Advertisement
ಆಸ್ಪತ್ರೆ ರೋಗಿಗಳಿಗೆ ಶುಶ್ರೂಷೆ ಮಾಡಲು ಮುಖ್ಯವಾಗಿ ಸ್ಟಾಫ್ ನರ್ಸ್ ಗಳ ಸೇವೆ ಅಗತ್ಯವಾಗಿಬೇಕು. ಆದರೆ ಗ್ರಾಮದ ಆರೋಗ್ಯ ಕೇಂದ್ರಕ್ಕೆ ಕೆಲ ತಿಂಗಳುಗಳ ಹಿಂದೆ ಗುತ್ತಿಗೆ ಆಧಾರದಲ್ಲಿ ನಿಯುಕ್ತಿಗೊಂಡಿದ್ದ ಇಬ್ಬರ ಸ್ಟಾಫ್ ನರ್ಸ್ ಗಳ ನೇಮಕಾತಿ ರದ್ದುಗೊಂಡಿರುವ ಹಿನ್ನೆಲೆ ಗ್ರಾಮದ ರೋಗಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
Related Articles
Advertisement
ಮೇಲಿನ ಹುದ್ದೆಗಳ ಪೈಕಿ ಬ್ಲಾಕ್ ಹೆಲ್ತ್ ಆಫೀಸರ್ ಹುದ್ದೆ 5ವರ್ಷಗಳಿಂದ ಖಾಲಿಯಿದ್ದರೂ ಸಂಬಂಧಿಸಿದ ಅಧಿಕಾರಿಗಳು ಹುದ್ದೆ ಭರ್ತಿ ಮಾಡಲು ಕ್ರಮಕೈಗೊಳ್ಳದಿರುವುದು ಆಡಳಿತ ವ್ಯವಸ್ಥೆಯಲ್ಲಿ ಜಾಣಕುರುಡುತನಕ್ಕೆ ಹಿಡಿದ ಉತ್ತಮ ನಿದರ್ಶನವಾಗಿದೆ.
ಜಿಲ್ಲಾ ಮತ್ತು ತಾಲೂಕು ಕೇಂದ್ರದಿಂದ ದೂರ : ಮುಧೋಳ ತಾಲೂಕಿನ ಗಡಿಗ್ರಾಮವಾಗಿರುವ ಹಲಗಲಿಯು ಮುಧೋಳದಿಂದ 30 ಹಾಗೂ ಜಿಲ್ಲಾಕೇಂದ್ರ ಬಾಗಲಕೋಟೆಯಿಂದ 45 ಕಿ.ಮೀ. ಅಂತರ ದೂರದಲ್ಲಿದೆ. ಪ್ರಾಥಮಿಕ ಆರೋಗ್ಯ ಕೇಂದ್ರ ಹೊಂದಿರುವ ಗ್ರಾಮವನ್ನೊಳಗೊಂಡು ಅದರ ವ್ಯಾಪ್ತಿಯ ಗ್ರಾಮಗಳಾದ ಮೆಳ್ಳಿಗೇರಿ, ಕಿಶೋರಿ ಮಂಟೂರ ಗ್ರಾಮಗಳು ಯಡಹಳ್ಳಿ ಚೀಂಕಾರ ರಕ್ಷಿತಾರಣ್ಯಕ್ಕೆ ಹೊಂದಿಕೊಂಡಿರುವುದರಿಂದ ಈ ಭಾಗದಲ್ಲಿ ಕೆಲವೊಂದು ಬಾರಿ ಕಾಡುಪ್ರಾಣಿಗಳ ಹಾಗೂ ಸರಿಸೃಪಗಳ ಉಪಟಳವಿರುತ್ತದೆ. ಅಂತಹ ಅನಿವಾರ್ಯ ಸಂದರ್ಭದಲ್ಲಿ ಜನರಿಗೆ ಸೂಕ್ತ ಚಿಕಿತ್ಸೆ ದೊರೆಯದೆ ಅನೇಕ ಅವಾಂತರಗಳು ಆಗಿದ್ದುಂಟು. ಆಸ್ಪತ್ರಯಲ್ಲಿನ ಸಿಬ್ಬಂದಿ ತಮ್ಮ ಇತಿಮಿತಿಯೊಳಗೆ ಅವಿರತವಾಗಿ ಕಾರ್ಯನಿರ್ವಹಿಸದರೂ ಸಿಬ್ಬಂದಿ ಸಮಸ್ಯೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಹಲವಾರು ಬಾರಿ ಇಲ್ಲಿನ ಆರೋಗ್ಯ ಕೇಂದ್ರದ ಸಿಬ್ಬಂದಿ ಹಾಗೂ ರೋಗಿಗಳ ಮಧ್ಯೆ ವಾಗ್ವಾದಗಳೂ ನಡೆದದ್ದುಂಟು. ಕೂಡಲೇ ಸರ್ಕಾರ ಆರೋಗ್ಯ ಕೇಂದ್ರಕ್ಕೆ ಸಿಬ್ಬಂದಿ ನೀಡಿದರೆ ಇಲ್ಲಿನ ಜನರಿಗೆ ಸೂಕ್ತ ಚಿಕಿತ್ಸೆಗೆ ನೆರವಾಗುತ್ತದೆ.
ಉದಯವಾಣಿ ವರದಿಗೆ ಎಚ್ಚೆತ್ತು ಸಿಬ್ಬಂದಿ ನೇಮಕ : ಹಲಗಲಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿನ ಸಿಬ್ಬಂದಿ ಸಮಸ್ಯೆ ಕುರಿತು ಉದಯವಾಣಿ 2023 ಅಕ್ಟೋಬರ್ ನಲ್ಲಿ ಹಲಗಲಿ ಆರೋಗ್ಯ ಕೇಂದ್ರಕ್ಕೇ ಬೇಕಿದೆ ಚಿಕಿತ್ಸೆ ಹೆಸರಿನಡಿ ವಿಸ್ತೃತ ವರದಿ ಪ್ರಕಟಿಸಿತ್ತು. ವರದಿಯಿಂದ ಎಚ್ಚೆತ್ತ ಸರ್ಕಾರ 2ಸ್ಟಾಫ್ ನರ್ಸ್ ಹುದ್ದೆಗಳನ್ನು ನೀಡಿ ಅಲ್ಲಿನ ಜನರಿಗೆ ಅನುಕೂಲ ಕಲ್ಪಿಸಿತ್ತು. ಇದೀಗ ತಾಂತ್ರಿಕ ತೊಂದರೆಯಿಂದಾಗಿ ನೇಮಕಾತಿ ರದ್ದುಗೊಳಿಸಿರುವ ಪರಿಣಾಮ ಆರೋಗ್ಯ ಕೇಂದ್ರ ಮತ್ತೊಮ್ಮೆ ಕೋಮಾ ಸ್ಥಿತಿಗೆ ತಲುಪುವಂತಾಗಿದೆ.-ಶಶಿಧರ ಕುರೇರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಾಗಲಕೋಟೆ ಸಿಬ್ಬಂದಿ ಕೊರತೆಯಿರುವ ಆರೋಗ್ಯ ಕೇಂದ್ರದಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಮೇಲಧಿಕಾರಿಗಳು ಸೂಚನೆ ನೀಡಿದ್ದಾರೆ. ಈ ಹಿನ್ನೆಲೆ ಶೀಘ್ರವೇ ಹಲಗಲಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಅಗತ್ಯ ಸಿಬ್ಬಂದಿ ಒದಗಿಸಲಾಗುವುದು.
-ಸುವರ್ಣಾ ಕುಲಕರ್ಣಿ ಜಿಲ್ಲಾ ಆರೋಗ್ಯಾಧಿಕಾರಿ ಬಾಗಲಕೋಟೆ -ಗೋವಿಂದಪ್ಪ ತಳವಾರ ಮುಧೋಳ