Advertisement

Kalaburagi; ಕಾರು-ಬೈಕ್-ಲಾರಿ ನಡುವೆ ಡಿಕ್ಕಿ: ನಾಲ್ವರ ಸಾವು

02:55 PM Oct 17, 2024 | Team Udayavani |

ಕಲಬುರಗಿ: ಕಾರು ಮತ್ತು ಬೈಕ್ ಹಾಗೂ ಲಾರಿ ನಡುವೆ ಡಿಕ್ಕಿಯಾದ ಸರಣಿ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಕಲಬುರಗಿ- ಜೇವರ್ಗಿ ನಡುವಿನ ರಾಷ್ಟ್ರೀಯ ಹೆದ್ದಾರಿ ಕಲಬುರಗಿ ಹಸಿನಾಪುರ ಕ್ರಾಸ್ ಬಳಿ ಕಳೆದ ಮಧ್ಯರಾತ್ರಿ ಸಂಭವಿಸಿದೆ.

Advertisement

ಇಬ್ಬರು ಮಹಿಳೆಯರು, ಇಬ್ಬರು ಪುರುಷರು ಸಾವನ್ನಪ್ಪಿದರೆ ಇನ್ನೂ ನಾಲ್ವರು ಗಾಯಗೊಂಡಿದ್ದಾರೆ. ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಓರ್ವನ ಸ್ಥಿತಿ ಚಿಂತಾಜನಕವಾಗಿದೆ.‌

ಬೈಕ್, ಕಾರು ಮತ್ತು ಲಾರಿ ನಡುವೆ ಸಂಭವಿಸಿದ ಡಿಕ್ಕಿ ಅಪಘಾತದಲ್ಲಿ ರಾಘವೇಂದ್ರ (35) ಮುಜಾಹಿದ್‌ (30) ಹುಸೇನ್ ಬಿ (45) ಮೌಲಾಬಿ (50) ಎನ್ನುವವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.‌

ಬೈಕ್‌ನಲ್ಲಿದ್ದ ಪರಮಾನಂದ ಹಾಗೂ ಕಾರಿನಲ್ಲಿದ್ದ ಇತರ ಮೂರು ಜನರಿಗೆ ಗಂಭೀರ ಗಾಯಗಳಾಗಿವೆ. ಸಿಂದಗಿಯಿಂದ ಚಿತ್ತಾಪುರದ ಕಡೆಗೆ ಹೊರಟಿದ್ದ ಬೈಕ್ ಗೆ ಲಾರಿ ಡಿಕ್ಕಿಯಾದರೆ ಹಿಂದುಗಡೆ ಬರುತ್ತಿದ್ದ ಕಾರು ರಭಸವಾಗಿ ಬಂದು ಲಾರಿಗೆ ಡಿಕ್ಕಿ ಹೊಡೆಯಲಾಗಿದೆ.‌ ಲಾರಿಗೆ ಡಿಕ್ಕಿ ಹೊಡೆದ ಬೈಕ್ ವಾಹನದ ಚಕ್ರಕ್ಕೆ ಸಿಲುಕಿದೆ.

Advertisement

ರಾಯಚೂರು ಜಿಲ್ಲೆಯ ಹಟ್ಟಿ ಗ್ರಾಮಕ್ಕೆ ಕಾರಲ್ಲಿ‌ ತೇರಳುತ್ತಿದ್ದ ವೇಳೆ ಘಟನೆ ಸಂಭವಿಸಿದೆ.‌ ಭೀಕರ ಅಪಘಾತ ಸ್ಥಳಕ್ಕೆ‌ ಕಲಬುರಗಿ ಪೊಲೀಸ್ ಆಯುಕ್ತ ಡಾ ಶರಣಪ್ಪ ಢಗೆ ಭೇಟಿ ಪರಿಶೀಲನೆ ನಡೆಸಿದರು.‌

ಕಲಬುರಗಿ ನಗರದ ಟ್ರಾಫಿಕ್ 1 ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವರ್ಲ್ಡ್ ಟ್ರಾಮಾ ಡೇ ದಿನ ಅಪಘಾತ: ಅಕ್ಟೋಬರ್ 17 ವರ್ಲ್ಡ್ ಟ್ರಾಮಾ ಡೇ ಅಂದರೆ ವಿಶ್ವ ಅಪಘಾತ ನಿರ್ವಹಣೆ ದಿನಾಚರಣೆ. ಈ ದಿನದ ಸಂದರ್ಭದಲ್ಲೇ ಅಪಘಾತ ಸಂಭವಿಸಿದೆ. ವರ್ಲ್ಡ್ ಹಾರ್ಟ್ ಡೇ, ಕ್ಯಾನ್ಸರ್ ಡೇ ಯಂತೆ ವರ್ಲ್ಡ್ ಟ್ರಾಮಾ ಡೇ ಆಚರಿಸಲಾಗುತ್ತದೆ, ಇದೇ ದಿನದ ಸಂದರ್ಭದಲ್ಲಿ ಅಪಘಾತ ಸಂಭವಿಸಿರುವುದು ಅಪಘಾತ ತಡೆಯದಂತೆ ಹೆಚ್ಚಿನ ನಿಟ್ಟಿನಲ್ಲಿ ಮುಂಜಾಗೃತೆ ವಹಿಸುವುದನ್ನು ಎಚ್ಚರಿಕೆ ನೀಡಿದಂತಾಗಿದೆ ಎಂದು ಪೊಲೀಸ್ ಆಯುಕ್ತ ಡಾ. ಶರಣಪ್ಪ ಢಗೆ ಅವರು ಯುನೈಟೆಡ್ ಆಸ್ಪತ್ರೆಯಲ್ಲಿ ನಡೆದ ವರ್ಲ್ಡ್ ಟ್ರಾಮಾ ಡೇ ಕಾರ್ಯಕ್ರಮದಲ್ಲಿ ಹೇಳಿದರು.

ಹೆಚ್ಚುತ್ತಿರುವ ಅಫಘಾತಕ್ಕೆ‌ ಜನತೆಯಲ್ಲಿ ತಾಳ್ಮೆ ಇಲ್ಲದಿರುವುದು ಹಾಗೂ ಸಂಚಾರಿ ನಿಯಮಗಳನ್ನು ಪಾಲಿಸದಿರುವುದೇ ಕಾರಣವಾಗಿದೆ. ಹೀಗಾಗಿ ಒಂದು ನಿಮಿಷದ ಅವಸರ ಜೀವಕ್ಕೆ ಅಪಾಯವಾಗುವುದನ್ನು ತಪ್ಪಿಸಿ ಎಂದು ಕರೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next