Advertisement

ಕ್ಯಾನ್ಸರ್‌ ಚಿಕಿತ್ಸೆ: ನೆರವಿಗೆ ಮನವಿ

09:23 PM Sep 22, 2019 | Sriram |

ನಗರ: ಬಡ ಕುಟುಂಬದ ಮಹಿಳೆಯೊಬ್ಬರು ಎರಡು ವರ್ಷಗಳಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ದಂಪತಿ ಮಾತ್ರ ಇರುವ ಈ ಕುಟುಂಬ ಈಗ ಮನೆಯ ಬಾಡಿಗೆ ನೀಡಲು ಮತ್ತು ಔಷಧ ಖರೀದಿಸಲು ಹಣವಿಲ್ಲದೆ ಸಂಕಷ್ಟ ಎದುರಿಸುತ್ತಿದ್ದು, ಸಹೃದಯಿಗಳ ಸಹಾಯ ಯಾಚಿಸಿದ್ದಾರೆ.

Advertisement

ನಗರದ ಹೊರವಲಯದ ಪರ್ಲಡ್ಕದ ಬಾಡಿಗೆ ಮನೆಯಲ್ಲಿ ವಾಸ್ತವ್ಯವಿರುವ, ಮೂಲತಃ ತೆಂಕಿಲ ನಿವಾಸಿ ಜನಾರ್ದನ ಗೌಡ ಅವರ ಪತ್ನಿ ಪಿ. ಗಿರಿಜಾ (54) ಅವರಿಗೆ ಎರಡು ವರ್ಷಗಳ ಹಿಂದೆ ವಿಪರೀತ ತಲೆನೋವು ಆರಂಭವಾಗಿತ್ತು. ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುವ ಸಂದರ್ಭ ತಲೆಯ ಭಾಗದಲ್ಲಿ ಕ್ಯಾನ್ಸರ್‌ ಗಡ್ಡೆ ಇರುವುದು ಖಚಿತವಾಗಿತ್ತು. ಬಳಿಕ ಅವರನ್ನು ಬೆಂಗಳೂರಿನ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನ ಸಂಸ್ಥೆ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ಯಲಾಗಿತ್ತು. ಅಲ್ಲಿನ ನರಶಸ್ತ್ರ ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ| ಪಿ.ಜಿ. ಗಿರೀಶ್‌ ಅವರ ಸಲಹೆಯಂತೆ 2018ರ ಜನವರಿಯಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಅಲ್ಲಿನ ಶಸ್ತ್ರ ಚಿಕಿತ್ಸೆ ಮತ್ತು ಔಷಧ ಉಚಿತವಾಗಿದ್ದವು.

ಬಾಡಿಗೆ ಮನೆಯಲ್ಲಿದ್ದು ಕೂಲಿ ಕೆಲಸಕ್ಕೆ ಹೋಗುತ್ತಿದ್ದ ಜನಾರ್ದನ ಅವರು ಪತ್ನಿ ಅನಾರೋಗ್ಯಕ್ಕೆ ತುತ್ತಾದ ಬಳಿಕ ಆರೈಕೆಯಲ್ಲೇ ಸಮಯ ಕಳೆಯುವಂತಾಗಿದೆ. ಉಚಿತ ಔಷಧ ಪಡೆಯಬೇಕಾದರೆ ತಿಂಗಳಿಗೊಮ್ಮೆ ಬೆಂಗಳೂರಿನ ಆಸ್ಪತ್ರೆಗೆ ಹೋಗಿ ಬರಬೇಕಾಗುತ್ತದೆ. ಇಲ್ಲೇ ಔಷಧ ಪಡೆಯಲು ತಿಂಗಳಿಗೆ 2,000 ರೂ. ಬೇಕಾಗುತ್ತದೆ. ಬಾಡಿಗೆ ಮನೆಯ ಮಾಲಕರು ಕರುಣೆ ತೋರಿದ್ದರಿಂದ ಬದುಕಿದ್ದೇವೆ ಎನ್ನುವ ಜನಾರ್ದನ, ಆರ್ಥಿಕ ಸಹಾಯಕ್ಕಾಗಿ ಮನವಿ ಮಾಡಿದ್ದಾರೆ.

ನೆರವು ನೀಡಿ
ದಾನಿಗಳು ಪುತ್ತೂರು ಕಾರ್ಪೊರೇಶನ್‌ ಬ್ಯಾಂಕ್‌ನಲ್ಲಿ ಪಿ. ಗಿರಿಜಾ ಅವರ ಹೆಸರಿನಲ್ಲಿರುವ ಎಸ್‌ಬಿ ಖಾತೆ 520101009938288 – ಐಎಫ್‌ಎಸ್‌ಸಿ ಕೋಡ್‌: 0000224 ಇದಕ್ಕೆ ಹಣ ಕಳುಹಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next