Advertisement

ಉದ್ಯಾವರ: ಕಾರು ಢಿಕ್ಕಿ ; ಆಸ್ಪತ್ರೆಗೆ ಹೋಗುತ್ತಿದ್ದ ಮಹಿಳೆ ಸಾವು

11:53 AM Dec 15, 2018 | Harsha Rao |

ಕಾಪು: ಆಸ್ಪತ್ರೆಗೆ ಹೋಗಲೆಂದು ಬಸ್ಸಿನಿಂದಿಳಿದು ಹೆದ್ದಾರಿ ದಾಟಿ ನಡೆದುಕೊಂಡು ಕೊಂಡು ಹೋಗುತ್ತಿದ್ದ ಮಹಿಳೆಗೆ ಕಾರು ಢಿಕ್ಕಿ ಹೊಡೆದು ಮಹಿಳೆ ಮೃತಪಟ್ಟ ಘಟನೆ ಉದ್ಯಾವರ – ಕೊರಂಗ್ರಪಾಡಿ ಕ್ರಾಸ್‌ ಬಳಿ ಗುರುವಾರ ಸಂಜೆ ನಡೆದಿದೆ.

Advertisement

ಕಾಪು – ಪಾದೂರು ನಿವಾಸಿ ಸರಸ್ವತಿ ದೇವಾಡಿಗ (60) ಮೃತ ಮಹಿಳೆ. ಅವರು ತಮ್ಮ ಮಗಳು ಮತ್ತು ಮೊಮ್ಮಕ್ಕಳೊಂದಿಗೆ ಷಷ್ಠಿ ಪ್ರಯುಕ್ತ ಉಡುಪಿಯ ದೇವಸ್ಥಾನಕ್ಕೆ ತೆರಳಿ, ಅಲ್ಲಿಂದ ಮನೆಗೆ ವಾಪಸಾಗುವ ಹಾದಿಯಲ್ಲಿ ಉದ್ಯಾವರ ಆಸ್ಪತ್ರೆಗೆ ದಾಖಲಾಗಿದ್ದ ತಮ್ಮ ಸಂಬಂಧಿಯನ್ನು ನೋಡಲು ತೆರಳುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ.

ಉದ್ಯಾವರದಲ್ಲಿ ಕೊರಂಗ್ರಪಾಡಿ ನಿಲ್ದಾಣದ ಬಳಿ ಬಸ್‌ನಿಂದ ಇಳಿದು ಹೆದ್ದಾರಿ ದಾಟಿ ಬಬ್ಬು ಸ್ವಾಮಿ ದೈವಸ್ಥಾನದ ಬಳಿ ನಡೆದುಕೊಂಡು ಹೋಗುತ್ತಿದ್ದಾಗ ಉಡುಪಿ ಕಡೆಗೆ ವೇಗವಾಗಿ ತೆರಳುತ್ತಿದ್ದ ಕಾರು ಸರಸ್ವತಿ ದೇವಾಡಿಗ ಅವರಿಗೆ ಢಿಕ್ಕಿ ಹೊಡೆದು, ಕಾರು ಪರಾರಿಯಾಗಿತೆನ್ನಲಾಗಿದೆ.

ಢಿಕ್ಕಿ ಹೊಡೆದ ರಭಸಕ್ಕೆ ಅವರ ತಲೆ ಮತ್ತು ಸೊಂಟಕ್ಕೆ ಗಂಭೀರವಾದ ಗಾಯವಾಗಿತ್ತು. ಗಾಯಾಳುವನ್ನು ತತ್‌ಕ್ಷಣ ಉಡುಪಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅಲ್ಲಿ ಗಾಯಾಳುವನ್ನು ಪರೀಕ್ಷಿಸಿದ ವೈದ್ಯರು ಮಹಿಳೆ ಮೃತಟ್ಟಿರುವುದಾಗಿ ತಿಳಿಸಿದ್ದಾರೆ.

ಸಿಸಿ ಕೆಮರಾ ಪೂಟೇಜ್‌ನಲ್ಲಿ ಕಾರು ಪತ್ತೆ
ಮಹಿಳೆಗೆ ಢಿಕ್ಕಿ ಹೊಡೆದ ಕಾರು ಸ್ಥಳದಿಂದ ಪರಾರಿಯಾಗಿದ್ದು, ಪೊಲೀಸರು ಕಾರನ್ನು ಸಿನಿಮೀಯ ರೀತಿಯಲ್ಲಿ, ಸಿಸಿಟಿವಿ ಫೂಟೇಜ್‌ನ ಆಧಾರದಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ. ಅಪಘಾತದ ರಭಸಕ್ಕೆ ಕಾರಿನ ಮುಂಭಾಗ ಕಳಚಿ ಹೋಗಿದ್ದು, ಮೃತರ ಜತೆಗಿದ್ದವರು ತಿಳಿಸಿದ ಗುರುತಿನ ಆಧಾರದ ಮೇರೆಗೆ ಮತ್ತು ಕಟಪಾಡಿ ಹೊರ ಠಾಣೆಯಲ್ಲಿ ಇರುವ ಸಿಸಿ ಕೆಮರಾದಲ್ಲಿ ಆಗಿದ್ದ ರೆಕಾರ್ಡ್‌ನ್ನು ಆಧರಿಸಿ, ಕಾರನ್ನು ವಶಕ್ಕೆ ಪಡೆದುಕೊಳ್ಳಲು ಸಾಧ್ಯವಾಗಿದೆ.
ಅಪಘಾತ ನಡೆಸಿ, ಪರಾರಿಯಾಗಿದ್ದ ಕಾರಿನ ಚಾಲಕ ಉಡುಪಿ ನಿವಾಸಿ ಮಹಮ್ಮದ್‌ ಅದ್ಯಾನ್‌ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಿದ್ದಾರೆ.

Advertisement

ಕಾರಿನಿಂದ ಇಳಿದ ವ್ಯಕ್ತಿಯ ಮೂಲಕ ಚಾಲಕನ ಪತ್ತೆ
ಅಪಘಾತ ನಡೆಸಿದ ಕಾರು ಮರಳಿ ಕಟಪಾಡಿಯತ್ತ ಆಗಮಿಸಿ, ಅಲ್ಲಿ ವ್ಯಕ್ತಿಯೊಬ್ಬನನ್ನು ಇಳಿಸಿ ಮುಂದೆ ಸಾಗಿತ್ತು. ಆದರೆ ಕಟಪಾಡಿಯಲ್ಲಿ ಕಾರಿನಿಂದ ಒಬ್ಬ ವ್ಯಕ್ತಿ ಇಳಿದಿದ್ದು, ಆತ ಸ್ಥಳೀಯ ವ್ಯಾಪಾರಿಯೊಬ್ಬರ ಬಳಿ ಮಾತನಾಡಿ ಬಳಿಕ ಅಲ್ಲಿ ನಿಲ್ಲಿಸಿದ್ದ ಸ್ಕೂಟರ್‌ ಮೂಲಕ ತೆರಳಿದ್ದನು.

ಸಿಸಿ ಕೆಮರಾದ ಫ‌ುಟೇಜ್‌ನಲ್ಲಿ ಅದನ್ನು ಗಮನಿಸಿದ ಪೊಲೀಸರು ವ್ಯಾಪಾರಿಯ ಮೂಲಕ ಸ್ಕೂಟರ್‌ ಏರಿ ಹೋದ ವ್ಯಕ್ತಿಯ ಗುರುತು ಹಚ್ಚಿ, ಬಳಿಕ ಆತನಿಂದ ಕಾರಿನ ಚಾಲಕನ ಕುರಿತಾದ ಮಾಹಿತಿ ಕಲೆ ಹಾಕಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next