Advertisement

ಇಂದಿನಿಂದ ನಿರ್ಣಾಯಕ ಟೆಸ್ಟ್: ಸಿರಾಜ್, ವಿಹಾರಿ ಔಟ್- ವಿರಾಟ್, ಉಮೇಶ್ ಇನ್

01:29 PM Jan 11, 2022 | Team Udayavani |

ಕೇಪ್ ಟೌನ್: ದಕ್ಷಿಣ ಆಫ್ರಿಕಾದಲ್ಲಿ ಮೊದಲ ಸಲ ಟೆಸ್ಟ್‌ ಸರಣಿ ಗೆಲುವಿನ ಸಂಭ್ರಮ ಆಚರಿಸಲು ಕಳೆದ ಮೂರು ದಶಕಗಳಿಂದ ಕಾಯುತ್ತಲೇ ಇರುವ ಭಾರತದ ಮುಂದೆ ಮತ್ತೂಂದು ಅವಕಾಶ ಎದುರಾಗಿದೆ. ಕೇಪ್‌ ಟೌನ್‌ ನ ನ್ಯೂಲ್ಯಾಂಡ್ಸ್‌ ಅಂಗಳದಲ್ಲಿ ಅಂತಿಮ ಟೆಸ್ಟ್‌ ಆರಂಭವಾಗಿದ್ದು, ಇದನ್ನು ಗೆದ್ದರೆ ಹರಿಣಗಳ ನಾಡಿನಲ್ಲಿ ಇತಿಹಾಸ ನಿರ್ಮಾಣವಾಗಲಿದೆ. ಪ್ರಸ್ತುತ ಸರಣಿ 1-1 ಸಮಬಲದಲ್ಲಿ ನೆಲೆಸಿರುವ ಕಾರಣ ಕೇಪ್‌ಟೌನ್‌ ಕೌತುಕ ಪರಾಕಾಷ್ಠೆ ತಲುಪಿದೆ.

Advertisement

ಟಾಸ್ ಗೆದ್ದ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ:ಪುಷ್ಪ ಸಕ್ಸಸ್‌ ಎಫೆಕ್ಟ್; ರಶ್ಮಿಕಾ ಮಂದಣ್ಣ ಸಂಭಾವನೆ ಏರಿಕೆ!

ಇಂದಿನ ಪಂದ್ಯಕ್ಕೆ ಭಾರತ ತಂಡದಲ್ಲಿ ಎರಡು ಬದಲಾವಣೆ ಮಾಡಲಾಗಿದೆ. ಕಳೆದ ಪಂದ್ಯವನ್ನು ತಪ್ಪಿಸಿಕೊಂಡಿದ್ದ ವಾಪಾಸಾಗಿದ್ದು, ಅವರಿಗಾಗಿ ಹನುಮ ವಿಹಾರಿ ಜಾಗ ತೊರೆದಿದ್ದಾರೆ. ಗಾಯಗೊಂಡಿರುವ ವೇಗಿ ಮೊಹಮ್ಮದ್ ಸಿರಾಜ್ ಬದಲಿಗೆ  ಉಮೇಶ್ ಯಾದವ್ ತಂಡದಲ್ಲಿ ಸ್ಥಾನ ಸಂಪಾದಿಸಿದ್ದಾರೆ.

ತಂಡಗಳು

Advertisement

ಭಾರತ: ಕೆ.ಎಲ್‌. ರಾಹುಲ್‌, ಮಾಯಾಂಕ್‌ ಅಗರ್ವಾಲ್‌, ಚೇತೇಶ್ವರ್‌ ಪೂಜಾರ, ವಿರಾಟ್‌ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ರಿಷಭ್‌ ಪಂತ್‌, ಆರ್‌. ಅಶ್ವಿ‌ನ್‌, ಶಾರ್ದೂಲ್ ಠಾಕೂರ್‌, ಮೊಹಮ್ಮದ್‌ ಶಮಿ, ಜಸ್‌ಪ್ರೀತ್‌ ಬುಮ್ರಾ, ಉಮೇಶ್‌ ಯಾದವ್‌.

ದಕ್ಷಿಣ ಆಫ್ರಿಕಾ: ಡೀನ್‌ ಎಲ್ಗರ್‌ (ನಾಯಕ), ಐಡನ್‌ ಮಾರ್ಕ್‌ರಮ್‌, ಕೀಗನ್‌ ಪೀಟರ್‌ ಸನ್‌, ರಸ್ಸಿ ವಾನ್‌ ಡರ್‌ ಡುಸೆನ್‌, ಟೆಂಬ ಬವುಮ, ಕೈಲ್‌ ವೆರೇಯ್ನ, ಮಾರ್ಕೊ ಜಾನ್ಸೆನ್‌, ಕೇಶವ್‌ ಮಹಾರಾಜ್‌, ಕಾಗಿಸೊ ರಬಾಡ, ಡ್ನೂನ್‌ ಒಲಿವರ್‌, ಲುಂಗಿ ಎನ್‌ಗಿಡಿ

Advertisement

Udayavani is now on Telegram. Click here to join our channel and stay updated with the latest news.

Next