Advertisement

ಅಕ್ರಮ ಮದ್ಯ ಮಾರಾಟಗಾರರ ಲೈಸೆನ್ಸ್‌ ರದ್ದು

01:00 PM Apr 25, 2020 | mahesh |

ನಂಜನಗೂಡು: ತಾಲೂಕಿನಲ್ಲಿ ಅಕ್ರಮ ಮದ್ಯ ಮಾರಾಟ ಮಾಡುವುದು ಗಮನಕ್ಕೆ ಬಂದಲ್ಲಿ ಮಾರಾಟಗಾರರ ಲೈಸೆನ್ಸ್‌ ರದ್ದು ಮಾಡಿ, ಮಾಲೀಕರ ಅರೆ ಬೆತ್ತಲೆ ಮೆರವಣಿಗೆ ನಡೆಸುವುದಾಗಿ ಡಿವೈಎಸ್‌ಪಿ ಪ್ರಭಾಕರ್‌ ಸಿಂಧೆ ಎಚ್ಚರಿಸಿದರು. ತಮ್ಮ ಕಚೇರಿಯಲ್ಲಿ ನಡೆದ ಮದ್ಯ ಮಾರಾಟಗಾರರ ಸಭೆಯಲ್ಲಿ ಮಾತನಾಡಿ, ಮದ್ಯ ಮಾರಾಟ ನಿಷೇಧಿಸಿ ತಿಂಗಳಾಗಿದ್ದರೂ ಅಕ್ರಮವಾಗಿ ನಾಲ್ಕು ಪಟ್ಟು ಹೆಚ್ಚು ಬೆಲೆಗೆ ಮದ್ಯ ಮಾರಾಟ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ನಿಯಮ ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಮಾ.21 ರಂದು ಮದ್ಯ ಮಾರಾಟ ಮಳಿಗೆಯನ್ನು ಸೀಲ್‌ ಮಾಡಲಾಗಿದೆ. ನಾವು ಯಾವುದೇ ಸಮಯದಲ್ಲಿ ಬಂದು ಪರಿಶೀಲಿಸಿದಾಗ ಆಸಮಯದಲ್ಲಿದ್ದ ಮದ್ಯದ ದಾಸ್ತಾನು ಇರಬೇಕು. ಮದ್ಯ ಮಾರಾಟ ಮಳಿಗೆಯಲ್ಲಿ ಕಳ್ಳತನವಾದರೂ ಅದಕ್ಕೆ ಮಾರಾಟಗಾರರೇ ಹೊಣೆ ಯಾಗುತ್ತಾರೆ ಎಂದು ಎಚ್ಚರಿಸಿದರು. ಸಭೆಯಲ್ಲಿ ವೃತ್ತ ನೀರಿಕ್ಷಕ ರಾಜಶೇಖರ್‌, ಗ್ರಾಮಾಂತರ ಠಾಣಾಧಿಕಾರಿ ಸತೀಶ, ಪಟ್ಟಣ ಠಾಣೆಯ ಎಸ್‌ಐ ರವಿ ಕುಮಾರ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next