿದೆ. ಮಂಗಳೂರಿನಲ್ಲಿ ಹೆಚ್ಚಾಗಿ ಗಂಟೆಯ ಲೆಕ್ಕದಲ್ಲಿ ಕಾರು ಬಾಡಿಗೆಗೆ ಸಿಗುತ್ತಿದೆ. ನವೀನ್ ಭಟ್ ಇಳಂತಿಲ