Advertisement

ನನ್ನ ಮಗನಿಗೆ ಕ್ಯಾನ್ಸರ್‌ ಇದೆಯಂತೆ…

12:49 PM Feb 21, 2021 | Team Udayavani |

ಬಾಲ್ಯ ಎಂದರೆ ಆಸೆಗಳು, ಇಚ್ಛೆಗಳು, ಕನಸುಗಳು ಮತ್ತು ಅನಂತ ಸಾಧ್ಯತೆಗಳ ಕಾಲಾವಧಿ. ಆದರೆ ಕ್ಯಾನ್ಸರ್‌ಪೀಡಿತ ಮಕ್ಕಳಿಗೆ ಅದು ಬದುಕಿಗಾಗಿ ಬದುಕಿನ ಜತೆಗೆ ಹೋರಾಟ. ಅಂಥ ಮಕ್ಕಳು ತಮ್ಮ ಅನಾರೋಗ್ಯವನ್ನು ಸರಿಗಟ್ಟಲಾಗದ ಧೈರ್ಯ ಮತ್ತು ಸ್ವೀಕಾರ ಭಾವನೆಯೊಂದಿಗೆ ಎದುರಿಸುತ್ತಾರೆ, ಅದು ನಮ್ಮನ್ನು ವಿನೀತ ಗೊಳಿಸುತ್ತದೆ.
ಪ್ರತೀ ವರ್ಷ 0ಯಿಂದ 16 ವರ್ಷದೊಳ ಗಿನ ವಯೋ ಮಾನದ ಸುಮಾರು 40 ಸಾವಿರ ಮಕ್ಕಳು ಕ್ಯಾನ್ಸರ್‌ ಹೊಂದಿರುವುದು ಪತ್ತೆಯಾಗುತ್ತಿದೆ. ಕ್ಯಾನ್ಸರ್‌ ಪೀಡಿತ ಮಕ್ಕಳಲ್ಲಿ ಕ್ಯಾನ್ಸರ್‌ನ ಚಿಹ್ನೆಗಳು ಅದು ಯಾವ ವಿಧದ್ದು ಮತ್ತು ಯಾವ ಅಂಗವನ್ನು ಬಾಧಿಸುತ್ತಿದೆ ಎನ್ನುವುದನ್ನು ಆಧರಿಸಿರುತ್ತವೆ. ಸಾಮಾನ್ಯವಾಗಿ ಈ ಚಿಹ್ನೆಗಳು ತುಂಬಾ ಲಘುವಾಗಿರುತ್ತವೆ, ವಿಭಿನ್ನವಾಗಿರುತ್ತವೆ ಮತ್ತು ಕ್ಯಾನ್ಸರ್‌ ಅಲ್ಲದೆ ಬೇರೆಯದೇ ಕಾರಣದಿಂದ ಉಂಟಾಗಿರುತ್ತವೆ. ಹೀಗಾಗಿ ಅನೇಕ ಸಂದರ್ಭಗಳಲ್ಲಿ ಇಂಥವರು ಕ್ಯಾನ್ಸರ್‌ ಪತ್ತೆಗೆ ಸ್ವಲ್ಪವೇ ಸಮಯಕ್ಕೆ ಮುನ್ನ ವೈದ್ಯರನ್ನು ಭೇಟಿಯಾಗಿರುತ್ತಾರೆ. ಕ್ಯಾನ್ಸರನ್ನು ಬೇಗನೆ ಪತ್ತೆ ಹಚ್ಚಿದಷ್ಟು ಚಿಕಿತ್ಸೆಯ ಫ‌ಲಿತಾಂಶವು ಉತ್ತಮವಾಗಿರುತ್ತದೆಯಾದ ಕಾರಣ ಕ್ಯಾನ್ಸರ್‌ನ ಚಿಹ್ನೆಗಳ ಬಗ್ಗೆ ತಿಳಿವಳಿಕೆ ಹೊಂದಿರುವುದು ಬಹಳ ಮುಖ್ಯವಾಗಿದೆ.

Advertisement

ಮಕ್ಕಳಲ್ಲಿ ಅತೀ ಸಾಮಾನ್ಯವಾಗಿರುವ ಕ್ಯಾನ್ಸರ್‌ಗಳೆಂದರೆ, ರಕ್ತದ ಕ್ಯಾನ್ಸರ್‌ – ಲ್ಯುಕೇಮಿಯಾ (ಶೇ. 30), ಮೆದುಳು ಮತ್ತು ಬೆನ್ನುಹುರಿಯ ಕ್ಯಾನ್ಸರ್‌ (ಶೇ. 26) ಮತ್ತು ಲಿಂಫೊಮಾಸ್‌ (ಶೇ. 11). ಮಕ್ಕಳ ಕ್ಯಾನ್ಸರ್‌ ಪ್ರಕರಣಗಳಲ್ಲಿ ಸರಿಸುಮಾರು ಅರ್ಧಾಂಶದಷ್ಟು 0ಯಿಂದ 4 ವರ್ಷ ವಯೋಮಾನದ ಮಕ್ಕಳಲ್ಲಿ ಕಂಡುಬರುತ್ತವೆ.

ರಕ್ತದ ಕ್ಯಾನ್ಸರ್‌ (ಲ್ಯುಕೇಮಿಯಾ)
ಮಕ್ಕಳಲ್ಲಿ ಕಾಣಿಸಿಕೊಳ್ಳುವ ಕ್ಯಾನ್ಸರ್‌ಗಳಲ್ಲಿ ಇದು ಅತೀ ಸಾಮಾನ್ಯವಾದುದು. ಅಸಹಜವಾದ, ಪ್ರೌಢವಲ್ಲದ ಬಿಳಿರಕ್ತ ಕಣಗಳ ಅನಿಯಂತ್ರಿತ ಉತ್ಪಾದನೆ ಇದಕ್ಕೆ ಕಾರಣವಾಗುತ್ತದೆ. ರೋಗ ಪೀಡಿತರಲ್ಲಿ ಈ ಬಿಳಿ ರಕ್ತ ಕಣಗಳು ಅಸ್ಥಿಮಜ್ಜೆಯೊಳಗೆ ತುಂಬಿಕೊಳ್ಳುತ್ತವೆ, ಅಂಗಾಂಶಗಳಲ್ಲಿ ಶೇಖರವಾಗುತ್ತವೆ. ಇದರಿಂದ ರೋಗಪೀಡಿತರು ಬಿಳಿಚಿಕೊಳ್ಳುತ್ತಾರೆ, ಸೋಂಕುಗಳಿಗೆ ಸುಲಭವಾಗಿ ತುತ್ತಾಗುತ್ತಾರೆ ಮತ್ತು ಗಾಯಗೊಳ್ಳುತ್ತಾರೆ.

ಲಿಂಫೊಮಾಸ್‌
ದುಗ್ಧರಸ ಗ್ರಂಥಿ (ಲಿಂಫ್ ಗ್ಲಾಂಡ್ಸ್‌)ಗಳನ್ನು ಒಳಗೊಂಡಿರುವ ದುಗ್ಧ ರಸ ವ್ಯವಸ್ಥೆಯಲ್ಲಿ ಇದು ಕಾಣಿಸಿಕೊಳ್ಳುತ್ತದೆ. ಟಾನ್ಸಿಲ್ಸ್‌, ಥೈಮಸ್‌, ಎಲುಬು, ಸಣ್ಣ ಕರುಳು, ಮೆದೋಜೀರಕ ಗ್ರಂಥಿ ಅಥವಾ ದೇಹದ ಯಾವುದೇ ಭಾಗದ ದುಗ್ಧ ರಸ ಗ್ರಂಥಿಗಳಲ್ಲಿ ಇದು ಕಾಣಿಸಿಕೊಳ್ಳಬಹುದು. ಇದರ ಪ್ರಮುಖ ಎರಡು ವಿಧಗಳೆಂದರೆ, ಹಾಜ್‌ಕಿನ್ಸ್‌ ಡಿಸೀಸ್‌ ಮತ್ತು ನಾನ್‌-ಹಾಜ್‌ಕಿನ್ಸ್‌ ಡಿಸೀಸ್‌.

ಗಟ್ಟಿಯಾದ ಗಡ್ಡೆಗಳು
ಮಿದುಳು ಗಡ್ಡೆ (ಬ್ರೈನ್‌ ಟ್ಯೂಮರ್‌):
ಮಿದುಳು ಮತ್ತು ಬೆನ್ನುಹುರಿಯ ಗಡ್ಡೆಗಳು ಮಕ್ಕಳಲ್ಲಿ ಬಹಳ ಸಾಮಾನ್ಯವಾಗಿ ಉಂಟಾಗುವ ಗಡ್ಡೆಗಳಾಗಿವೆ. ಇಂತಹ ಕ್ಯಾನ್ಸರ್‌ ಪತ್ತೆಯಾಗುವಲ್ಲಿ ಸಾಮಾನ್ಯವಾಗಿ ವಿಳಂಬವಾಗುತ್ತದೆ.
ಎಲುಬು ಕ್ಯಾನ್ಸರ್‌: ಇವುಗಳಲ್ಲಿ ಅತೀ ಸಾಮಾನ್ಯವಾದುದು ಆಸ್ಟಿಯೊಸರ್ಕೊಮಾ. ಹದಿಹರಯದಲ್ಲಿ ಇದು ಸಾಮಾನ್ಯವಾಗಿ ಉಂಟಾಗುತ್ತದೆ. ಸಾಮಾನ್ಯವಾಗಿ ಕಾಲುಗಳು ಮತ್ತು ತೋಳುಗಳಲ್ಲಿ ಕಾಣಿಸಿಕೊಳ್ಳುತ್ತದೆ.
ನ್ಯುರೊಬ್ಲಾಸ್ಟೊಮಾ: ಐದು ವರ್ಷಕ್ಕಿಂತ ಕೆಳಗಿನ ವಯೋಮಾನದ ಮಕ್ಕಳಲ್ಲಿ ಸಾಮಾನ್ಯವಾಗಿರುತ್ತದೆ. ಮೂತ್ರಪಿಂಡಗಳ ಮೇಲ್ಭಾಗದಲ್ಲಿರುವ ಅಡ್ರಿನಾಲಿನ್‌ ಗ್ರಂಥಿಗಳಲ್ಲಿ ಉಂಟಾಗುತ್ತದೆ. ಈ ರೋಗಪೀಡಿತರ ಪೈಕಿ ನಾಲ್ಕನೇ ಒಂದಂಶದಷ್ಟು ಮಕ್ಕಳಲ್ಲಿ ಜನಿಸಿದ ಮೊದಲ ಒಂದು ವರ್ಷದಲ್ಲಿ ಇದರ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ನ್ಯುರೊಬ್ಲಾಸ್ಟೊಮಾ ಬಹಳ ಕ್ಷಿಪ್ರವಾಗಿ ವಿಸ್ತರಿಸುತ್ತದೆ ಮತ್ತು ಕಾಯಿಲೆ ತೀವ್ರವಾಗಿ ಹರಡಿದ ಬಳಿಕವೇ ಪತ್ತೆಯಾಗುತ್ತದೆ.

Advertisement

ಮಕ್ಕಳಲ್ಲಿ ಉಂಟಾಗುವ ಇತರ ಕ್ಯಾನ್ಸರ್‌ಗಳು
ವಿಲ್ಮ್ಸ್ ಗಡ್ಡೆ:
ಮೂತ್ರಪಿಂಡಗಳಲ್ಲಿ ಉಂಟಾಗುವ ಗಡ್ಡೆಗಳು. ಮಕ್ಕಳಲ್ಲಿ ಅದರಲ್ಲಿಯೂ ಎರಡರಿಂದ ನಾಲ್ಕು ವರ್ಷ ವಯೋಮಾನದವರಲ್ಲಿ ಕಾಣಿಸಿಕೊಳ್ಳುವುದು ಹೆಚ್ಚು. ಇದು ಸಾಮಾನ್ಯವಾಗಿ ಶ್ವಾಸಕೋಶಗಳಿಗೆ ಹರಡುತ್ತದೆ.
ರೆಟಿನೊಬ್ಲಾಸ್ಟೊಮಾ:
ಕಣ್ಣುಗಳಲ್ಲಿ ಉಂಟಾಗುವ ಹಾನಿಕರವಾದ ಈ ಗಡ್ಡೆಗಳು ಸಣ್ಣ ಪ್ರಾಯದ ಮಕ್ಕಳನ್ನು ಬಾಧಿಸುತ್ತವೆ. ವಂಶಪಾರಂಪರ್ಯವಾಗಿ ಉಂಟಾಗುವ ಸಾಧ್ಯತೆಗಳಿವೆ. ಮಕ್ಕಳಲ್ಲಿ ಉಂಟಾಗುವ ಕ್ಯಾನ್ಸರ್‌ ಪ್ರಕರಣಗಳ ಸಂಖ್ಯೆಯಲ್ಲಿ ಶೇ. 2ರಷ್ಟು ರೆಟಿನೊಬ್ಲಾಸ್ಟೊಮಾ ಆಗಿರುತ್ತವೆ.
ರಾಬೊxಮೇಯೊಸರ್ಕೊಮಾ:
ಮಕ್ಕಳಲ್ಲಿ ಉಂಟಾಗುವ ಅತೀ ಸಾಮಾನ್ಯವಾದ ಮೃದು ಅಂಗಾಂಶ ಸರ್ಕೊಮಾ ಇದು. ಅತ್ಯಂತ ಅಪಾಯಕಾರಿಯಾದ ಈ ನಿಯೊಪ್ಲಾಸ್‌¾ ಎಲುಬಿನ ಸ್ನಾಯುಗಳಲ್ಲಿ ಕಾಣಿಸಿಕೊಳ್ಳುತ್ತದೆ. ಯಾವುದೇ ಸ್ನಾಯು ಅಂಗಾಂಶದಲ್ಲಿ ಇದು ಕಾಣಿಸಿಕೊಳ್ಳಬಹುದಾದರೂ ಸಾಮಾನ್ಯವಾಗಿ ಇದು ತಲೆ ಮತ್ತು ಕುತ್ತಿಗೆ ಭಾಗ (ಕಣ್ಣುಕುಳಿಯ ಸಹಿತ) ದಲ್ಲಿ, ಜನನಾಂಗ- ಮೂತ್ರಾಂಗ ವ್ಯೂಹದಲ್ಲಿ ಅಥವಾ ಅದರ ಹೊರಭಾಗದಲ್ಲಿ ಉಂಟಾಗುವುದು ಹೆಚ್ಚು.

ಮಕ್ಕಳು ಮತ್ತು ಹದಿಹರಯದವರಲ್ಲಿ ಅತೀ ಸಾಮಾನ್ಯವಾಗಿ ಉಂಟಾಗುವ ಕ್ಯಾನ್ಸರ್‌ಗಳು ಯಾವುವು?
ಬಾಲ್ಯದಲ್ಲಿ ಕ್ಯಾನ್ಸರ್‌: ಸಾಮಾನ್ಯ ಚಿಹ್ನೆಗಳು ಯಾವುವು?

 ತುಂಬಾ ದಣಿವಾಗುವುದು ಮತ್ತು/ ಅಥವಾ ಬಿಳಿಚಿಕೊಂಡ ಚರ್ಮ.
 ಕಿವಿ, ಗಂಟಲು ಮತ್ತು ಎದೆ ಭಾಗದಲ್ಲಿ ಸತತ ಸೋಂಕುಗಳು.
 ವಾಸಿಯಾಗದ ಫ‌ೂÉನಂತಹ ಚಿಹ್ನೆಗಳು.
 ಮೂತ್ರ, ಮಲದಲ್ಲಿ ರಕ್ತ ಅಥವಾ ರೋಗಪೀಡಿತರಾದಾಗ ಇದು ಕಂಡುಬರುವುದು.
 ಸುಲಭವಾಗಿ ತರಚಿದ ಗಾಯವಾಗುವುದು ಅಥವಾ ಸಣ್ಣ ಕೆಂಪನೆಯ ದದ್ದುಗಳು ಉಂಟಾಗುವುದು.
 ವಿಶೇಷವಾಗಿ ರಾತ್ರಿ ಹೊತ್ತಿನಲ್ಲಿ ಬೆವರುವುದು ಅಥವಾ ಜ್ವರ.
 ವಾಸಿಯಾಗದ ನೋವುಗಳು ಮತ್ತು ಸೆಳವುಗಳು, ವಿಶೇಷವಾಗಿ ಎಲುಬುಗಳಲ್ಲಿ, ಸಂಧಿಗಳಲ್ಲಿ, ಬೆನ್ನು ಅಥವಾ ಕಾಲುಗಳಲ್ಲಿ. ಇದು ರಾತ್ರಿ ಹೊತ್ತಿಗೆ ತೀವ್ರವಾಗಿರುತ್ತದೆ.
 ಕಾರಣವಿಲ್ಲದ ಕಾಲುನೋವು ಅಥವಾ ಕಾಲುಗಳು ದಣಿಯುವುದು.
ಮಲವಿಸರ್ಜನೆಯ ಸಂದರ್ಭದಲ್ಲಿ ಮಲಬದ್ಧತೆ, ಬೇಧಿ, ನೋವು ಅಥವಾ ಪೂರ್ಣ ಮಲ ವಿಸರ್ಜನೆಯಾಗಿಲ್ಲ ಎಂಬ ಅನುಭವ.
 ದೇಹದ ಯಾವುದೇ ಭಾಗದಲ್ಲಿ ಗಡ್ಡೆ, ಊತ ಅಥವಾ ಅಸಹಜವಾಗಿ ಗಟ್ಟಿಯಾಗಿರುವ ಅನುಭವ.
 ಕಣ್ಣುಗಳಲ್ಲಿ ಅಸಹಜವಾದ ಬಿಳಿ ಪ್ರಕಾಶ ಕಂಡುಬರುವುದು (ಫೊಟೊಗಳಲ್ಲಿ ಕಾಣಿಸುವಂತೆ).
 ತೂಕ ನಷ್ಟ ಅಥವಾ ನಿಧಾನ ಬೆಳವಣಿಗೆ.
 ಮಚ್ಚೆಗಳ ಗಾತ್ರ ಮತ್ತು ಬಣ್ಣದಲ್ಲಿ ಬದಲಾವಣೆ.
 ಮಕ್ಕಳು ಸತತವಾಗಿ ಅಳುವುದು, ಕಿರುಚುವುದು.
ಮಿದುಳಿನ ಗಡ್ಡೆಗಳು ಅನೇಕ ವಿಧದ ಚಿಹ್ನೆಗಳನ್ನು ಉತ್ಪಾದಿಸುತ್ತವೆ. ಕೆಲವು ಎಂದರೆ, ಸತತ ತಲೆನೋವು, ತಲೆ ಸುತ್ತುವಿಕೆ, ಮೂಛೆì ತಪ್ಪುವುದು, ಗೊಂದಲ, ಮಂಕಾಗಿರುವುದು, ಸಮತೋಲನ ತಪ್ಪುವುದು, ವಿಶೇಷವಾಗಿ ಬೆಳಗ್ಗೆ ಏಳುವಾಗ ಕಂಗಾಲಾಗಿರುವುದು.

ಡಾ| ಹರ್ಷ ಪ್ರಸಾದ ಎಲ್‌.
ಕನ್ಸಲ್ಟೆಂಟ್‌ ಪೀಡಿಯಾಟ್ರಿಕ್‌ ಹೆಮಟಾಲಜಿಸ್ಟ್‌ ಮತ್ತು ಓಂಕಾಲಜಿಸ್ಟ್‌
ಕೆಎಂಸಿ ಆಸ್ಪತ್ರೆ, ಮಂಗಳೂರು

 

Advertisement

Udayavani is now on Telegram. Click here to join our channel and stay updated with the latest news.

Next