Advertisement
ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಯ ಮುಂಭಾಗದ ಆವರಣದಲ್ಲಿ ಏರ್ಪಡಿಸಲಾಗಿದ್ದ ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ವಿವಿಧ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
Related Articles
Advertisement
ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ, ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಬಡವರ ಆರೋಗ್ಯ ರಕ್ಷಣೆಯ ಕನಸು ನನಸಾಗಬೇಕು. ಮೆಡಿಕಲ್ ಕಾಲೇಜು ಮತ್ತಷ್ಟು ಬೆಳೆಯಬೇಕು. ಪ್ರಸ್ತುತ ನೀಡಿರುವ ಸೌಲಭ್ಯಗಳ ಉಪಯೋಗದ ಆತ್ಮಾವಲೋಕನ ಮಾಡಿಕೊಳ್ಳಬೇಕು. 133 ವೈದ್ಯಾ ಧಿಕಾರಿಗಳಿರುವ ಕಾಲೇಜಿನಲ್ಲಿ ಯಾರೂ ಚಿಕಿತ್ಸೆಯಿಂದ ಹೊರಗುಳಿಯಂತೆ, ಜನರಿಗೆ ಹೆಚ್ಚು ಓಡಾಡಿಸದೆ ಸೇವೆ ನೀಡಬೇಕು. ಹೆಚ್ಚಿನ ಚಿಕಿತ್ಸೆಗೆ ಜನರು ಮಣಿಪಾಲಕ್ಕೆ ತೆರಳುತ್ತಿರುವುದು ಇಲ್ಲಿ ಹೆಚ್ಚಿನ ಸೌಲಭ್ಯವಿಲ್ಲವೆಂಬುದನ್ನು ತೋರುತ್ತದೆ. ಆದ್ದರಿಂದ ವೈದ್ಯಾ ಧಿಕಾರಿಗಳಿಂದ ಹಿಡಿದು ಸಿಬ್ಬಂದಿವರೆಗೆ ಕರ್ತವ್ಯಪರತೆಯಿಂದ ಕೆಲಸ ಮಾಡಿದರೆ ನಿಮ್ಮ ಗೌರವ ಸಹ ಹೆಚ್ಚುತ್ತದೆ.
ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಮೆಗ್ಗಾನ್ ಆಸ್ಪತ್ರೆಯಲ್ಲಿ ನರ್ಸಿಂಗ್ ಕಾಲೇಜು ಉದ್ಘಾಟನೆಯೊಂದಿಗೆ ರೂ.38.676 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ರೂ.29.62 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಕಾರ್ಯಕ್ರಮ ನೆರವೇರಿದೆ. ಕ್ಯಾನ್ಸರ್ ಆಸ್ಪತ್ರೆ ಮಂಜೂರಾಗಿದ್ದು, ಮೆಗ್ಗಾನ್ ಆವರಣದಲ್ಲಿ ಮುಂಭಾಗದಲ್ಲಿ ನಿರ್ಮಿಸುವುದಕ್ಕೆ ಯೋಜನೆ ತಯಾರಿಸಲಾಗುತ್ತಿದೆ ಹಾಗೂ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಮೇಲ್ಮಹಡಿಯಲ್ಲಿ ಸಹ ಕಾರ್ಯ ನಿರ್ವಹಿಸಿದಲ್ಲಿ ಸರ್ಕಾರಕ್ಕೆ ಹಣ ಸಹ ಉಳಿತಾಯವಾಗುತ್ತದೆ. ಕಿದ್ವಾಯಿಯಿಂದಲೇ ಕ್ಯಾನ್ಸರ್ ತಜ್ಞ ವೈದ್ಯರಿಂದ ಚಿಕಿತ್ಸೆ ವ್ಯವಸ್ಥೆ ಮಾಡಿದಲ್ಲಿ ಕ್ಯಾನ್ಸರ್ ಆಸ್ಪತ್ರೆ ಶೀಘ್ರವಾಗಿ ಉದ್ಘಾಟಿಸಲು ಅನುಕೂಲವಾಗುತ್ತದೆ. ಆಯುರ್ವೇದಿಕ್ ಆಸ್ಪತ್ರೆಯನ್ನೂ ಬೇಗ ಶುರು ಮಾಡಲು ಆರೋಗ್ಯ ಸಚಿವರ ಸಹಕಾರ ಬೇಕು. ನಗರಾಭಿವೃದ್ಧಿ ಸಚಿವರು ಸಹ ಆಸ್ಪತ್ರೆ ಆವರಣದಲ್ಲಿ ಮೂಲ ಸೌಕರ್ಯಕ್ಕಾಗಿ 10 ಕೋಟಿ ರೂ. ನೀಡಿದ್ದು ಎಲ್ಲರೂ ಜಿಲ್ಲೆಯ ಅಭಿವೃದ್ಧಿಗೆ ಸಹಕರಿಸುತ್ತಿದ್ದಾರೆಂದರು.
ಶಾಸಕ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾತನಾಡಿ, ಶಿವಮೊಗ್ಗ ನಮ್ಮ ನಿರೀಕ್ಷೆ ಮೀರಿ ಒಳ್ಳೆಯ ರೀತಿಯಲ್ಲಿ ಬೆಳೆಯುತ್ತಿದೆ. ಇನ್ನು ಆರೇಳು ತಿಂಗಳಲ್ಲಿ ವಿಮಾನ ನಿಲ್ದಾಣ ಕಾಮಗಾರಿ ಮುಗಿಯಲಿದ್ದು, ಪ್ರಧಾನಿ ಮೋದಿಯವರನ್ನು ಬೆಂಗಳೂರಿನಿಂದ ಶಿವಮೊಗ್ಗಕ್ಕೆ ವಿಮಾನದಲ್ಲೇ ಕರೆತಂದು ಉದ್ಘಾಟನೆ ಮಾಡಿಸುವ ಅಪೇಕ್ಷೆ ಇದೆ ಎಂದರು.
ನಾನು ಉಪಮುಖ್ಯಮಂತ್ರಿಯಾಗಿದ್ದ ವೇಳೆಯಲ್ಲಿ ಮಂಜೂರಾದ ಶಿವಮೊಗ್ಗ ಮೆಡಿಕಲ್ ಕಾಲೇಜು ಇಂದು ರಾಜ್ಯದಲ್ಲೇ ಟಾಪ್ ಕಾಲೇಜಾಗಿದೆ. ಕೋವಿಡ್ ಸಂಕಷ್ಟದ ಸಮಯದಲ್ಲಿ ಉತ್ತಮ ಸೇವೆ ನೀಡಿದೆ. ಹಿಂದೆ ಹೆಚ್ಚಿನ ಚಿಕಿತ್ಸೆಗಾಗಿ ಜನರು ಮಣಿಪಾಲಕ್ಕೆ ಹೆಚ್ಚು ಹೋಗುತ್ತಿದ್ದರು. ಆದರೆ ಈಗ ಅದು ಶೇ.90 ಕಡಿಮೆ ಆಗಿದೆ. ಆ ರೀತಿಯ ವ್ಯವಸ್ಥೆಗಳು, ಸೌಲಭ್ಯ ಶಿವಮೊಗ್ಗದಲ್ಲೇ ದೊರಕುತ್ತಿದೆ. ಯಾವುದೇ ರೋಗಿಗೆ ಅಗತ್ಯವಾದ ಎಲ್ಲ ರೀತಿಯ ಚಿಕಿತ್ಸೆ ನೀಡುವ ಪ್ರಾಮಾಣಿಕ ಪ್ರಯತ್ನವನ್ನು ವೈದ್ಯರು ಸೇರಿದಂತೆ ಎಲ್ಲ ಸಿಬ್ಬಂದಿ ಮಾಡಬೇಕೆಂದು ಮನವಿ ಮಾಡಿದರು.
ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜು ಮಾತನಾಡಿ, ನಮ್ಮ ಸರ್ಕಾರ ಅಭಿವೃದ್ಧಿ ಮತ್ತು ಜನಪರ ಕೆಲಸಗಳನ್ನು ಮಾಡುತ್ತಿದ್ದು ಜನರ ಆಶೋತ್ತರಗಳನ್ನು ಈಡೇರಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ಕಾಲೇಜಿಗೆ ಅಗತ್ಯವಾದ ಯುಜಿಡಿ ಸೇರಿದಂತೆ ಇತರೆ ಕೆಲಸಗಳನ್ನು ತ್ವರಿತಗತಿಯಲ್ಲಿ ಮಾಡಲಾಗುವುದು ಎಂಬ ಭರವಸೆ ನೀಡಿದರು.
ಪಾಲಿಕೆ ಮಹಾಪೌರರಾದ ಸುನೀತ ಅಣ್ಣಪ್ಪ, ಜ್ಯೋತಿ ಪ್ರಕಾಶ್ ಜಿಲ್ಲಾ ಧಿಕಾರಿ ಡಾ| ಸೆಲ್ವಮಣಿ, ಜಿಪಂ ಸಿಇಒ ಎಂ.ಎಲ್. ವೈಶಾಲಿ, ಸಿಮ್ಸ್ ನಿರ್ದೇಶಕ ಡಾ| ಸಿದ್ದಪ್ಪ, ಡಾ| ಶ್ರೀಧರ್, ಡಾ| ರಾಜೇಶ್ ಸುರಗಿಹಳ್ಳಿ, ಡಾ| ಸಿದ್ದನಗೌಡ ಪಾಟಿಲ್, ಸಿಮ್ಸ್ ಆಡಳಿತ ಮಂಡಳಿ ಸದಸ್ಯರಾದ ಡಾ| ವಾಣಿ ಕೋರಿ, ಡಾ| ಗೌತಮ್, ದಿವಾಕರ್ ಶೆಟ್ಟಿ, ಇತರರು ಇದ್ದರು.
ಸರ್ಕಾರಿ ಆಸ್ಪತ್ರೆಗಳು ಮತ್ತು ವೈದ್ಯಕೀಯ ಕಾಲೇಜಿನ ಆಸ್ಪತ್ರೆಗಳು ಸಂಜೀವಿನಿ ಆಗಿ ಸೇವೆ ಸಲ್ಲಿಸಬೇಕು. ಉತ್ಕೃಷ್ಟ ಚಿಕಿತ್ಸೆ ಸರ್ಕಾರದ ಕಾಯಕಲ್ಪವಾಗಿದ್ದು, ಜನರು ಉಪಕಾರ ಸ್ಮರಣೆ ಮಾಡುವ ರೀತಿಯಲ್ಲಿ ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿ ಕೆಲಸ ಮಾಡಬೇಕು. –ಡಾ| ಕೆ.ಸುಧಾಕರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ