Advertisement

ಚಿಕ್ಕಮಗಳೂರು: ಕಾಫೀ ತೋಟದಲ್ಲಿ 14 ಅಡಿ ಉದ್ದದ ಹೆಬ್ಬಾವು ಸೆರೆ

02:47 PM Oct 31, 2020 | keerthan |

ಚಿಕ್ಕಮಗಳೂರು: ಇಲ್ಲಿನ ಮೈದಾಡಿ ಗ್ರಾಮದ ಮನೆಯೊಂದರ ಪಕ್ಕದ ಕಾಫಿ ತೋಟದಲ್ಲಿದ್ದ 14 ಅಡಿ ಉದ್ದದ ಹೆಬ್ಬಾವೊಂದು ಕಾಣಿಸಿಕೊಂಡಿದ್ದು, ನಂತರ ಅದನ್ನು ಸೆರೆ ಹಿಡಿದು ಕಾಡಿಗೆ ಬಿಡಲಾಯಿತು.

Advertisement

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಮೈದಾಡಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಇಲ್ಲಿನ ಶ್ರೀನಿವಾಸಗೌಡ ಎಂಬವರ ಕಾಫಿ ತೋಟದಲ್ಲಿ ಹೆಬ್ಬಾವು ಸೇರಿಕೊಂಡಿತ್ತು.

ಸುಮಾರು 14 ಅಡಿ ಉದ್ದವಿದ್ದ ಹೆಬ್ಬಾವನ್ನು ಕಂಡು ಶ್ರೀನಿವಾಸ ಗೌಡ ಅವರು ಉರಗ ಪ್ರೇಮಿ ರಿಜ್ವಾನ್ ಎಂಬವರನ್ನು ಕರೆಸಿದ್ದು, ಸ್ಥಳಕ್ಕಾಗಮಿಸಿದ ರಿಜ್ವಾನ್ ಹೆಬ್ಬಾವು ಸೆರೆ ಹಿಡಿದ್ದಾರೆ.

ಇದನ್ನೂ ಓದಿ:ಹಣಕಾಸು ವ್ಯವಹಾರದಲ್ಲಿ ವೈಮನಸ್ಸು: ಊಟ ಮಾಡಲು ಕರೆಸಿ ಕೊಲೆ, ಶವವನ್ನು ನದಿಗೆಸೆದ ಸ್ನೇಹಿತರು

ಸೆರೆಹಿಡಿದ ಈ ಭಾರಿ ಗಾತ್ರದ ಹೆಬ್ಬಾವನ್ನು ಕುದುರೆಮುಖ ಅರಣ್ಯಕ್ಕೆ ಬಿಡಲಾಗಿದೆ.

Advertisement

Advertisement

Udayavani is now on Telegram. Click here to join our channel and stay updated with the latest news.

Next