ಬೆಂಗಳೂರು: ನಮ್ಮ ಮತಗಳನ್ನು ಅಷ್ಟು ಸುಲಭವಾಗಿ ಒಡೆಯಲು ಸಾಧ್ಯವಿಲ್ಲ. ನಮ್ಮ ಪಕ್ಷದ ಶಾಸಕರಿಗೂ ಆತ್ಮಸಾಕ್ಷಿಯಿದೆ ಎಂದು ಕಾಂಗ್ರೆಸ್ ವಿರುದ್ಧ ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಜೆಪಿ ಭವನದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಆತ್ಮಸಾಕ್ಷಿಯ ಮತಗಳ ಬಗ್ಗೆ ಸಿದ್ದರಾಮಣ್ಣ ಮಾತನ್ನಾಡಿದ್ದಾರೆ. ನಮ್ಮ ಪಕ್ಷದ ಶಾಸಕರಿಗೂ ಆತ್ಮಸಾಕ್ಷಿ ಇದೆ. ನಮ್ಮ ಶಾಸಕರ ಮತಗಳನ್ನ ಒಡೆಯಲು ಸಾಧ್ಯವಿಲ್ಲ. ಒಂದಿಬ್ಬರು ಶಾಸಕರಲ್ಲಿ ಅಸಮಾಧಾನ ಇರಬಹುದು. ಈಗ ಎಲ್ಲವೂ ಬಗೆಹರಿದಿದೆ ಎಂದು ಹೇಳಿದರು.
ಐದಾರು ದಿನಗಳ ಹಿಂದೆ ಇಂದಿಗೂ ಜೆಡಿಎಸ್ ಚಿಹ್ನೆ ಮೇಲೆ ಗೆದ್ದಿದ್ದೇನೆ ಎಂದು ಜಿ.ಟಿ ದೇವೇಗೌಡ ಹೇಳಿದ್ದಾರೆ. ಹಾಗಾಗಿ ಪಕ್ಷದ ಶಾಸಕರ ಮತಗಳು ಬೇರೆ ಕಡೆ ಹೋಗುವುದಿಲ್ಲ. ಕಾಂಗ್ರೆಸ್ ನಿಂದ ನಮ್ಮ ಪಕ್ಷದ ಮತಗಳನ್ನ ಸೆಳೆಯಲು ಸಾಧ್ಯವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ:ಚಾಮುಂಡೇಶ್ವರಿಯ ಮತದಾರರು ಸಿದ್ದರಾಮಯ್ಯ ಚಡ್ಡಿ,ಪಂಚೆ ಕಳಚಿದ್ದಾರೆ: ಸಚಿವ ಜೋಶಿ
Related Articles
ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡುತ್ತೇನೆ. ಎಲ್ಲಾ ಜಿಲ್ಲಾ ಕೇಂದ್ರಗಳಿಗೂ ಭೇಟಿ ನೀಡುತ್ತೇನೆ. ನನ್ನ ಸ್ಪರ್ಧೆ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ. ರಾಮನಗರದಲ್ಲಿ ಸ್ಪರ್ಧಿಸುವುದು ದೂರದ ಮಾತು. ನನಗೆ ಪಕ್ಷ ಜವಾಬ್ದಾರಿ ನೀಡಿದೆ. ಮೊದಲು ಪಕ್ಷದ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ. ಪಕ್ಷ ಸಂಘಟನೆಯೇ ನನ್ನ ಮೊದಲ ಆದ್ಯತೆ. ಉತ್ತರ ಕರ್ನಾಟಕ ಭಾಗದಿಂದ ಪ್ರವಾಸ ಕೈಗೊಳ್ಳುತ್ತೇನೆ ಎಂದು ಹೇಳಿದರು