Advertisement

ದೇಶದ ಪರ ಆಡಿ ಎಂದು ಬೇಡಲು ಆಗುತ್ತದೆಯೇ..?: ಅಳಲು ತೋಡಿಕೊಂಡ ವಿಂಡೀಸ್ ಕೋಚ್

10:00 AM Aug 11, 2022 | Team Udayavani |

ಟ್ರಿನಿಡಾಡ್: ರಾಷ್ಟ್ರೀಯ ತಂಡದ ಬದಲು ವಿದೇಶಿ ಟಿ20 ಲೀಗ್ ಗಳಲ್ಲಿ ಆಡುವ ಆಟಗಾರರ ಕುರಿತು ವೆಸ್ಟ್ ಇಂಡೀಸ್ ಕ್ರಿಕೆಟ್ ಕೋಚ್ ಫಿಲ್ ಸಿಮನ್ಸ್ ಬೇಸರಗೊಂಡಿದ್ದಾರೆ. ದೇಶದ ಪರವೇ ಆಡಿ ಎಂದು ಅವರ ಬಳಿ ಬೇಡಲು ಆಗುತ್ತದೆಯೇ ಎಂದು ಅವರು ಅಳಲು ತೋಡಿಕೊಂಡಿದ್ದಾರೆ.

Advertisement

ವೆಸ್ಟ್ ಇಂಡೀಸ್ ಹೆಚ್ಚಿನ ಪ್ರಮುಖ ಆಟಗಾರರು ಫ್ರಾಂಚೈಸಿ ಕ್ರಿಕೆಟ್ ಆಡುತ್ತಿದ್ದಾರೆ ಅಥವಾ ಗಾಯಗೊಂಡಿದ್ದಾರೆ. ಹೀಗಾಗಿ ದೇಶದ ತಂಡದ ಪ್ರದರ್ಶನ ಕಡಿಮೆಯಾಗಿದೆ. ಹೀಗೆ ಮುಂದುವರಿದರೆ ಟಿ20 ವಿಶ್ವಕಪ್ ಗೆ ತಂಡ ಕಟ್ಟುವುದಾದರೂ ಹೇಗೆ ಎಂದು ಫಿಲ್ ಸಿಮನ್ಸ್ ಬೇಸರಗೊಂಡಿದ್ದಾರೆ.

“ಏನು ಮಾಡುವುದು? ದೇಶದ ತಂಡದ ಪರ ಆಡಿ ಎಂದು ನಾನು ಕೇಳಬಹುದೇ? ಅವರಾಗಿಯೇ ವೆಸ್ಟ್ ಇಂಡೀಸ್ ಪರ ಆಡಬೇಕೆಂದು ಮನಸು ಮಾಡಬೇಕು” ಎಂದು ಸಿಮನ್ಸ್ ಹೇಳಿಕೊಂಡಿದ್ದಾರೆ.

ಬದುಕು ಬದಲಾಗಿದೆ. ವಿಶ್ವದ ಮೂಲೆಮೂಲೆಗಳಲ್ಲಿ ಅವಕಾಶ ಸಿಗುತ್ತಿದೆ. ಅವರು ವೆಸ್ಟ್ ಇಂಡೀಸ್ ಬದಲಾಗಿ ಅದನ್ನು ಆಯ್ಕೆ ಮಾಡಿಕೊಂಡರೆ ಹೀಗೆ ಆಗುತ್ತದೆ ಎಂದರು.

ಇದನ್ನೂ ಓದಿ:ಚೀನದಲ್ಲಿ ಕಂಡುಬಂದಿದೆ ಲಂಗ್ಯಾ ವೈರಸ್‌!

Advertisement

ಸ್ಟಾರ್ ಆಲ್‌ರೌಂಡರ್ ಆಂಡ್ರೆ ರಸೆಲ್ ಮತ್ತು ಸುನಿಲ್ ನರೈನ್ ಪ್ರಸ್ತುತ ಹಂಡ್ರೆಡ್ ನಲ್ಲಿ ಆಡುತ್ತಿದ್ದಾರೆ. ಹೀಗಾಗಿ ಅವರು ದೇಶದ ತಂಡಕ್ಕೆ ಲಭ್ಯವಾಗುತ್ತಿಲ್ಲ. ಎವಿನ್ ಲೆವಿಸ್ ಮತ್ತು ಒಶೇನ್ ಥಾಮಸ್ ಫಿಟ್ನೆಸ್ ಪರೀಕ್ಷೆಗೆ ಹಾಜರಾಗಿಲ್ಲ. ಆದರೆ ಶೆಲ್ಡನ್ ಕಾಟ್ರೆಲ್, ಫ್ಯಾಬಿಯನ್ ಅಲೆನ್ ಮತ್ತು ರೋಸ್ಟನ್ ಚೇಸ್ ಅವರು ಗಾಯದಿಂದ ಹೊರಗುಳಿದಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next