Advertisement

ಕ್ಯಾನ್ಸರ್‌ಗೆ ಕೇರ್‌ ಮಾಡದೆ, ಸ್ಲಂ ಮಕ್ಕಳ ಕೇರ್‌ ತಗೊಂಡಳು!

02:12 AM Sep 01, 2019 | Sriram |

ನನ್ನೊಂದಿಗೆ ಭಿಕ್ಷೆ ಬೇಡುವ ಮಕ್ಕಳು ಬಂದಿದ್ದನ್ನು ಕಂಡು, ಹೋಟೆಲ್ ನಲ್ಲಿದ್ದ ಅದೆಷ್ಟೋ ಗ್ರಾಹಕರು ಮುಖ ಕಿವುಚಿದರು. ಕೆಲವರಂತೂ, ಇಶ್ಶೀ ಎನ್ನುತ್ತ,ಆರ್ಡರ್‌ ಕ್ಯಾನ್ಸಲ್‌ ಮಾಡಿ, ಎದ್ದು ಹೋಗಿ ಬಿಟ್ಟರು. ಈ “ಕ್ಲಾಸ್‌’ ಜನರ ಲೋಕ್ಲಾಸ್‌ ವರ್ತನೆ ಕಂಡು ನನಗೇ ಮುಜುಗರವಾಯಿತು. ಮಕ್ಕಳನ್ನು ದೇವರ ಪ್ರತಿರೂಪ ಅಂತಾರೆ. ಹಸಿದು ಕಂಗಾಲಾಗಿರುವ ಈ ಮಕ್ಕಳಿಗೆ, ದಿನವೂ ಊಟ ಹಾಕುವ ಕೆಲಸ ಮಾಡಬಾರದೇಕೆ? ಅನಿಸಿದ್ದೇ ಆಗ.

Advertisement

ಬದುಕು ಈಕೆಯನ್ನು ಬಹುಬಗೆಯಲ್ಲಿ ಬೇಟೆಯಾಡಿದೆ. ಕ್ಷಣಕ್ಕೊಂದು ಪೆಟ್ಟು ನೀಡಿದೆ. ಮನೆ, ಮದುವೆಯನ್ನು ಮುರಿದು ಮಲಗಿಸಿದೆ. ಸಾಲ ದೆಂಬಂತೆ, ಕ್ಯಾನ್ಸರನ್ನೂ ಬಳುವಳಿ ಯಾಗಿ ನೀಡಿದೆ. ಇಷ್ಟಾದರೂ ಈ ಹುಡುಗಿ ಆಂಚಲ್‌ ಶರ್ಮಾ ಹೆದರಿಲ್ಲ. ಸಾವಿಗೆ ಸವಾಲು ಹಾಕುತ್ತಲೇ ಸ್ಲಂ ಮಕ್ಕಳನ್ನೂ ಸಾಕಲು ನಿಂತಿದ್ದಾಳೆ! ಆಕೆಯ ಹೋರಾಟದ ಬದುಕಿನ ಕಥೆ, ಅವಳದೇ ಮಾತುಗಳಲ್ಲಿದೆ.ಓದಿ ಕೊಳ್ಳಿ..
***
ಬಡವರಲ್ಲ; ಕಡುಬಡವರು ಅಂತಾರಲ್ಲ; ಆ ಕೆಟಗರಿಗೆ ಸೇರಿದವರು ನಾವು. ನಾಲ್ಕು ಮಕ್ಕಳು (ಎರಡು ಗಂಡು, ಎರಡು ಹೆಣ್ಣು) ಮತ್ತು ಅಪ್ಪ-ಅಮ್ಮ -ಹೀಗೆ ಆರು ಮಂದಿಯಿದ್ದೆವು.  ಹಳೆಯ ಚಿಕ್ಕ ಮನೆಯಲ್ಲಿ ವಾಸ. ಅಪ್ಪ, ಆಟೋ ಓಡಿಸುತ್ತಿದ್ದರು. ಅವರ ಸಂಪಾದನೆಯಿಂದಲೇ ಮನೆ ನಡೆಯಬೇಕಿತ್ತು. ಆಟೋ ಡ್ರೆçವರ್‌ನ ಸಂಪಾದನೆ ಅಂದಮೇಲೆ ಬಿಡಿಸಿ ಹೇಳಬೇಕೆ? ಎರಡು ದಿನ ಅರ್ಧ ಜೇಬು, ಎರಡು ದಿನ ಖಾಲಿ ಜೇಬು -ಹಾಗಿತ್ತು ಸಂಪಾದನೆ. ಹೀಗಿದ್ದಾಗಲೇ ಯಾರೋ, ಆಟೋ ಮಾರಿ ವ್ಯಾನ್‌ ತಗೊಂಡು ಸ್ಕೂಲ್‌ಗೆ ಮಕ್ಕಳನ್ನು ಕರ್ಕೊಂಡು ಹೋದರೆ ವರ್ಷಪೂರ್ತಿ ಸಂಪಾದಿಸ ಬಹುದು ಅಂದರು. ಅದನ್ನು ನಂಬಿದ ಅಪ್ಪ, ಆಟೋ ಮಾರಿ, ಒಂದಷ್ಟು ಸಾಲ ಮಾಡಿ ಸ್ಕೂಲ್‌ ವ್ಯಾನ್‌ ತಗೊಂಡರು. ಆದರೆ, ಹೊಸ ಕೆಲಸದ ಖುಷಿ ಹೆಚ್ಚು ದಿನ ಉಳಿಯಲಿಲ್ಲ. ಅಶಿಸ್ತು, ಟೈಂ ಕೀಪ್‌ ಮಾಡ್ತಿಲ್ಲ ಎಂಬ ಕಾರಣ ನೀಡಿ ಶಾಲೆಯವರು ಅಪ್ಪನನ್ನು ಕೆಲಸದಿಂದ ತೆಗೆದುಹಾಕಿದರು.

ಒಂದು ಕಡೆ ಹೊಸದಾಗಿ ಮಾಡಿದ ಸಾಲ, ಇನ್ನೊಂದೆಡೆ ಕೈ ತಪ್ಪಿದ ಸಂಪಾದನೆಯಿಂದ ಅಪ್ಪ ಡಿಪ್ರಶನ್‌ಗೆ ತುತ್ತಾದರು. ಕುಡಿತದ ಮೊರೆ ಹೋದರು. ಕುಡಿದು ಮನೆಗೆ ಬರುವುದು, ಅಮ್ಮ ನೊಂದಿಗೆ ಜಗಳ ತೆಗೆಯುವುದು ಅಪ್ಪನ ದಿನಚರಿಯಾಯಿತು.

ಅಮ್ಮ ತನ್ನ ನೋವನ್ನು ಯಾರೊಂದಿಗೂ ಹೇಳಿಕೊಳ್ಳಲಿಲ್ಲ. ಅಪ್ಪ ದುಡಿಮೆ ನಿಲ್ಲಿಸಿದಾಗ ಗಾರ್ಮೆಂಟ್ಸ್‌ ಫ್ಯಾಕ್ಟರಿಯಲ್ಲಿ ಕೆಲಸಕ್ಕೆ ಸೇರಿದಳು. ಅಲ್ಲಿ, ಇಡೀ ದಿನ ದುಡಿದರೂ ಬಿಡಿ ಗಾಸಷ್ಟೇ ಸಿಗುತ್ತಿತ್ತು. ಒಂದು ಚಪಾತಿ ತಿಂದು, ಊಟ ಆಯ್ತು ಎಂದು ಸುಳ್ಳುಸುಳ್ಳೇ ತೇಗಿದ ದಿನಗಳಿಗೆ ಲೆಕ್ಕವಿಲ್ಲ. ಎಷ್ಟೋ ಬಾರಿ, ತಿನ್ನಲು ಏನೂ ಇಲ್ಲದೆ ಬರೀ ನೀರು ಕುಡಿದು ಹೊಟ್ಟೆ ತುಂಬಿಸಿ ಕೊಂಡದ್ದೂ ಉಂಟು. ಹೀಗೇ ಮುಂದುವರಿದರೆ ಉಪವಾಸವೇ ಬದುಕಾಗುತ್ತದೆ ಅನ್ನಿಸಿದಾಗ ನಾನೂ-ತಮ್ಮನೂ ಏನಾದರೂ ಕೆಲಸ ಮಾಡಲು ನಿರ್ಧರಿಸಿದೆವು. ನಾನಾಗ 9ನೇ ತರಗತಿಯಲ್ಲಿದ್ದೆ. ತಮ್ಮ 8ನೇ ತರಗತಿಯಲ್ಲಿದ್ದ. ಅವನು ಗ್ಯಾರೇಜ್‌ನಲ್ಲಿ ಮೆಕಾನಿಕ್‌ ಆಗಿ ಸೇರಿಕೊಂಡ. ನಾನು, ಸ್ಟಾಕ್‌ ಮಾರ್ಕೆಟ್‌ ಕಂಪನಿಯಲ್ಲಿ ರಿಸೆಪ್ಶನಿಸ್ಟ್‌ ಕೆಲಸಕ್ಕೆ ಸೇರಿದೆ. ಎಂಟು ತಿಂಗಳ ನಂತರ, ಈ ಕೆಲಸ ಬಿಟ್ಟು ಮಾರಾಟ ಮಳಿಗೆಯೊಂದರಲ್ಲಿ ಸೇಲ್ಸ್‌ ಗರ್ಲ್ ಕೆಲಸಕ್ಕೆ ಸೇರಿದೆ. ಅಲ್ಲಿ ವ್ಯಾಪಾರದ ಗುಟ್ಟು, ಜನರೊಂದಿಗೆ ವ್ಯವಹರಿಸುವ ರೀತಿಯ ಪರಿಚಯವಾಯಿತು.
ರಿಯಲ್‌ ಎಸ್ಟೇಟ್‌ ಬ್ಯುಸಿನೆಸ್‌ಗೆ ವಿಪರೀತ ಡಿಮ್ಯಾಂಡ್‌ ಇದ್ದ ದಿನಗಳವು. ಈ ಉದ್ಯಮದಲ್ಲಿ ನಾನೂ ಒಂದು ಕೈ ನೋಡಬಾರದೇಕೆ ಅನ್ನಿಸಿತು. ಪ್ರತಿಬಾರಿ ಕೆಲಸ ಬದಲಿಸುವಾಗಲೂ- ನಾನು ಬಡವರ ಮನೆಯ ಹುಡುಗಿ. ನನ್ನ ರಕ್ಷಣೆಗೆ ದೇವರಿದ್ದಾನೆ ಎಂದುಕೊಂಡೇ ಹೆಜ್ಜೆಯಿಡುತ್ತಿದ್ದೆ. ಆದರೆ, ಈವರೆಗಿನ ಪಯಣ ದಲ್ಲಿ ಸೋಲುಗಳೇ ಜೊತೆಯಾಗಿದ್ದವು. ಈ ವೇಳೆಗೆ, ಕಾಸಿಲ್ಲದಿದ್ದರೆ ಖುಷಿಯಿಂದ ಬದುಕಲು ಕಷ್ಟ ಎಂದು ನನಗೇ ಅರ್ಥವಾಗಿತ್ತು. ಕಷ್ಟಕಾಲಕ್ಕೆ ಆಗಲಿ ಎಂದುಕೊಂಡೇ ಒಂದಷ್ಟು ಹಣ ಉಳಿತಾಯ ಮಾಡಲು ನಿರ್ಧರಿಸಿದೆ. ಆದರೆ, ಅಲ್ಲಿ ಬ್ರೋಕರ್‌ ಆಗಿದ್ದವನು, 2.50 ಲಕ್ಷಕ್ಕೂ ಹೆಚ್ಚಿನ‌ ಉಳಿತಾ ಯದ ಹಣವನ್ನು ನುಂಗಿಹಾಕಿದ. ಇಂಥ ಸಂದರ್ಭದಲ್ಲೆಲ್ಲ ನಾನು ಆದ್ರìಳಾಗಿ- ದೇವರೇ, ಯಾಕಪ್ಪಾ ಇಂಥ ಕಷ್ಟ ಕೊಡ್ತೀಯ ಎಂದು ಪ್ರಶ್ನಿಸುತ್ತಿದ್ದೆ. ಉಹುಂ- ದೇವರು ಮಾತಾಡುತ್ತಿರಲಿಲ್ಲ.

ಮುಳ್ಳಿನ ಮಧ್ಯೆಯೇ ಹೂವಿರುವಂತೆ, ಕೇಡಿಗರ ಮಧ್ಯೆಯೇ ಕಾಯುವವರೂ ಇರುತ್ತಾರೆ. ಈ ಸಂದ ರ್ಭ ದಲ್ಲೇ, ಕೆಲಸದಲ್ಲಿನ ನನ್ನ ಶ್ರದ್ಧೆ ಮತ್ತು ಪರಿಶ್ರಮ, ನಮ್ಮ ಕಂಪನಿಯ ಮಾಲೀಕರಾದ ಹರ್ಮೀಂದರ್‌ ಸಲೂಜ ಅವರ ಗಮನಕ್ಕೆ ಬಂತು. “ಹಣ ತಿಂದವನು ತಲೆ ಮರೆಸಿಕೊಂಡು ಹೋಗಿದ್ದಾನೆ. ಆ ಹಣ ಮರಳಿ ಬರುವುದು ಕಷ್ಟ. ಆದರೆ ನಿನಗೆ ನಾನು ಕೆಲಸದ ಭದ್ರತೆ ಮತ್ತು ಪ್ರಮೋಷನ್‌ ಕೊಡಬಲ್ಲೆ’ ಎಂದರು. ಪರಿಣಾಮ, ಸಂಬಳ ಹೆಚ್ಚಿತು. ಮನೆಮಂದಿಯೆಲ್ಲ ಮೂರು ಹೊತ್ತೂ ಹೊಟ್ಟೆ ತುಂಬ ಊಟ ಮಾಡುವುದಕ್ಕೂ ಸಾಧ್ಯವಾಯಿತು.

Advertisement

ಸಧ್ಯ, ನಮ್ಮ ಕಷ್ಟದ ದಿನಗಳ ಕಳೆದವು ಎಂದು ನೆಮ್ಮದಿಯ ನಿಟ್ಟುಸಿರು ಬಿಡುವ ವೇಳೆಗೇ, ನಮ್ಮ ಅಕ್ಕ, ಮನೆಯವರೆಲ್ಲರ ವಿರೋಧದ ಮಧ್ಯೆ ತಾನು ಪ್ರೀತಿಸಿದ ವ್ಯಕ್ತಿಯನ್ನು ಮದುವೆಯಾಗಿಬಿಟ್ಟಳು. ಅಪ್ಪ- ಅಮ್ಮ ಬಡವರು ನಿಜ. ಆದರೆ, ಮಕ್ಕಳ ಭವಿಷ್ಯದ ಕುರಿತು ಅವರಿಗೆ ನೂರೆಂಟು ಕನಸುಗಳಿದ್ದವು. ಮೊದಲ ಮಗಳು ನೀಡಿದ ಶಾಕ್‌ಗೆ ಅವರು ತತ್ತರಿಸಿಹೋದರು. ಮಗಳು ನಮ್ಮ ಪಾಲಿಗೆ ಸತ್ತುಹೋದಳು ಅನ್ನುವಷ್ಟರ ಮಟ್ಟಿಗೆ ಅವರ ಮನಸ್ಸು ಕಲ್ಲಾಯಿತು. ಆ ಸಂದರ್ಭದಲ್ಲಿ ಅಕ್ಕನೂ ದುಡುಕಿಬಿಟ್ಟಳು. ನನ್ನ ಬದುಕು – ನನ್ನ ಆಯ್ಕೆ ಎಂದುಕೊಂಡು ಮನೆಬಿಟ್ಟು ಹೋಗಿಯೇಬಿಟ್ಟಳು. ಆಕೆಯ ಗಂಡನ ನಿರೀಕ್ಷೆಗಳು ಏನೇನಿದ್ದವೋ ಗೊತ್ತಿಲ್ಲ. ಮದುವೆಯಾದ ಐದೇ ತಿಂಗಳಿಗೆ ಅವರ ಮಧ್ಯೆ ಬಿರುಕು ಉಂಟಾಯಿತು. ಜಗಳಾಡುವುದು ಮಾಮೂಲಿಯಾಯಿತು. ಕಡೆಗೊಂದು ದಿನ, ಕೆಟ್ಟ ಸುದ್ದಿಯೊಂದು ಬಂತು: ಅಕ್ಕ, ಕೈಹಿಡಿದವನಿಂದಲೇ ಕೊಲೆಯಾಗಿ ಹೋಗಿದ್ದಳು!

ಜೊತೆಗೇ ಹುಟ್ಟಿದವಳು, ಒಟ್ಟಿಗೇ ಬೆಳೆದವಳು ಕೊಲೆಯಾಗಿ ಹೋದಳು ಎಂದಾಗ ಸಂಕಟವಾಗದೇ ಇರುತ್ತದಾ? ಕೊಲೆ ಮಾಡಿದವನಿಗೆ ಶಿಕ್ಷೆಯಾಗಬೇಕು ಎನ್ನುತ್ತಾ ನಾನು ಕೋರ್ಟಿಗೆ ಹೋದೆ. ಈ ಸಂದರ್ಭದಲ್ಲಿ, ಕೊಲೆಗಾರನ ಕಡೆಯಿಂದ ಬೆದರಿಕೆ ಕರೆಗಳು ಬಂದವು. ಕೋರ್ಟ್‌ ಆವರಣದಲ್ಲೇ ಹಲ್ಲೆಯ ಪ್ರಯತ್ನಗಳು ನಡೆದವು. ಆಗಿದ್ದು ಆಗಿಬಿಡಲಿ.

ಕೊಲೆಗಾರನಿಗೆ ಶಿಕ್ಷೆ ಆಗಲೇಬೇಕು ಎಂದು ನಿರ್ಧರಿಸಿದ್ದರಿಂದ ಹೆಜ್ಜೆ ಹಿಂದಿಡಲು ಮನಸ್ಸು ಒಪ್ಪಲಿಲ್ಲ. ಕಡೆಗೊಮ್ಮೆ ಸುದೀರ್ಘ‌ ವಿಚಾರಣೆ ನಡೆದು, ಅಕ್ಕನನ್ನು ಕೊಂದವನಿಗೆ ಜೀವಾವಧಿ ಶಿಕ್ಷೆಯಾಯಿತು. ಇದನ್ನೆಲ್ಲ ಕಂಡ ಬಂಧುಗಳು- ಗಯ್ನಾಳಿಯ ಪಟ್ಟ ಕಟ್ಟಿದರು. “ನಿಮ್ಮ ಮಗಳು ಈ ಥರ ವಾದ ಮಾಡಲು ನಿಲ್ತಾಳಲ್ಲ; ಇವಳನ್ನು ಯಾರು ಮದುವೆ ಆಗ್ತಾರೆ? ಬೇಗ ಯಾವುದಾದರೂ ಸಂಬಂಧ ನೋಡಿ ಮದುವೆ ಮಾಡಿ’ ಎಂದು ಹೇಳಿಕೊಟ್ಟರು. ಸರಳವಾಗಿ ಹೇಳುವುದಾದರೆ, ಅಪ್ಪ-ಅಮ್ಮನಿಗೆ ಬ್ರೆçನ್‌ ವಾಷ್‌ ಮಾಡಿಬಿಟ್ಟರು. ಕಡೆಗೆ ಏನಾಯಿತೆಂದರೆ, ಮಗಳ ಮದುವೆ ಮಾಡಬೇಕೆಂದು ನಮಗೂ ಆಸೆಯಿದೆ. ನಿನ್ನ ಒಳ್ಳೆಯದಕ್ಕೇ ತಾನೆ ನಾವು ಯೋಚಿಸೋದು? ಸುಮ್ನೆ ಒಪ್ಕೋ ಎಂದು, ಅಂಗವಿಕಲನೊಂದಿಗೆ ತರಾತುರಿಯಲ್ಲಿ ನನ್ನ ಮದುವೆ ಮಾಡಿಬಿಟ್ಟರು. ಅಂದಹಾಗೆ, ನನ್ನ ಮದುವೆ ನಡೆದದ್ದು 2006ರಲ್ಲಿ.

ಉಹುಂ, ಹೊಸ ಬದುಕು ನನ್ನ ಪಾಲಿಗೆ ಸುಖಕರವಾಗಿರಲಿಲ್ಲ. ಗಂಡನ ಮನೆಯವರ ನಿರೀಕ್ಷೆಗಳು ವಿಪರೀತ ಇದ್ದವು. ಸೊಸೆ ದುಡಿಯಬೇಕು. ಸಂಬಳವನ್ನೆಲ್ಲ ತಂದು ಗಂಡನಿಗೆ ಕೊಡಬೇಕು. ತವರಿನವರಿಗೆ ಯಾವುದೇ ಸಹಾಯ ಮಾಡುವಂತಿಲ್ಲ ಅಂದರು.

ವಿಪರ್ಯಾಸ ನೋಡಿ: ಹೊಸ ಮನೆಯಲ್ಲಿ ಹಿಡಿ ಪ್ರೀತಿಗಾಗಿ ನಾನು ಹಂಬಲಿಸುತ್ತಿದ್ದೆ. ಆ ಮನೆಯಲ್ಲಿದ್ದವರು ನನ್ನ ಹಣಕ್ಕಾಗಿ ಹಾತೊರೆಯುತ್ತಿದ್ದರು. ಹೆತ್ತವರ ಬಳಿ ನನ್ನ ಸಂಕಟ ಹೇಳಿಕೊಂಡರೆ-“ಮೊದಲ ಮಗಳ ಬದುಕು ಹಾಳಾಗಿ ಹೋಯ್ತು. ಈಗ ನೀನೂ ದುಡುಕಿದರೆ, ಜನ ಆಡ್ಕೊàತಾರೆ. ಎಲ್ಲಾ ನಮ್ಮ ಹಣೆಬರಹ ಅಂದೊRಂಡು ಸುಮ್ಮನಿದ್ದು ಬಿಡು’ ಅಂದರು. ತವರಿನ ಮನೆಯವರ ಬೆಂಬಲ ಸಿಗುವುದಿಲ್ಲ ಎಂದು ತಿಳಿದ ಮೇಲೆ ಗಂಡನ ಮನೆಯಲ್ಲಿ ಕಿರುಕುಳ ಮತ್ತಷ್ಟು ಹೆಚ್ಚಾಯಿತು. ಅದನ್ನೆಲ್ಲ ಸಹಿಸಿಕೊಳ್ಳಲು ಸಾಧ್ಯವಿಲ್ಲ ಅನ್ನಿಸಿದಾಗ, ವಿಚ್ಛೇದನ ನೀಡಿ ಎದ್ದು ಬಂದೆ. ವೈವಾಹಿಕ ಬದುಕು, ಎರಡೇ ವರ್ಷಕ್ಕೆ ಕೊನೆಗೊಂಡಿತ್ತು.

9ನೇ ಕ್ಲಾಸ್‌ ಓದಿದವಳಿಗೆ ಅಷ್ಟೊಂದು ಸಂಬಳವಿತ್ತಾ ಎಂಬ ಪ್ರಶ್ನೆ ಹಲವರನ್ನು ಕಾಡಬಹುದು. ನಾನು 9ನೇ ಕ್ಲಾಸ್‌ಗೆà ಸ್ಕೂಲ್‌ ಬಿಟ್ಟಿದ್ದು ನಿಜ. ಆದರೆ, ನಂತರ ನೆರೆಹೊರೆಯವರೊಂದಿಗೆ, ಫ್ರೆಂಡ್ಸ್‌ ಜೊತೆ, ಕೆಲಸ ಮಾಡದ ಜಾಗದಲ್ಲಿ ಗ್ರಾಹಕರೊಂದಿಗೆ ಮಾತನಾಡುತ್ತಲೇ ಭಾಷೆ ಕಲಿತೆ. ಬರೆಯಲು ಕಲಿತೆ. ಇಂಗ್ಲಿಷ್‌ -ಹಿಂದಿ-ಗಣಿತ- ಪಂಜಾಬಿಯಲ್ಲಿ “ಪಂಟರ್‌’ ಅನ್ನಿಸಿಕೊಂಡೆ. ಕೈ ತುಂಬ ಸಂಬಳ ತರುವ ನೌಕರಿ ನನಗಿತ್ತು. ಆದರೆ, ಬದುಕಲ್ಲಿ ಖುಷಿಯಿರಲಿಲ್ಲ. ನನ್ನ ಸಂಸಾರ ಒಡೆದುಹೋದಾಗ, ಅಮ್ಮ ಶಾಕ್‌ಗೆ ಒಳಗಾದಳು. ಆಕೆಗೆ ಸ್ಟ್ರೋಕ್‌ ಆಗಿ, ದೇಹದ ಒಂದು ಭಾಗ ಸ್ವಾಧೀನ ಕಳೆದುಕೊಂಡಿತು. ಈ ಸಂದರ್ಭದಲ್ಲಿ ಮನೆಯ ಜವಾಬ್ದಾರಿ ನೋಡಿಕೊಳ್ಳಲು ಹೆಂಗಸೊಬ್ಬಳು ಬೇಕು ಅನ್ನಿಸಿದಾಗ, ತಮ್ಮನಿಗೆ ಮದುವೆ ಮಾಡಿದ್ದಾಯಿತು. ತಮ್ಮನ ಹೆಂಡತಿಯಲ್ಲಿ -ಮಗಳನ್ನು, ಗೆಳತಿಯನ್ನು, ತಂಗಿಯನ್ನು ಕಾಣಲು ನಾವೆಲ್ಲಾ ಬಯಸಿದ್ದೆವು. ಅದನ್ನೇ ಅವಳಿಗೂ ಹೇಳಿದೆವು.

ಆದರೆ, ನಮ್ಮ ನಸೀಬು ಖೊಟ್ಟಿಯಿತ್ತು. ತಮ್ಮನ ಹೆಂಡತಿ, ನಮಗೆ ಅಡ್ಜಸ್ಟ್‌ ಆಗಲೇ ಇಲ್ಲ. ಸ್ಟ್ರೋಕ್‌ನಿಂದ ತತ್ತರಿಸುತ್ತಿದ್ದ ಅಮ್ಮನ ಮೇಲೆ ಹಲ್ಲೆ ಮಾಡುವ ಮಟ್ಟಿಗೆ ಆಕೆ ಕ್ರೂರವಾಗಿ ವರ್ತಿಸಿದಳು-ಕಡೆಗೊಮ್ಮೆ, ಅವಳ ಕಾಟ ತಡೆಯಲಾ ಗದೆ,ತಮ್ಮನೇ ಮುಂದಾಗಿ ವಿಚ್ಛೇದನ ಪಡೆದ.

ದಿನ ಗಳು ಹೀಗೇ ಉರುಳುತ್ತಿದ್ದವು. 2015ರ ಹೊತ್ತಿಗೆ, ನನ್ನ ಸಂಬಳ 50 ಸಾವಿರದ ಗಡಿ ದಾಟಿತ್ತು.ಕೈತುಂಬ ಕಾಸಿದೆ.ಕಷ್ಟ ಬಂದರೆ ಹೆದರಲಾರೆ ಎಂಬ ಧೈರ್ಯದಲ್ಲಿ ನಾನಿದ್ದೆ.ಈ ಉಳಿತಾಯದ ಹಣ ದಲ್ಲಿ ಒಂದು ಮನೆ ಕಟ್ಟಿ ಸಿದೆ. ಆದರೆ, ಯಾವುದೋ ಕಾನೂನಿನ ನೆಪ ಹೇಳಿ,ನನ್ನ ಕಣ್ಣೆ ದುರೇ ಅದನ್ನು ಕೆಡವಲಾಯಿತು. ಈ ಸಂದರ್ಭದಲ್ಲೇ ಎದೆಯ ಭಾಗದಲ್ಲಿ ಸಣ್ಣ ಗಂಟೊಂದು ಕಾಣಿಸಿಕೊಂಡಿತು. ಮೊದಲೆಲ್ಲ ಅದನ್ನು ನಿರ್ಲಕ್ಷಿಸಿದೆ. ಗಂಟು ಸ್ವಲ್ಪ ದೊಡ್ಡದಾಗಿ, ಕೀವಿ ನಂತೆ ದ್ರವ ಬಂತು. ಗಾಬರಿಯಿಂದಲೇ ಆಸ್ಪ ತ್ರೆಗೆ ಹೋದರೆ, ಐದಾರು ಬಗೆಯ ಚೆಕಪ್‌ ಮಾಡಿದ ಡಾಕ್ಟರು
ವಿಷಾದದಿಂದ ಹೇಳಿದರು: “ನಿನಗೆ ಸ್ತನ ಕ್ಯಾನ್ಸರ್‌ ಇದೆ. ಆಗಲೇ ಮೂರನೇ ಸ್ಟೇಜಲ್ಲಿ ಇದೆ. ನಿನ್ನ ವಿಲ್‌ ಪವರ್‌ ಮೇಲೆ ಸಾವು-ಬದುಕು ನಿಂತಿದೆ. ನಾಳೆ ಯಿಂದಲೇ ಟ್ರೀಟ್‌ ಮೆಂಟ್‌ ತಗೊಳ್ಳೋದು ಬೆಟರ್‌…’ ಈ ವೇಳೆಗೆ, ಅಪ್ಪ-ಅಮ್ಮ ಹಾಸಿಗೆ ಹಿಡಿದಿದ್ದರು. ವೈವಾಹಿಕ ಬದುಕು ಛಿದ್ರವಾಯೆಂದು ತಮ್ಮ ಸಂಕಟದಲ್ಲಿದ್ದ. ಸಂಕಟವೇ ನಮ್ಮ ಬದುಕಾಯಿತಲ್ಲ ಎಂದು ಮತ್ತೂಬ್ಬ ತಮ್ಮನೂ ಶಾಕ್‌ಗೆ ಒಳಗಾಗಿದ್ದ. ಹೀಗಿ ದ್ದಾಗಲೇ ನನ್ನ ಅನಾರೋಗ್ಯದ ಸುದ್ದಿ ಹೇಳಲು ಮನಸ್ಸಾಗಲಿಲ್ಲ. ಎರಡು ತಿಂಗಳ ಕಾಲ ಗುಟ್ಟಾಗಿಯೇ ಚಿಕಿತ್ಸೆ ಪಡೆದೆ. ಆದರೆ, ಕೀಮೋಥೆರಪಿ ಚಿಕಿತ್ಸೆ ಶುರುವಾದ ನಂತರ ತಲೆಕೂದಲು ಉದುರತೊಡಗಿತು. ಆಪರೇಷನ್ ಗಳ ಕಾರಣ ಕ್ಕೆ ಆಸ್ಪತ್ರೆಗೆ ದಾಖಲಾಗಬೇಕಾಯಿತು. ಕಡೆಗೊಮ್ಮೆ ವಿಷಯ ತಿಳಿದು, ಮನೆ ಮಂದಿಯೆಲ್ಲ ಗೋಳಾಡಿದರು. ನನ್ನ ಸ್ಥಿತಿ ಕಂಡು, ಅಮ್ಮನ ಕಣಿಂದ ದಳದಳನೆ ನೀರಿಳಿಯುತ್ತಿತ್ತು. ಕಣ್ಣೀರು ಒರೆಸಿಕೊಳ್ಳಬೇ ಕಿದ್ದ ಕೈ, ನಿಶ್ಚಲವಾಗಿ ಬಿದ್ದಿತ್ತು. ಆಕೆಯ ಅಸಹಾಯಕ ತೆಗೆ ಮರುಗಿ, ನಾನೇ ಹೇಳಿ ದೆ “ಅಮ್ಮಾ,ಹೆದರಬೇಡ. ನೀನು ನಂಬಿದ ದೇವರು, ನಮ್ಮನ್ನೆಲ್ಲಾ ಕಾಪಾಡ್ತಾನೆ…’
***
ಯಾವಾಗ ಬೇಕಾ ದರೂ ಸಾವು ಬರಬಹುದು. ಇದ್ದಕ್ಕಿ ದ್ದಂತೆಯೇ ನಾನು ಸತ್ತು ಹೋಗಬಹುದು ಅನ್ನಿಸಿ ದಾಗ, ಪ್ರತಿ ಕ್ಷಣ ವನ್ನೂ ಖುಷಿಯಿಂದ ಕಳೆಯಲು ನಿರ್ಧರಿಸಿದೆ. ಅವ ತ್ತೂಂದು ದಿನ ಟ್ರಾಫಿಕ್‌ ನಲ್ಲಿ ಕಾರು ನಿಂತಾಗ-ಭಿಕ್ಷೆ ಬೇಡಲು ಮಕ್ಕಳು ಬಂದವು. “ಮೇಡಂ, ಊಟ ಮಾಡಿಲ್ಲ. ಹಸಿವಾ ಗ್ತಿದೆ. ಕಾಸು ಕೊಡಿ…’ ಅಂದವು. ತಕ್ಷಣ,ನನ್ನ ಹಸಿ ವಿನ ದಿನಗಳು ನೆನ ಪಾ ದವು. ಅವರಿಗೆ ಪುಡಿ ಗಾಸು ಕೊಡಲು ಮನಸ್ಸಾಗಲಿಲ್ಲ. “ನಿಮಗೆ ಯಾರಿಗೂ ದುಡ್ಡು ಕೊಡಲ್ಲ,ಊಟ ಕೊಡಿಸ್ತೇನೆ. ಬನ್ನಿ ಹೋಟೆಲಿಗೆ ಹೋಗೋಣ’ ಅಂದೆ.

ನನ್ನೊಂದಿಗೆ ಭಿಕ್ಷೆ ಬೇಡುವ ಮಕ್ಕಳು ಬಂದಿದ್ದನ್ನು ಕಂಡು, ಹೋಟೆಲ್‌ನಲ್ಲಿದ್ದ ಅದೆಷ್ಟೋ ಗ್ರಾಹಕರು ಮುಖ ಕಿವುಚಿದರು. ಕೆಲವರಂತೂ, ಇಶ್ಶೀ ಎನ್ನುತ್ತ, ಆರ್ಡರ್‌ ಕ್ಯಾನ್ಸಲ್‌ ಮಾಡಿ, ಎದ್ದು ಹೋಗಿಬಿಟ್ಟರು. ಈ “ಕ್ಲಾಸ್‌’ ಜನರ ಲೋಕ್ಲಾಸ್‌ ವರ್ತನೆ ಕಂಡು ನನಗೇ ಮುಜುಗರವಾಯಿತು. ಮಕ್ಕಳನ್ನು ದೇವರ ಪ್ರತಿರೂಪ ಅಂತಾರೆ. ಹಸಿದು ಕಂಗಾಲಾ ಗಿರುವ ಈ ಮಕ್ಕಳಿಗೆ, ದಿನವೂ ಊಟ ಹಾಕುವ ಕೆಲಸ ಮಾಡ ಬಾರದೇಕೆ? ಅನಿ ಸಿದ್ದೇ ಆಗ. ಮನೆಗೆ ಬಂದು ವಿಷಯ ತಿಳಿ ಸಿದೆ. ನಿನಗೆ ಯಾವುದು ಇಷ್ಟವೋ ಆ ಕೆಲಸ ಮಾಡು. ನಾವ್ಯಾ ರೂ ಅಡ್ಡಿ ಮಾಡುವುದಿಲ್ಲ ಅಂದರು. ಈ ವೇಳೆಗೆ, ಸಿಹಿ ತಯಾರಿಕಾ ಕಂಪನಿಯೊಂದರ ಡಿಸೈನ್‌ ಮ್ಯಾನೇ ಜರ್‌ ಹುದ್ದೆಯೂ ನನ್ನದಾಗಿತ್ತು. ಹಾಗಾಗಿ ಹಣಕ್ಕೆ ಕೊರತೆಯಿರ ಲಿಲ್ಲ. ದಿನವೂ ಬಿಸಿ ಬಿಸಿ ಅಡುಗೆ ಮಾಡಿ ಕೊಂಡು, ಅದನ್ನು ನನ್ನ ಸ್ವಿಫ್ಟ್ ಕಾರ್‌ ನಲ್ಲಿ ಇಟ್ಟು ಕೊಂಡು, ಭಿಕ್ಷೆ ಬೇಡುವ ಮಕ್ಕಳಿಗೆ ಹಂಚು ವುದು ನನ್ನ ಕರ್ತವ್ಯವಾಯಿತು. ಕೆಲವೇ ದಿನಗಳಲ್ಲಿ Mಛಿಚls ಟf ಏಚಟಟಜಿnಛಿss ಎಂಬ ಎನ್‌ಜಿಒ ಆರಂಭಿಸಿದೆ.

ಈಗ ಏನಾ ಗಿದೆ ಗೊತ್ತೆ? ದಿನವೂ ನನ್ನಿಂದ ಊಟ ಪಡೆಯುವ ಮಕ್ಕಳ ಸಂಖ್ಯೆ 250ನ್ನು ದಾಟಿದೆ. ಅವ ರಲ್ಲಿ ಹೆಚ್ಚಿ ನ ವರು ಅನಾಥ ಮಕ್ಕಳು. ಹೇಗೆ ಗೊತ್ತಾಯೊ ಕಾಣೆ: ನಾನು ಪೇಷಂಟ್‌ ಎಂಬ ಸಂಗತಿ ಅವ ರಿಗೆ ಗೊತ್ತಾಗಿ ಹೋಗಿದೆ. ಅವು ತಮ್ಮದೇ ಧಾಟಿಯಲ್ಲಿ-“ದಿನ ಕ್ಕೊಬ್ಬರು ಉಪವಾಸ ವಿದ್ದು ನಿನ್ನ ಆರೋಗ್ಯಕ್ಕಾಗಿ ಬೇಡಿಕೊಳ್ತೀವಿ ಅಕ್ಕಾ.ಇನ್ಮೆàಲೆ ಭಿಕ್ಷೆ ಬೇಡಲ್ಲ.ಸ್ಕೂಲ್‌ಗೆ ಹೋಗಿ ಚೆನ್ನಾಗಿ ಓದಿ, ಬೇಗ ದೊಡ್ಡವರಾಗ್ತಿವಿ.ಆಮೇಲೆ ನಾವೂ ನಿನ್ನ ಥರಾನೇ ಹೆಲ್ಪ್ ಮಾಡ್ತೇ ವೆ…’ಅನ್ನುತ್ತವೆ!ಈ ಮಧ್ಯೆಯೇ ಕೆಲ ವರು, ನನ್ನ ಕೆಲಸ ಗುರುತಿಸಿದ್ದಾರೆ.ನೀನು ಮಾಡ್ತಿ ರೋದು ಬಹು ದೊಡ್ಡ ಸೇವೆ. ಅದು ಭಗವಂತನನ್ನೂ ತಲು ಪುತ್ತೆ. ನಿನ್ನ ಕೆಲಸದಲ್ಲಿ ಸಹಾಯ ಮಾಡಲು ನಮಗೂ ಅವಕಾಶ ಕೊಡು’ ಎಂದು ವಿನಂತಿಸಿದ್ದಾರೆ. ಈ ನಡುವೆ, ಬಡ ಹೆಣ್ಣುಮ ಕ್ಕಳ ಮದುವೆಗೆ ನೆರ ವಾಗುವ ಕೆಲಸವನ್ನೂ ಸಂಭ್ರಮದಿಂದಲೇ ಮಾಡುತ್ತಿದ್ದೇನೆ. ಪ್ರತಿಯೊಂದು ಮದುವೆಗೆ ಹಣ ಹೊಂದಿ ಸಿದಾಗಲೂ, “ಒಳ್ಳೇ ಕೆಲಸ ಮಾಡಿದೆ ಕಣೇ’ ಎಂದು ನಮ್ಮ ಅಕ್ಕ ಅಲ್ಲೆಲ್ಲೋ ನಿಂತು ಪಿಸುಗುಟ್ಟಿದಂತೆ ಭಾಸವಾಗುತ್ತದೆ. ಇದೆಲ್ಲ ದರ ನಡುವೆ, ನನ್ನ ದುರಂತ ಬದುಕಿನ ಕಥೆಯ ನ್ನೆಲ್ಲ ತಿಳಿದ ಮೇಲೂ-“ನಿನ್ನ ಸಂಗಾತಿ

ಯಾಗಲು ನನಗಿಷ್ಟ ಎಂದು ಶೋಯೆಬ್‌ ಎಂಬ ಡ್ಯಾನ್ಸ್‌ ಟೀಚರ್‌ ಮುಂದೆ ಬಂದಿದ್ದಾರೆ. ಅವ ನಿಂದಾಗಿ ನನ್ನ ಬದು ಕಿಗೆ ಒಂದಿಷ್ಟು ಸಂಭ್ರಮ ಬಂದಿದೆ. ಅವನಿಂದಾಗಿ ನಾನೂ, ನನ್ನಿಂದಾಗಿ ಕೊಳೆಗೇರಿಯ ಮಕ್ಕಳೂ ಡ್ಯಾನ್ಸ್‌ ಕಲಿ ಯಲು ಸಾಧ್ಯವಾಗಿದೆ. ಅಂದ ಹಾಗೆ, ಈಗಲೂ ನನ್ನೊಳಗೆ ಕ್ಯಾನ್ಸರ್‌ ಇದೆ. ಅದರಿಂದ ಪಾರಾಗಲು ಇನ್ನೂ ನಾಲ್ಕು ವರ್ಷ ಬೇಕು ಅಂದಿದ್ದಾರೆ ಡಾಕ್ಟರ್‌. ಈ ಕಾಯಿಲೆಯ ವಿರುದ್ಧ ಗೆದ್ದು ಬಾ…ಎಂದು ಹಾರೈಸಿ ಅಂದಿದ್ದಾಳೆ ಆಂಚಲ್‌. ಈ ದಿಟ್ಟೆಗೆ ಶುಭ ಹಾರೈ ಸ ಬೇಕು, ಅಭಿ ನಂದನೆ ಹೇಳ ಬೇಕು ಅನಿಸಿದರೆ-anchal0546@gmail.com

ಎ.ಆರ್‌.ಮಣಿಕಾಂತ್‌

Advertisement

Udayavani is now on Telegram. Click here to join our channel and stay updated with the latest news.

Next