Advertisement

ಗಂಡನ ಕಿರುಕುಳ ತಾಳಲಾರದೇ ಅಮೆರಿಕದಲ್ಲಿ ಆತ್ಮಹತ್ಯೆಗೆ ಶರಣಾದ ಭಾರತೀಯ ಮಹಿಳೆ

08:53 AM Aug 07, 2022 | Team Udayavani |

ನ್ಯೂಯಾರ್ಕ್ : ಗಂಡನಿಂದ ಕಿರುಕುಳ ತಾಳಲಾರದೇ ಭಾರತೀಯ ಮಹಿಳೆಯೊಬ್ಬರು ಅಮೇರಿಕಾದಲ್ಲಿ ಆತ್ಮಹತ್ಯೆಗೆ ಶಾರಣಾಗಿರುವ ಘಟನೆ ನಡೆದಿದೆ.

Advertisement

ಸಾಯುವ ಮುನ್ನ ತಾನು ಅನುಭವಿಸಿದ ಕಷ್ಟವನ್ನು ವಿಡಿಯೋದಲ್ಲಿ ಹೇಳಿಕೊಂಡಿದ್ದು, ಈ ವಿಡಿಯೋವನ್ನು ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದಾಳೆ.

ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯ ಮಂದೀಪ್ ಕೌರ್ 2015ರಲ್ಲಿ ರಂಜೋದ್ಬೀರ್ ಸಿಂಗ್ ಸಂಧು ಎಂಬುವರನ್ನು ಮದುವೆಯಾದರು. ಆ ಬಳಿಕ ನ್ಯೂಯಾರ್ಕ್‌ ಗೆ ತೆರಳಿ ಅಲ್ಲಿ ನೆಲೆಸಿದ್ದರು ಅಲ್ಲಿಂದ ಶುರುವಾದ ಕಿರುಕುಳ ಇಂದಿನವರೆಗೂ ಸಹಿಸಿಕೊಂಡು ಬಂದಿದ್ದನ್ನು ಕೌರ್ ವೀಡಿಯೋದಲ್ಲಿ ಕೌರ್ ಎಳೆ ಎಳೆಯಾಗಿ ಹೇಳಿಕೊಂಡಿದ್ದಾರೆ. ತಾನು ಹಲವಾರು ವರ್ಷಗಳಿಂದ ಗಂಡನ ಕಿರುಕುಳವನ್ನು ಸಹಿಸಿಕೊಂಡು ಬಂದಿದ್ದೇನೆ ಆದರೆ ಇನ್ನು ಮುಂದೆ ಕಿರುಕುಳ ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಆಕೆಯ ಪತಿ ರಂಜೋಧಬೀರ್ ಸಿಂಗ್ ಸಂಧು ಟ್ರಕ್ ಚಾಲಕನಾಗಿದ್ದು. ನಾನು ತುಂಬಾ ದಯನೀಯ ಸ್ಥಿತಿಯಲ್ಲಿದ್ದೇನೆ. ನಾನು ನನ್ನ ಕೈಲಾದಷ್ಟು ಪ್ರಯತ್ನಿಸಿದೆ ಆದರೆ ಈಗ ನಿತ್ಯ ಹೊಡೆತಗಳನ್ನು ಸಹಿಸಲಾಗುತ್ತಿಲ್ಲ. ಎಂಟು ವರ್ಷಗಳಿಂದ, ನಾನು ಪ್ರತಿದಿನ ಹೊಡೆತಗಳನ್ನು ಅನುಭವಿಸುತ್ತಿದ್ದೇನೆ. ಗಂಡನ ಒಂದಲ್ಲ ಒಂದು ದಿನ ಬದಲಾಗುತ್ತಾನೆ ಎಂಬ ಭರವಸೆಯಿಂದ ಅವನ ಕೆಟ್ಟ ನಡವಳಿಕೆಯನ್ನು ಸಹಿಸಿಕೊಂಡಿದ್ದೆ. ಆದರೆ ನನ್ನ ನಂಬಿಕೆ ಸುಳ್ಳಾಯಿತು ಎಂದು ಕಣ್ಣೀರಿಟ್ಟಿದ್ದಾರೆ.

Advertisement

ಇದನ್ನೂ ಓದಿ : ಶೆಡ್ ಮೇಲೆ ಪಕ್ಕದ ಮನೆಯ ಗೋಡೆ ಕುಸಿದು ಇಬ್ಬರು ಮಕ್ಕಳ ದಾರುಣ ಸಾವು, ಇಬ್ಬರು ಮಹಿಳೆಯರಿಗೆ ಗಾಯ

ದಂಪತಿಗೆ 6 ಮತ್ತು 4 ವರ್ಷದ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಮಕ್ಕಳು ಹೆಣ್ಣಾಗಿ ಹುಟ್ಟಿದ್ದಾರೆ ಎಂಬ ಕಾರಣಕ್ಕೆ ಗಂಡ ದಿನನಿತ್ಯ ದೈಹಿಕ ಮತ್ತು ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾನೆ ಎಂದು ಮಂದೀಪ್ ವಿಡಿಯೋದಲ್ಲಿ ಹೇಳಿಕೊಂಡಿದ್ದಾಳೆ. ಆಗಸ್ಟ್​ 4ರಂದು ಮಂದೀಪ್ ಆತ್ಮಹತ್ಯೆಗೆ ಶರಣಾಗಿದ್ದಾರೆ.

ವಿಷಯ ತಿಳಿದ ಮಂದೀಪ್ ತಂದೆ ಜಸ್ಪಾಲ್ ಸಿಂಗ್ ಅವರು ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪತಿ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣವನ್ನು ದಾಖಲಿಸಿದ್ದಾರೆ. ಮದುವೆಯಾದಾಗಿನಿಂದ ಮಗಳ ಮೇಲೆ ದೌರ್ಜನ್ಯ ನಡೆಯುತ್ತಿತ್ತು ಎಂದು ಕುಟುಂಬ ಹೇಳಿದೆ.

ಇದೀಗ, ಕುಟುಂಬ ತಮ್ಮ ಮಗಳ ಮೃತದೇಹವನ್ನು ಭಾರತಕ್ಕೆ ಕರೆತರಲು ಕೇಂದ್ರ ಸರ್ಕಾರದ ಮೊರೆ ಹೋಗಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ನ್ಯೂಯಾರ್ಕ್‌ನಲ್ಲಿರುವ ಭಾರತದ ಕಾನ್ಸುಲೇಟ್ ಜನರಲ್ ʻನಾವು ಯುಎಸ್ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದೇವೆ. ನಾವು ನಿಮಗೆ ಎಲ್ಲಾ ರೀತಿಯ ಸಹಾಯ ಮಾಡಲು ಸಿದ್ಧರಾಗಿದ್ದೇವೆʼ ಎಂದಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next