Advertisement

ಪಿಯುವರೆಗೂ ಆನ್‌ಲೈನ್‌ ತರಗತಿ ರದ್ದುಪಡಿಸಿ: ಸಿದ್ದು

05:46 AM Jun 12, 2020 | Lakshmi GovindaRaj |

ಮೈಸೂರು: ಸರ್ಕಾರ ಐದನೇ ತರಗತಿ ಯವರೆಗೂ ಆನ್‌ಲೈನ್‌ ತರಗತಿ ರದ್ದು ಮಾಡಿರುವುದು ಒಳ್ಳೆಯ ನಿರ್ಧಾರ. ಅದರ ಜೊತೆಗೆ ಪಿಯುಸಿ ತರಗತಿ ಗಳಿಗೂ ಆನ್‌ಲೈನ್‌ ತರಗತಿಗಳನ್ನು ರದ್ದು ಮಾಡಬೇಕು ಎಂದು ವಿರೋಧ ಪಕ್ಷದ  ನಾಯಕ ಸಿದ್ದರಾಮಯ್ಯ ಹೇಳಿದರು. ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದರು.

Advertisement

ಆನ್‌ಲೈನ್‌ ಶಿಕ್ಷಣವನ್ನು ನಾನು ಮೊದಲಿನಿಂದಲೂ ವಿರೋಧಿಸು ತ್ತಲೇ ಬಂದಿದ್ದೇನೆ. ತರಗತಿಯಲ್ಲಿ ನೇರವಾಗಿ ಪಾಠ  ಮಾಡಿದರೆ ಮಾತ್ರ ಮಕ್ಕಳಿಗೆ ಚೆನ್ನಾಗಿ ಅರ್ಥವಾಗುತ್ತದೆ. ಆನ್‌ಲೈನಲ್ಲಿ ಪಾಠ ಮಾಡು ವಾಗ ಮಕ್ಕಳ ಮನಸ್ಸಿಗೆ ಪರಿಣಾಮಕಾರಿಯಾಗಿ ಅರ್ಥವಾಗುವುದಿಲ್ಲ. ಆದ್ದರಿಂದ ನನ್ನ ಪ್ರಕಾರ ಪಿಯುಸಿ ವರೆಗಿನ ವಿದ್ಯಾ ರ್ಥಿಗಳ ವಿಚಾರದಲ್ಲೂ ಇದೇ ನಿರ್ಧಾರವನ್ನು ಸರ್ಕಾರ ಅನುಸರಿಸಬೇಕು ಎಂದು ಸಲಹೆ ಮಾಡಿದರು.

ಪರಿಸ್ಥಿತಿ ಅವಲೋಕಿಸಿ: ಸದ್ಯದ ಕೋವಿಡ್‌ 19 ವೈರಾಣು ಹರಡುತ್ತಿರುವ ಪರಿಸ್ಥಿತಿ ನೋಡಿದರೆ ಅಕ್ಟೋಬರ್‌ ತಿಂಗಳವರೆಗೂ ಶಾಲೆಗಳನ್ನು ತೆರೆಯುವುದು ಬೇಡ ಎಂದೇ ಹೇಳಬಹುದು. ಆ ಬಳಿಕ ಕೋವಿಡ್‌ 19 ವೈರಾಣು ಎಷ್ಟರಮಟ್ಟಿಗೆ  ನಿಯಂತ್ರಣಕ್ಕೆ ಬಂದಿದೆ. ಪರಿಸ್ಥಿತಿ ಹೇಗಿದೆ ಎಂಬುದನ್ನು ನೋಡಿಕೊಂಡು ಶಾಲೆಗಳನ್ನು ಪುನಾರಂಭ ಮಾಡುವ ಬಗ್ಗೆ ಸರ್ಕಾರ  ತೀರ್ಮಾನಿಸುವುದು ಉತ್ತಮ.

ಶಾಲೆ ತೆರೆಯುವಾಗಲೂ ಕೋವಿಡ್‌ 19 ನಿಯಂತ್ರಣದ ಎಲ್ಲಾ ಮುಂಜಾಗ್ರತಾ  ಕ್ರಮಗಳೂ ಕಟ್ಟು ನಿಟ್ಟಾಗಿ ಪಾಲನೆ ಆಗುವಂತೆ ನಿಗಾ ವಹಿಸಬೇಕು ಎಂದು ತಿಳಿಸಿದರು. ಇದೇ ವೇಳೆ ಖಾಸಗಿ ಶಾಲೆಗಳು ಶುಲ್ಕ ಕಡಿಮೆ ಮಾಡುವ ಬಗ್ಗೆ ಮಾತನಾಡಿ, ಅದರ ಬಗ್ಗೆ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳುತ್ತದೆ ಎಂದಷ್ಟೇ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next