Advertisement

ಕ್ಯಾನ್ಸರ್‌ ಔಷಧ ಬೆಲೆ ಭಾರೀ ಕಡಿತಗೊಳಿಸಿದ ಸರಕಾರ

06:21 PM May 21, 2019 | sudhir |

ಹೊಸದಿಲ್ಲಿ: ಕ್ಯಾನ್ಸರ್‌ ಚಿಕಿತ್ಸೆಗೆ ಬಳಸಲಾಗುತ್ತಿರುವ 9 ಔಷಧಗಳ ಬೆಲೆಯನ್ನು ಗಮನಾರ್ಹವಾಗಿ ಕಡಿಮೆಗೊಳಿಸಿ ಕೇಂದ್ರ ಸರಕಾರದ ಔಷಧ ಬೆಲೆ ನಿಯಂತ್ರಣಾ ಪ್ರಾಧಿಕಾರ ಆದೇಶ ಹೊರಡಿಸಿದೆ.

Advertisement

ಲಾಭದ ಮಾರ್ಜಿನ್‌ನಲ್ಲಿ ಶೇ. 30ರಿಂದ ಶೇ. 60ರ ವರೆಗೂ ಇಳಿಕೆ ಮಾಡಲಾಗಿದೆ. ಎರ್ಲೊಟಿನಿಬ್‌, ಪೆಮ್‌ಎಕ್ಸೆಲ್‌, ಎಪೋಕ್ಲೊರ್‌, ಲಿಯೋಪ್ರೊಗೋನ್‌ ಡಿಪೋ, ಲ್ಯಾನೋಲಿಮಸ್‌ ಔಷಧಗಳ ಬೆಲೆ ಕಡಿಮೆ ಮಾಡಲಾಗಿದೆ.

ಇದರಿಂದಾಗಿ ಶ್ವಾಸಕೋಶದ ಕ್ಯಾನ್ಸರ್‌ನಿಂದ ಬಳಲುತ್ತಿರುವ ರೋಗಿಗಳಿಗೆ ಕೀಮೋಥೆರಪಿಯಲ್ಲಿ ಬಳಸಲಾಗುತ್ತಿದ್ದ ಪೆಮ್‌ಎಕ್ಸೆಲ್‌ ಎಂಬ 500 ಮಿ.ಗ್ರಾಂ ಚುಚ್ಚುಮದ್ದಿನ ಬೆಲೆ 22 ಸಾವಿರ ರೂ. ಇಂದ 2800 ರೂ.ಗೆ ಇಳಿಕೆಯಾಗಲಿದೆ.

ಎರಡನೇ ಬಾರಿಗೆ ಈ ರೀತಿ ಕ್ಯಾನ್ಸರ್‌ಗೆ ಚಿಕಿತ್ಸೆ ನೀಡಲಾಗುವ ಔಷಧಗಳ ಲಾಭದ ಮಾರ್ಜಿನ್‌ ಮೇಲೆ ಇಳಿಕೆ ಮಾಡಿ ಬೆಲೆ ಇಳಿಕೆಗೆ ಆದೇಶ ಹೊರಡಿಸಲಾಗಿದೆ. ಈ ಹಿಂದೆ ಫೆಬ್ರವರಿಯಲ್ಲಿ ಕ್ಯಾನ್ಸರ್‌ ಸಂಬಂಧಿ 42 ಔಷಧಗಳ ಬೆಲೆಯನ್ನು ಇಳಿಕೆ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next