Advertisement
ಯಾವುದೇ ಆದಿಭೋಗದಾರನು ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಕಲಂ 95 (2)ರ ಅಡಿ ಕಂದಾಯ ವಿಧಿಸಲಾಗಿರುವ ಅಥವಾ ಬೇಸಾಯದ ಉದ್ದೇಶ ಕ್ಕೆ ಹೊಂದಿರುವ ಭೂಮಿ ಯನ್ನು ಪೂರ್ಣವಾಗಿ ಅಥವಾ ಭಾಗಶಃ ಪರಿವರ್ತಿಸಲು ಇಚ್ಛಿಸಿ ದಲ್ಲಿ ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಿ ಭೂ ಪರಿವರ್ತನೆಗೆ ಅವಕಾಶ ಕಲ್ಪಿಸಲಾಗಿದೆ.
ಸುಳ್ಳು ದಾಖಲಾತಿ ನೀಡಿ ಭೂ ಪರಿವರ್ತನೆ, ಭೂ ಪರಿವರ್ತನೆಯ ಬಳಿಕ ಹಣ ಕಾಸು ಸಮಸ್ಯೆಯಿಂದ ನಿರ್ದಿಷ್ಟ ಉದ್ದೇಶಕ್ಕೆ ಅಭಿವೃದ್ಧಿ ಪಡಿಸಲು ಸಾಧ್ಯವಾಗದೆ ಇರು ವುದು ಅಥವಾ ನ್ಯಾಯಾಲಯದಲ್ಲಿ ವ್ಯಾಜ್ಯ ಇದ್ದು, ಮರಳಿ ಕೃಷಿ ಭೂಮಿಯಾಗಿ ಪರಿವರ್ತಿಸಿಕೊಳ್ಳಲು ಅವಕಾಶ ನೀಡುವಂತೆ ಅನೇಕರು ಸರಕಾರಕ್ಕೆ ಮನವಿ ಸಲ್ಲಿಸಿದ್ದರು. ಕರಾವಳಿಯಲ್ಲಿ ಭೂ ಪರಿವರ್ತನೆ ಕ್ರಮ ಹೇಗೆ?
ರಾಜ್ಯದ ಇತರ ಜಿಲ್ಲೆಗಳಿಗೆ ಹೋಲಿಸಿದರೆ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭೂ ಪರಿವರ್ತನೆ ಕ್ರಮ ಭಿನ್ನವಾಗಿದೆ. ಕರಾವಳಿಯೇತರ ಜಿಲ್ಲೆಗಳಲ್ಲಿ ಎಲ್ಲ ರೀತಿಯ ಜಮೀನುಗಳ ಭೂ ಪರಿವರ್ತನೆ ಸಂಬಂಧ ಜಿಲ್ಲಾಧಿಕಾರಿಗಳೇ ಆದೇಶ ಹೊರಡಿಸುತ್ತಾರೆ. ಆದರೆ ದ.ಕ. ಮತ್ತು ಉಡುಪಿಯಲ್ಲಿ ಭೂ ಸುಧಾರಣೆ ಕಾಯ್ದೆಯಂತೆ ಮಂಜೂರಾದ ಜಮೀನು (ಆದಿಭೋಗ ಹಕ್ಕಿನ ಜಮೀನು)ಗಳು ಮತ್ತು ಡಿಕ್ಲರೇಶನ್ ಜಮೀನುಗಳಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಹಾಗೂ ಮೂಲಿಹಕ್ಕಿನ ಜಮೀನು (ಪಟ್ಟಾ ಭೂಮಿ)ಗಳಿಗೆ ಸಂಬಂಧಿಸಿದ ಭೂ ಪರಿವರ್ತನೆ ಆದೇಶವನ್ನು ತಹಶೀಲ್ದಾರ್ ಹೊರಡಿಸುತ್ತಾರೆ.
Related Articles
Advertisement
ಜಿಲ್ಲಾಧಿಕಾರಿಗಳು ಭೂ ಪರಿವರ್ತನೆ ಆದೇಶ ರದ್ದು ಗೊಳಿಸಿ ಪುನಃ ಕೃಷಿ ಉದ್ದೇಶಕ್ಕೆ ಪರಿವರ್ತಿಸಲು ಭೂ ಪರಿವರ್ತನ ತಂತ್ರಾಂಶದಲ್ಲಿ ತಾಂತ್ರಿಕ ಅವಕಾಶ ಕಲ್ಪಿಸಲಾಗುವುದು. ಈ ರೀತಿಯ ಭೂಮಿ ಇರುವಂತಹ ಪ್ರದೇಶದ ಸ್ಥಳೀಯ ಯೋಜನಾ ಪ್ರಾಧಿಕಾರದ ಕಾನೂನು, ನಿಯಮಾವಳಿ ಅಡಚಣೆ ಯಾಗುವುದಿಲ್ಲ ಎಂಬುದನ್ನು ಸಕ್ಷಮ ಪ್ರಾಧಿಕಾರದಿಂದ ಖಾತರಿ ಪಡಿಸಿ ನಿಯಮಾನುಸಾರ ಕ್ರಮ ಕೈಕೊಳ್ಳಲು ಕಂದಾಯ ಇಲಾಖೆಯು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದೆ.
ವಿವಿಧ ಕಾರಣಗಳಿಂದ ಮತ್ತೆ ಕೃಷಿ ಉದ್ದೇಶಕ್ಕೆ ಪರಿವರ್ತಿಸಲು ಕೋರಿಕೆ ಬಂದಲ್ಲಿ ರಾಜ್ಯ ಭೂ ಮಾಪನ ಇಲಾಖೆ ಆಯುಕ್ತರ ಆದೇಶದ ಪ್ರಕಾರ ನಿಯಮಾವಳಿ ಪರಿಶೀಲಿಸಿ ಜಿಲ್ಲೆಗೆ ಪೂರಕ ವಾಗಿರುವಂತೆ ಕ್ರಮ ಕೈಗೊಳ್ಳಲಾಗುವುದು.-ಡಾ| ವಿದ್ಯಾಕುಮಾರಿ ಕೆ., ಜಿಲ್ಲಾಧಿಕಾರಿ, ಉಡುಪಿ