Advertisement

ರಾಜಧಾನಿ ಬಂಪರ್‌ ಕೊಡುಗೆ

05:49 AM Feb 09, 2019 | |

ಬೆಂಗಳೂರು: ಲೋಕಸಭಾ ಚುನಾವಣಾ ಹೊಸ್ತಿಲಲ್ಲಿ ಮಂಡನೆಯಾದ ರಾಜ್ಯ ಬಜೆಟ್‌ನಲ್ಲಿ ರಾಜಧಾನಿ ಬೆಂಗಳೂರಿಗೆ ಹಣದಹೊಳೆ ಹರಿದಿದೆ. ವಿವಿಧ ಸ್ಥಳೀಯ ಸಂಸ್ಥೆಗಳಿಗೆ ಒಟ್ಟಾರೆ ಈ ಬಾರಿಯ ಆಯವ್ಯಯದಲ್ಲಿ ಅಂದಾಜು 9,500 ಸಾವಿರ ಕೋಟಿ ರೂ. ದೊರೆತಿದೆ. 

Advertisement

ಬೆಂಗಳೂರಿಗೆ ಮತ್ತೂಂದು “ಕಾವೇರಿ’ ಹೊರತುಪಡಿಸಿದರೆ ಹೊಸದಾಗಿ ಯಾವುದೇ ಪ್ರಮುಖ ಯೋಜನೆಗಳು ಘೋಷಣೆ ಆಗಿಲ್ಲ. ಆದರೆ, ಈಗಾಗಲೇ ವಿವಿಧ ಹಂತದಲ್ಲಿರುವ ಯೋಜನೆಗಳಾದ “ನಮ್ಮ ಮೆಟ್ರೋ’, ಎತ್ತರಿಸಿದ ಸೇತುವೆ, ಪೆರಿಫೆರಲ್‌ ಹೊರವರ್ತುಲ ರಸ್ತೆ, ಮೇಲ್ಸೇತುವೆಗಳ ನಿರ್ಮಾಣಕ್ಕೆ ಹೆಚ್ಚಿನ ಅನುದಾನ ನೀಡಲಾಗಿದೆ.

ಬಜೆಟ್‌ನಲ್ಲಿ ಬೆಂಗಳೂರಿಗೆ ಒದಗಿಸಿರುವ ಅನುದಾನದಲ್ಲಿ ಬಿಬಿಎಂಪಿ ಹಾಗೂ ಬಿಎಂಆರ್‌ಸಿಗೆ ಸಿಂಹಪಾಲು ದೊರಕಿದ್ದು, ನವ ಬೆಂಗಳೂರು ಯೋಜನೆ, ಮೇಲ್ಸೇತುವೆ-ಕೆಳಸೇತುವೆ ಸೇರಿ ಹಲವು ಯೋಜನೆಗಳಿಗೆ ಒಟ್ಟಾರೆಯಾಗಿ 2,495 ಕೋಟಿ ರೂ. ಲಭ್ಯವಾಗಿದೆ. ಇದಲ್ಲದೆ, ಬೆಂಗಳೂರು ಉಪನಗರ ರೈಲು ಸೇವೆ, ಮೆಟ್ರೋ 2ನೇ ಹಂತ, ತ್ಯಾಜ್ಯ ನೀರು ಶುದ್ಧೀಕರಣ ಘಟಕಗಳ ನಿರ್ಮಾಣ, 110 ಹಳ್ಳಿಗಳ ಅಭಿವೃದ್ಧಿಗೆ ಯೋಜನೆ ರೂಪಿಸಿರುವುದಾಗಿ ಬಜೆಟ್‌ನಲ್ಲಿ ಉಲ್ಲೇಖೀಸಿದ್ದರೂ, ಸ್ಪಷ್ಟತೆಯಿಲ್ಲ. 

ಅಭಿವೃದ್ಧಿ ಪ್ರಾಧಿಕಾರ: ನಗರದಲ್ಲಿನ ವಾಹನ ದಟ್ಟಣೆ ನಿವಾರಣೆಗೆ ಸರ್ಕಾರದಿಂದ ಜಾರಿಗೊಳಿಸಲು ಮುಂದಾಗಿರುವ ಫೆರಿಫೆರಲ್‌ ಹೊರ ವರ್ತುಲ ರಸ್ತೆಯನ್ನು ನಿರ್ವಹಣಾ ವೆಚ್ಚ ಒಳಗೊಂಡಂತೆ 17,200 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿದೆ. ಅದರಂತೆ ಯೋಜನೆ ಅನುಷ್ಠಾನಕ್ಕಾಗಿ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ 1,000 ಕೋಟಿ ರೂ. ಒದಗಿಸಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next