Advertisement

ಕ್ಯಾನ್ಸರ್‌ ಪತ್ತೆ: ನೂತನ ವಿಧಾನ

01:16 AM May 08, 2021 | Team Udayavani |

ಮುಂಬಯಿ: ಕ್ಯಾನ್ಸರ್‌ ಕಾಯಿಲೆಯನ್ನು ಅತ್ಯಂತ ಆರಂಭಿಕ ಹಂತದಲ್ಲಿಯೇ ಪತ್ತೆ ಹಚ್ಚುವ ವಿಧಾನವನ್ನು ತಾವು ಅಭಿವೃದ್ಧಿಪಡಿಸಿದ್ದೇವೆ ಎಂದು ಭಾರತೀಯ ವಿಜ್ಞಾನಿಗಳ ತಂಡವೊಂದು ಹೇಳಿದೆ. ಕ್ಯಾನ್ಸರ್‌ ಔಷಧ ಕ್ಷೇತ್ರದಲ್ಲಿ ಕ್ರಾಂತಿ ಉಂಟುಮಾಡಬಹುದು ಎಂದು ಈ ತಂಡ ಪ್ರತಿಪಾದಿಸಿದೆ.

Advertisement

ಇವರ ಪ್ರಕಾರ ಈ ವಿಧಾನದ ಮೂಲಕ ಕ್ಯಾನ್ಸರ್‌ ಗಡ್ಡೆ ರೂಪುಗೊಳ್ಳದ ಹಂತದಲ್ಲಿಯೇ ಅದನ್ನು ಸರಳ ರಕ್ತ ಪರೀಕ್ಷೆಯ ಮೂಲಕ ಶೇ. 100 ನಿಖರತೆಯೊಂದಿಗೆ ಪತ್ತೆಹಚ್ಚಬಹುದು. 1,000 ಮಂದಿಯನ್ನು ಒಳಗೊಂಡ ಇದರ ಕ್ಲಿನಿಕಲ್‌ ಟ್ರಯಲ್‌ನಲ್ಲಿ ಯಶಸ್ವಿಯಾಗಿದೆ.

ಎಚ್‌ಆರ್‌ಸಿ ಎಂದು ಈ ವಿಧಾನಕ್ಕೆ ಹೆಸರಿಡಲಾಗಿದ್ದು, ಮುಂಬಯಿ ಮೂಲದ ಬಯೊ ಟೆಕ್ನಾಲಜಿ ಸಂಸ್ಥೆ ಎಪಿಜೆನೆರಿಸ್‌ ಬಯೊಟೆಕ್ನಾಲಜಿ ಪ್ರೈ.ಲಿ.ಯು ಸಿಂಗಾಪುರ ಮೂಲದ ಝಾರ್‌ ಲ್ಯಾಬ್ಸ್ ಪ್ರೈ.ಲಿ. ಸಹಯೋಗದಲ್ಲಿ ಅಭಿವೃದ್ಧಿಪಡಿಸಿದೆ. ಸುಮಾರು 25ರಷ್ಟು ವಿಧದ ಕ್ಯಾನ್ಸರ್‌ಗಳ ಪತ್ತೆಯನ್ನು ಈ ಮೂಲಕ ನಡೆಸಬಹುದು.  ಈ ವಿಧಾನವನ್ನು ಇನ್ನಷ್ಟು ಪ್ರಯೋಗಗಳಿಗೆ ಒಳಪ‌ಡಿಸಿ, ಇದೇ ಸೆಪ್ಟಂಬರ್‌-ಅಕ್ಟೋಬರ್‌ ವೇಳೆಗೆ ಭಾರತದಲ್ಲಿ ಈ ಟೆಸ್ಟ್‌ ಕಿಟ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸುವ ಇರಾದೆಯನ್ನು  ಕಂಪೆನಿಗಳು ಹೊಂದಿವೆ.

Advertisement

Udayavani is now on Telegram. Click here to join our channel and stay updated with the latest news.

Next