Advertisement

Gujarat: ಭಾರೀ ಮಳೆಗೆ ರಾಜ್‌ ಕೋಟ್‌ ಏರ್‌ ಪೋರ್ಟ್‌ ಟರ್ಮಿನಲ್ ನ ಕೆನೋಪಿ ಕುಸಿತ

04:12 PM Jun 29, 2024 | Team Udayavani |

ಅಹಮದಾಬಾದ್:‌ ನವದೆಹಲಿಯ  ಏರ್‌ ಪೋರ್ಟ್‌ ನ ಟರ್ಮಿನಲ್‌ 1ರ ಕೆನೋಪಿ ಮೇಲ್ಛಾವಣಿ ಕುಸಿದು ಬಿದ್ದ ಘಟನೆ ನಡೆದ ಬೆನ್ನಲ್ಲೇ, ಧಾರಾಕಾರ ಮಳೆಯಿಂದಾಗಿ ಗುಜರಾತ್‌ ನ ರಾಜಕೋಟ್‌ ವಿಮಾನ ನಿಲ್ದಾಣದ ಹೊರಭಾಗದ ಕೆನೋಪಿ ಕುಸಿದು ಬಿದ್ದಿರುವ ಘಟನೆ ಶನಿವಾರ (ಜೂನ್‌ 29) ನಡೆದಿದೆ.

Advertisement

ಇದನ್ನೂ ಓದಿ:Martin ಮುಂದೆ ಯಾರೇ ಬರಲಿ ನೋ ಪ್ರಾಬ್ಲಂ…: ನಿರ್ಮಾಪಕ ಉದಯ್‌ ಮೆಹ್ತಾ

ಘಟನೆಯಲ್ಲಿ ಯಾವುದೇ ಅನಾಹುತದ ಬಗ್ಗೆ ವರದಿಯಾಗಿಲ್ಲ. ಕುಸಿದು ಬಿದ್ದ ಕೆನೋಪಿಯನ್ನು ವಿಮಾನ ನಿಲ್ದಾಣದ ಅಧಿಕಾರಿಗಳು ಪರಿಶೀಲಿಸುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ.

ಭಾರೀ ಮಳೆಯಿಂದಾಗಿ ಪ್ರಯಾಣಿಕರನ್ನು ಪಿಕಪ್‌ ಹಾಗೂ ಡ್ರಾಪ್‌ ಮಾಡುವ ಟರ್ಮಿನಲ್‌ ಹೊರಭಾಗದಲ್ಲಿ ಈ ಘಟನೆ ಸಂಭವಿಸಿದೆ ಎಂದು ವರದಿ ವಿವರಿಸಿದೆ.

ದೆಹಲಿ ವಿಮಾನ ನಿಲ್ದಾಣದ ಟರ್ಮಿನಲ್‌ 1ರ ಮೇಲ್ಛಾವಣಿ ಕುಸಿದು ಬಿದ್ದ ಘಟನೆಯಲ್ಲಿ ಓರ್ವ ಸಾವನ್ನಪ್ಪಿದ್ದು, ಕೆಲವರು ಗಾಯಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next