Advertisement

ಗಾಂಜಾ ಸಾಗಾಟ: ಮೂವರ ಬಂಧನ

10:55 AM Jul 27, 2019 | keerthan |

ಉಳ್ಳಾಲ: ತೊಕ್ಕೊಟ್ಟು ಬಳಿ ಗಾಂಜಾ ಸಾಗಾಟ ಮಾಡುತ್ತಿದ್ದ ಜಾಲವನ್ನು ರೌಡಿ ನಿಗ್ರಹ ದಳದ ಸಿಬಂದಿ ಭೇದಿಸಿ ಮೂವರನ್ನು ಬಂಧಿಸಿ, ಸುಮಾರು 1 ಲ. ರೂ. ಮೌಲ್ಯದ ಸೊತ್ತನ್ನು ವಶಪಡಿಸಿ ಕೊಂಡಿದ್ದಾರೆ.

Advertisement

ವಾಮಂಜೂರು ಆಶ್ರಯ ಕಾಲನಿ ನಿವಾಸಿ ಮಹಮ್ಮದ್‌ ಮುಸ್ತಫಾ (21), ಉಳಾಯಿಬೆಟ್ಟು ಆಚಾರಿಬೆಟ್ಟು ನಿವಾಸಿ ಹಸನ್‌ ಅಫ್ರಾನ್‌ (20)ಮತ್ತು ಮೂಡುಶೆಡ್ಡೆ ಶಿವನಗರ ಬದ್ರಿಯಾ ಮಸೀದಿ ಬಳಿಯ ಫೈಜಲ್‌ ಆಹಮ್ಮದ್‌ (36) ಬಂಧಿತರು. ಇದರಲ್ಲಿ ಭಾಗಿಯಾಗಿರುವ ಇನ್ನೊಬ್ಬನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಸ್ಕೂಟರ್‌ನಲ್ಲಿ ಗಾಂಜಾ ಸಾಗಾಟದ ಮಾಹಿತಿ ಪಡೆದ ಮಂಗಳೂರು ದಕ್ಷಿಣ ಸಹಾಯಕ ಪೊಲೀಸ್‌ ಆಯುಕ್ತ ಟಿ. ಕೋದಂಡರಾಮ್‌ ನೇತೃತ್ವದ ರೌಡಿ ನಿಗ್ರಹ ದಳದ ಪೊಲೀಸರು ತೊಕ್ಕೊಟ್ಟು ನಾಗನಕಟ್ಟೆ ಬಳಿ ಶಂಕಿತ ಸ್ಕೂಟರನ್ನು ತಡೆದು ಪರಿಶೀಲಿಸಿದಾಗ 4 ಕೆ.ಜಿ. ಗಾಂಜಾ ಪತ್ತೆಯಾಗಿದೆ. ಉಳ್ಳಾಲ ಸರ್ಕಲ್‌ ಇನ್‌ಸ್ಪೆಕ್ಟರ್‌ ಗೋಪಿಕೃಷ್ಣ ಕೂಡ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.
ಆರೋಪಿಗಳ ಪೈಕಿ ಮುಸ್ತಫಾ ವಿರುದ್ಧ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಕೊಲೆ ಮತ್ತು ಕೊಲೆ ಯತ್ನ ಸಹಿತ ಮೂರು ಪ್ರಕರಣಗಳಿವೆ. ಫೈಜಲ್‌ ಅಹಮ್ಮದ್‌ ವಿರುದ್ಧ ಗ್ರಾಮಾಂತರ ಠಾಣೆಯಲ್ಲಿ ಕೊಲೆ, ಕಳ್ಳತನ ಮತ್ತು ಗಾಂಜಾ ಮಾರಾಟ ಪ್ರಕರಣ ದಾಖಲಾಗಿವೆ.

ಮಂಗಳೂರು ನಗರ ಪೊಲೀಸ್‌ ಆಯುಕ್ತ ಸಂದೀಪ್‌ ಪಾಟೀಲ್‌ ನಿರ್ದೇಶನದಂತೆ, ಕಾನೂನು ಮತ್ತು ಸುವ್ಯವಸ್ಥೆ ಉಪ ಆಯುಕ್ತ ಹನುಮಂತರಾಯ ಮತ್ತು ಅಪರಾಧ ಮತ್ತು ಸಂಚಾರ ವಿಭಾಗ ಉಪ ಆಯುಕ್ತ ಲಕ್ಷ್ಮೀ ಗಣೇಶ್‌ ಅವರ ಮಾರ್ಗದರ್ಶನದಲ್ಲಿ, ದಕ್ಷಿಣ ಉಪ ವಿಭಾಗದ ಸಹಾಯಕ ಪೊಲೀಸ್‌ ಆಯುಕ್ತ ಟಿ. ಕೊದಂಡರಾಮ್‌ ಅವರ ನೇತೃತ್ವದ ಮಂಗಳೂರು ದಕ್ಷಿಣ ಉಪ ವಿಭಾಗದ ರೌಡಿ ನಿಗ್ರಹದಳದ ಸಿಬ್ಬಂದಿಯವರು ಮತ್ತು ಉಳ್ಳಾಲ ಪೊಲೀಸ್‌ ನಿರೀಕ್ಷಕ ಗೋಪಿಕೃಷ್ಣ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next