Advertisement

ಅಪಘಾತದಲ್ಲಿ ಲಾಲು ಪುತ್ರ ತೇಜ್‌ ಪ್ರತಾಪ್‌ಗೆ ಗಾಯ

05:01 PM Jun 01, 2019 | Team Udayavani |

 

Advertisement

ಪಾಟ್ನಾ: ಆರ್‌ಜೆಡಿ ವರಿಷ್ಠ ಲಾಲುಪ್ರಸಾದ್‌ ಯಾದವ್‌ ಅವರ ಹಿರಿಯ ಪುತ್ರ ತೇಜ್‌ ಪ್ರತಾಪ್‌ ಯಾದವ್‌ ಅವರು ಶುಕ್ರವಾರ ಮಧ್ಯಾಹ್ನ ನಡೆದ ಅಪಘಾತದಲ್ಲಿ ಗಾಯಗೊಂಡಿದ್ದಾರೆ.

ಪಾಟ್ನಾದ ಇಕೋ ಪಾರ್ಕ್‌ ಬಳಿ ತೇಜ್‌ಪ್ರತಾಪ್‌ ಪ್ರಯಾಣಿಸುತ್ತಿದ್ದ ಕಾರು ಇನ್ನೊಂದು ಕಾರಿಗೆ ಢಿಕ್ಕಿಯಾಗಿದೆ.

ಮಾರುತಿ ಬ್ರೆಝಾ ಕಾರಿನಲ್ಲಿ ತೇಜ್‌ಪ್ರತಾಪ್‌ ಅವರು ಇಬ್ಬರು ಬೆಂಬಲಿಗರೊಂದಿಗೆ ಪ್ರಯಾಣಿಸುತ್ತಿದ್ದರು. ಬೆಂಬಲಿಗರಿಬ್ಬರಿಗೆ ತಲೆಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ತೇಜ್‌ ಪ್ರತಾಪ್‌ ಕಾಲಿಗೆ ಗಂಭೀರ ಗಾಯವಾಗಿದೆ.

ಎದುರಿಗಿದ್ದ ಕಾರಿನಲ್ಲಿದ್ದ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next