Advertisement

ಪ್ರಭಾರ ಯುವಸಬಲೀಕರಣ,ಕ್ರೀಡಾಧಿಕಾರಿ ಹುದ್ದೆಯಿಂದ ದೈಹಿಕ ಶಿಕ್ಷಣ ಶಿಕ್ಷಕರ ನಿಯೋಜನೆ ರದ್ದು

10:27 AM Oct 14, 2021 | Team Udayavani |

ದಕ್ಷಿಣ ಕನ್ನಡ: ದಕ್ಷಿಣಕನ್ನಡ ಜಿಲ್ಲೆಯಲ್ಲಿ ದೈಹಿಕ ಶಿಕ್ಷಕರನ್ನು ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕ್ರೀಡಾ ಅಧಿಕಾರಿಗಳಾಗಿ ಹೆಚ್ಚುವರಿ ಪ್ರಭಾರದಲ್ಲಿರಿಸಿರುವ ಆದೇಶಗಳನ್ನು ಶಿಕ್ಷಣ ಇಲಾಖೆ ರದ್ದುಗೊಳಿಸಿದೆ.

Advertisement

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಹಾಗೂ ಸರ್ಕಾರಿ ಪ್ರೌಢಶಾಲಾ ದೈಹಿಕ ಶಿಕ್ಷಕರನ್ನು ತಾಲ್ಲೂಕು ಹಂತದಲ್ಲಿ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯಲ್ಲಿ ಕ್ರೀಡಾ ಚಟುವಟಿಕೆಗಳನ್ನು ಆಯೋಜಿಸಲು ತಾತ್ಕಾಲಿಕವಾಗಿ ಹೆಚ್ಚುವರಿ ಪ್ರಭಾರದಲ್ಲಿರಿಸಿ ನಿಯೋಜನೆ ಮಾಡಲಾಗಿತ್ತು.

ಗಣೇಶ್ ಪಿ, ದೈಹಿಕ ಶಿಕ್ಷಣ ಶಿಕ್ಷಕರು ಗ್ರೇಡ್-1,ಸರ್ಕಾರಿ ಪ್ರೌಢಶಾಲೆ, ಏನೆಕಲ್ಲು ಇವರನ್ನು ಕಡಬ ತಾಲ್ಲೂಕು ಯುವಸಬಲೀಕರಣ ಮತ್ತು ಕ್ರೀಡಾಧಿಕಾರಿಯಾಗಿ,ರಾಮಕೃಷ್ಣ ಎ. ದೈಹಿಕ ಶಿಕ್ಷಣ ಶಿಕ್ಷಕರು ಗ್ರೇಡ್-1, ಸರ್ಕಾರಿ ಪ್ರೌಢಶಾಲೆ, ಉಪ್ಪಳಿಗೆ ಇವರನ್ನು ಪುತ್ತೂರು ತಾಲ್ಲೂಕು ಯುವಸಬಲೀಕರಣ ಮತ್ತು ಕ್ರೀಡಾಧಿಕಾರಿಯಾಗಿ,  ಶ್ರೀ ವೆಂಕಟರಮಣ.ಕೆ.ಎಸ್., ಪದವೀಧರ ದೈಹಿಕ ಶಿಕ್ಷಣ  ಶಿಕ್ಷಕರು ಗ್ರೇಡ್-1, ಸರ್ಕಾರಿ ಪ್ರೌಢಶಾಲೆ, ದುಗ್ಗಲಡ್ಕ ಇವರನ್ನು ಸುಳ್ಯ ತಾಲ್ಲೂಕು ಯುವಸಬಲೀಕರಣ ಮತ್ತು ಕ್ರೀಡಾಧಿಕಾರಿಯಾಗಿ,ನವೀನ್, ಪಿ.ಎಸ್, ದೈಹಿಕ ಶಿಕ್ಷಣ ಶಿಕ್ಷಕರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಬಿ. ಮೂಡ ಇವರನ್ನು ಬಂಟ್ವಾಳ ತಾಲ್ಲೂಕು ಯುವಸಬಲೀಕರಣ ಮತ್ತು ಕ್ರೀಡಾಧಿಕಾರಿಯಾಗಿ,ಪ್ರಭಾಕರ, ದೈಹಿಕ ಶಿಕ್ಷಣ ಶಿಕ್ಷಕರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ನಾರಾವಿ ಇವರನ್ನು ಬೆಳ್ತಂಗಡಿ ತಾಲ್ಲೂಕು ಯುವಸಬಲೀಕರಣ ಮತ್ತು ಕ್ರೀಡಾಧಿಕಾರಿಯಾಗಿ, ವಿನೋದ್ ಕುಮಾರ್, ದೈಹಿಕ ಶಿಕ್ಷಣ ಶಿಕ್ಷಕರು ಗ್ರೇಡ್-1, ಸರ್ಕಾರಿ ಮಂಗಳೂರು ಉತ್ತರ ವಲಯ ಪ್ರೌಢಶಾಲೆ, ಸೂರಿಂಜೆ ಇವರನ್ನು ಮಂಗಳೂರು ತಾಲೂಕು ಯುವಸಬಲೀಕರಣ ಮತ್ತು ಕ್ರೀಡಾಧಿಕಾರಿಯಾಗಿ,ಶಿವಾನಂದ ಕಾಯ್ಕಿಣಿ, ದೈಹಿಕ ಶಿಕ್ಷಣ ಶಿಕ್ಷಕರು ಗ್ರೇಡ್-1, ಸರ್ಕಾರಿ ಪ್ರೌಢಶಾಲೆ, ನೆಲ್ಲಕಾಡುಇವರನ್ನು ಮೂಡಬಿದ್ರೆ ತಾಲ್ಲೂಕು ಯುವಸಬಲೀಕರಣ ಮತ್ತು ಕ್ರೀಡಾಧಿಕಾರಿಯಾಗಿ ನಿಯೋಜಿಸಲಾಗಿತ್ತು.

ದೈಹಿಕ ಶಿಕ್ಷಕರ ಸೇವೆಯು ಶಾಲೆಗಳಲ್ಲಿ ಅತ್ಯಂತ ಅವಶ್ಯಕವಾಗಿದ್ದು, ಪ್ರಸ್ತುತ ಎಲ್ಲಾ ಶಾಲೆಗಳಲ್ಲಿ ದೈಹಿಕ ಶಿಕ್ಷಕರ ಹುದ್ದೆಗಳ ಇಲ್ಲದೇ ಇರುವುದರಿಂದ, ಶಾಲೆಗಳಲ್ಲಿ ದೈಹಿಕ ಶಿಕ್ಷಕರ ತೀವ್ರ ಕೊರತೆ ಇದ್ದು, ಈಗಾಗಲೇ ಶಾಲೆಗಳೂ ಸಹ ಪುನರಾರಂಭಗೊಂಡಿದ್ದು, ವಿದ್ಯಾರ್ಥಿಗಳ ಕ್ರೀಡಾ ಕೊರತೆ ಇರುತ್ತದೆ. ಹಾಗೂ ದೈಹಿಕ ಚಟುವಟಿಕೆಗಳಿಗಾಗಿ ದೈಹಿಕ ಶಿಕ್ಷಕರು ಪೂರ್ಣಕಾಲಿಕವಾಗಿ ಶಾಲೆಯಲ್ಲಿಯೇ ಕರ್ತವ್ಯನಿರ್ವಹಿಸುವುದು ಅತ್ಯಂತ ಆವಶ್ಯಕವಾಗಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಕರನ್ನು ಇತರೆ ಕಾರ್ಯಗಳಿಗೆ ನಿಯೋಜಿಸುವುದು ಸಾಧ್ಯವಾಗುವುದಿಲ್ಲ. ಅಲ್ಲದೇ ಶಿಕ್ಷಕರನ್ನು ಇತರೆ ಕಾರ್ಯಗಳಿಗೆ ನಿಯೋಜಿಸಿದಲ್ಲಿ, ಇಲಾಖೆಗೆ ಹೆಚ್ಚುವರಿ ಆರ್ಥಿಕ ಹೊರೆ ಉಂಟಾಗುತ್ತದೆ. ಮುಂದುವರೆದು, ಶಿಕ್ಷಕರನ್ನು ಬೋಧನಾ ಕಾರ್ಯ  ಹೊರತುಪಡಿಸಿ ಅನ್ಯ ಕಾರ್ಯಗಳಿಗೆ ನಿಯೋಜಿಸಲು ನಿಯಮಗಳಲ್ಲಿ ಅವಕಾಶವಿರುವುದಿಲ್ಲ.

ಈ ಅಂಶಗಳ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ನಿಯೋಜನೆಗಳನ್ನು ರದ್ದುಪಡಿಸಿ ನಿಯೋಜಿತ ದೈಹಿಕ ಶಿಕ್ಷಕರು ಮೂಲ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಲು ಅಗತ್ಯ ಕ್ರಮ ವಹಿಸಲು ಶಿಕ್ಷಣ ಇಲಾಖೆಯ ಆಯುಕ್ತರು ಆದೇಶದಲ್ಲಿ ತಿಳಿಸಿದ್ದಾರೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

More
Next