Advertisement

ಒಂದೇ ಧರ್ಮಕ್ಕೆ ಪ್ರಾರ್ಥನ ಕಾಯ್ದೆ ಅನ್ವಯ ಸಾಧ್ಯವಿಲ್ಲ: ಸುಪ್ರೀಂ

12:33 AM Jul 31, 2022 | Team Udayavani |

ಹೊಸದಿಲ್ಲಿ: ಒಂದೇ ಧರ್ಮದ 2 ಪಂಗಡಗಳ ನಡುವೆ ಪ್ರಾರ್ಥನ ಸ್ಥಳಗಳ ಕುರಿತ ವಿವಾದದಲ್ಲಿ 1991ರ ಪ್ರಾರ್ಥನಾ ಸ್ಥಳಗಳ ಕಾಯ್ದೆ ಜಾರಿಗೊಳಿಸುವಂತಿಲ್ಲ ಎಂಬ ತೀರ್ಪನ್ನು ಸುಪ್ರೀಂ ನೀಡಿದೆ.

Advertisement

ಜೈನ್‌ ಸಮುದಾಯದ ಶರದ್‌ ಝವೇರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯ ಸಂದರ್ಭ ದಲ್ಲಿ ನ್ಯಾಯಪೀಠ ಹೀಗೆ ತೀರ್ಪಿತ್ತಿದೆ.

ಪ್ರಾರ್ಥನ ಸ್ಥಳವೊಂದು ತಮಗೆ ಸೇರಬೇಕೆಂದು ಜೈನರ ಶ್ವೇತಾಂಬರ ಮೂರ್ತಿಪೂಜಕ್‌ ಪಂಥದ ತಪೋಗಚ್ಚ್ ಪಂಗಡಗ ಮೊಹಜಿತ್‌ ಸಮುದಾಯವರು ಸುಪ್ರೀಂ ಮೆಟ್ಟಿಲೇರಿದ್ದರು. “ಇಡೀ ದೇಶದಲ್ಲಿ ತಪೋಗಚ್ಚ್ ಪಂಗಡದಿಂದ ನಿರ್ವಹಿಸಲ್ಪಡುತ್ತಿರುವ ಎಲ್ಲ ಪ್ರಾರ್ಥನ ಸ್ಥಳಗಳನ್ನು ಕೇವಲ ತಪೋಗಚ್ಚ್ ಪಂಗಡ ದವರಿಗೆ ಮೀಸಲಿರಿಸಬೇಕು. ಇತರ ಪಂಗಡಗಳ ಪ್ರಾರ್ಥನೆಗೆ ಅವಕಾಶ ಕಲ್ಪಿಸ ಬಾರದು. ಅದಕ್ಕಾಗಿ 1991ರ ಪ್ರಾರ್ಥನ ಸ್ಥಳಗಳ ಕಾಯ್ದೆ ಜಾರಿಗೊಳಿಸಬೇಕು’ ಎಂದು ಮನವಿ ಮಾಡಲಾಗಿತ್ತು. ಇದನ್ನು ನ್ಯಾಯಪೀಠ ಮಾನ್ಯ ಮಾಡಲಿಲ್ಲ.

 

Advertisement

Udayavani is now on Telegram. Click here to join our channel and stay updated with the latest news.

Next