Advertisement
ಬುಧವಾರ ಈ ವರದಿಯನ್ನು ನೈಟ್ ಫ್ರಾಂಕ್ ಇಂಡಿಯಾ ಬಿಡುಗಡೆ ಮಾಡಿದ್ದು, ಪ್ರಸ್ತುತ ಬೆಂಗಳೂರಿನಲ್ಲಿ 842 ಕಿ.ಮೀ. ಉದ್ದದ ಮಳೆ ನೀರು ಹೊತ್ತೂಯ್ಯುವ ಪ್ರಮುಖ ಮತ್ತು ಕಿರುಗಾಲುವೆಗಳಿವೆ. ಆದರೆ ಇನ್ನು 658 ಹೊಸ ಪ್ರಮುಖ ಮತ್ತು ಕಿರುಗಾಲುವೆಗಳನ್ನು ನಿರ್ಮಿಸಬೇಕು. ತನ್ಮೂಲಕ ನಗರ ಒಟ್ಟು 1,500 ಕಿ.ಮೀ. ಉದ್ದದ ಕಾಲುವೆಯನ್ನು ಪಡೆದರೆ ಪ್ರವಾಹದ ಆತಂಕದಿಂದ ಪಾರಾಗಬಹುದು ಎಂದು ವರದಿಯಲ್ಲಿ ಉಲ್ಲೇಖೀಸಲಾಗಿದೆ.
Related Articles
Advertisement
ಗುಜರಾತ್‌ನ ಸಬರಮತಿ ನದಿ ಯೋಜನೆಯನ್ನು ಉದಾಹರಿಸಲಾಗಿದೆ. ಹಾಗೆಯೇ ಮುಂಬೈ ಮತ್ತು ಚೆನ್ನೈಯ ಹಣಕಾಸು ಮಾದರಿಗಳನ್ನು ಉಲ್ಲೇಖೀಸಲಾಗಿದೆ. ಪತ್ರಿಕಾಗೋಷ್ಠಿಯಲ್ಲಿ ನೈಟ್ ಫ್ರಾಂಕ್ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ ಶಾಂತನು ಮಜುಂದಾರ್, ಕನ್ಸಲ್ಟೆಂಟ್ ರಿಸರ್ಚ್ ಲೀಡ್ ಶಿಲ್ಪಾ ಶ್ರೀ ಮುಂತಾದವರು ಉಪಸ್ಥಿತರಿದ್ದರು.
ಸ್ಪಾಂಜ್ ಸಿಟಿ ಮಾದರಿಯಲ್ಲಿ ಬೆಂಗಳೂರು ಅಭಿವೃದ್ಧಿ ಪಡಿಸಿ : ಚೀನಾದಲ್ಲಿ ನಗರಗಳ ಪ್ರವಾಹ ಪರಿಸ್ಥಿತಿ ನಿಭಾಯಿಸಲು ಸ್ಪಾಂಜ್ ಸಿಟಿ ಪರಿಕಲ್ಪನೆ ಅನುಸರಿಸಲಾಗುತ್ತಿದೆ. ಇದರಿಂದ ಮಳೆ ನೀರಿನ ವೈಜ್ಞಾನಿಕ ಸಂಗ್ರಹ, ಮಳೆ ನೀರಿನ ಓಟಕ್ಕೆ ಕಡಿವಾಣ, ಕಾಂಕ್ರಿಟಿಕರಣ ಕಡಿಮೆ ಮಾಡಿ ಹಸಿರು ಪ್ರದೇಶಗಳ ಹೆಚ್ಚಳ, ಜೌಗು ಪ್ರದೇಶಗಳ ಅಭಿವೃದ್ಧಿ ಮಾಡುವ ಮೂಲಕ ಪ್ರವಾಹದ ಅಬ್ಬರವನ್ನು ಕಡಿಮೆ ಮಾಡಬಹುದು ಎಂದು ವರದಿ ಹೇಳಿದೆ.
ಮಳೆಗಾಲುವೆ ಮಾಸ್ಟರ್ ಪ್ಲ್ರಾನ್ ಮಾಡಿ: ಮಳೆಗಾಲುವೆಯ ದಕ್ಷ ನಿರ್ವಹಣೆ ಮತ್ತು ನಿಧಿಗೆ ಪೂರಕವಾದ ಮಳೆಗಾಲುವೆ ಮಾಸ್ಟರ್ ಪ್ಲ್ರಾನ್ ರೂಪಿಸಬೇಕು. ಮಳೆಗಾಲುವೆ ಸರಾಗವಾಗಿ ಹರಿದು ಹೋಗುವಂತೆ, ಪ್ರವಾಹ ಕಡಿಮೆ ಮಾಡುವ ರೀತಿ ಮತ್ತು ಮಳೆಗಾಲುವೆಗಳ ನಿರ್ವಹಣೆಗೆ ಅಗತ್ಯ ಹಣದ ಸಂಗ್ರಹದ ಬಗ್ಗೆ ಈ ಮಾಸ್ಟರ್ ಪ್ಲ್ರಾನ್ ಮಾಹಿತಿ ಹೊಂದಿರಬೇಕು.
ಬ್ರ್ಯಾಂಡ್ ಬೆಂಗಳೂರಿಗೆ ಧಕ್ಕೆ : ಜನಸಂಖ್ಯೆಯ ಹೆಚ್ಚಳದಿಂದ ನಗರದ ಭೂಬಳಕೆಯ ವಿಧಾನಗಳು ಬದಲಾಗಿದೆ. ತ್ವರಿತ ಮತ್ತು ಯೋಜನಾ ರಹಿತ ಅಭಿವೃದ್ಧಿ ನಗರದ ಪರಿಸರ ವ್ಯವಸ್ಥೆ ಅದರಲ್ಲೂ ಮಳೆ ನೀರು ಚರಂಡಿಗಳ ಮೇಲೆ ಭಾರಿ ಒತ್ತಡ ಸೃಷ್ಟಿಸಿದ್ದು ಭಾರಿ ಮಳೆಗೆ ನಗರದಲ್ಲಿ ಪ್ರವಾಹ ಸೃಷ್ಟಿಸುತ್ತದೆ. ಇದರಿಂದ ಬ್ರ್ಯಾಂಡ್ ಬೆಂಗಳೂರಿಗೆ ಧಕ್ಕೆ ಆಗುತ್ತಿದೆ. ಇದನ್ನು ಸರಿಪಡಿಸಬೇಕಾದರೆ ಮಳೆಗಾಲುವೆಗಳ ನಿರ್ಮಾಣ, ಅಭಿವೃದ್ಧಿ, ರಿ ಮಾಡೆಲಿಂಗ್, ನಿರ್ವಹಣೆ ಅತ್ಯಗತ್ಯ ಎಂದು ನೈಟ್ ಫ್ರಾಂಕ್ ವರದಿ ತಿಳಿಸಿದೆ.
ಬೆಂಗಳೂರಿನ ಮೂಲಸೌಕರ್ಯ ಗಳನ್ನು ಬಲಪಡಿಸುವ ಪ್ರಾಮುಖ್ಯತೆ ಯನ್ನು ವರದಿಯು ಒತ್ತಿ ಹೇಳಿದೆ. ಮಳೆನೀರು ನಿರ್ವಹಣಾ ವ್ಯವಸ್ಥೆಯನ್ನು ವಿನ್ಯಾಸಗೊಳಿಸುವಾಗ ಜನಸಂಖ್ಯೆಯ ಬೆಳವಣಿಗೆ, ನಗರೀಕರಣ ಮತ್ತು ಹವಾಮಾನ ಬದಲಾವಣೆಯನ್ನು ಗಮನಿಸಬೇಕು. – ಶಿಶಿರ್ ಬೈಜಾಲ್, ನೈಟ್ ಫ್ರಾಂಕ್ ಇಂಡಿಯಾದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ