Advertisement

200 ಕೋಟಿ ವರ್ಷಗಳಷ್ಟು ಪುರಾತನ ಅಂತರ್ಜಲ ಪತ್ತೆ!

03:45 AM Jun 07, 2021 | Team Udayavani |

ಒಟ್ಟಾವಾ: ಕೆನಡಾದ ಪ್ರಾಚೀನ ಕೊಳವೊಂದರ ಗರ್ಭದಲ್ಲಿ ಚಿಮ್ಮಿರುವ ನೀರಿನ ಸೆಲೆಯೇ ಭೂಮಿಯ ಅತ್ಯಂತ ಪುರಾತನ ಜಲಧಾರೆ ಎಂಬ ಅಂಶವೊಂದು ಈಗ ಬಹಿರಂಗವಾಗಿದೆ. 2016ರಲ್ಲಿ ನಡೆದ ಅಧ್ಯಯನವೇ ಇದಕ್ಕೆ ಸಾಕ್ಷಿ. ಇಲ್ಲಿ ಸಿಕ್ಕಿರುವ ನೀರು ಬರೋಬ್ಬರಿ 200 ಕೋಟಿ ವರ್ಷಗಳಷ್ಟು ಹಳೆಯದು ಎಂದು ಸಂಶೋಧಕರು ಹೇಳಿದ್ದಾರೆ.

Advertisement

2013ರಲ್ಲಿ ಕೆನಡಾದ ಒಂಟಾರಿಯೋದಲ್ಲಿರುವ ಕಿಡ್‌ ಎಂಬ ಗಣಿಯೊಳಗಿದ್ದ ರಹಸ್ಯ ಸುರಂಗದೊಳಕ್ಕೆ ವಿಜ್ಞಾನಿಗಳು ಸುಮಾರು 2.4 ಕಿ.ಮೀ. ನಷ್ಟು ಅಗೆದಾಗ, ಅಲ್ಲಿ ನೀರು ಸಿಕ್ಕಿತ್ತು. ಆ ನೀರು 150 ಕೋಟಿ ವರ್ಷಗಳಷ್ಟು ಪುರಾತನವಾದದ್ದು ಎಂಬುದು ತಿಳಿದು ಬಂದಿತ್ತು. ಆದರೆ, ಇದಾದ 3 ವರ್ಷಗಳ ಬಳಿಕ ಅಂದರೆ 2016ರಲ್ಲಿ ಇನ್ನಷ್ಟು ಆಳಕ್ಕೆ ಅಗೆದಾಗ (3.1 ಕಿ.ಮೀ.) ಅಲ್ಲಿ 2 ಶತಕೋಟಿ ವರ್ಷಗಳಷ್ಟು ಹಿಂದಿನದ್ದು ಎನ್ನಲಾದ ಅಂತರ್ಜಲ ಪತ್ತೆಯಾಗಿದೆ ಎಂದು ಟೊರೊಂಟೋ ವಿವಿಯ ಭೂರಸಾಯನ ವಿಜ್ಞಾನಿ ಬರ್ಬಾ ರಾ ಶೆವುìಡ್‌ ಲೊಲ್ಲಾರ್‌ ಹೇಳಿದ್ದಾರೆ.

ಹರಿವು ನಿಮಿಷಕ್ಕೆ 2 ಲೀಟರ್‌: ಮೇಲ್ಮೆ„ ಅಥವಾ ನೆಲದ ಮೇಲೆ ಹರಿಯುವ ನೀರಿಗೆ ಹೋಲಿಸಿದರೆ ಅಂತರ್ಜಲದ ಹರಿವು ಅತ್ಯಂತ ನಿಧಾನವಾಗಿ ಅಂದರೆ ವರ್ಷಕ್ಕೆ 1 ಮೀಟರ್‌ ನಷ್ಟು ಮಾತ್ರವೇ ಇರುತ್ತದೆ. ಆದರೆ, ಇಲ್ಲಿ ಬೋರ್‌ವೆಲ್‌ ಕೊರೆದಾಗ, ನೀರಿನ ಹರಿವು ನಿಮಿಷಕ್ಕೆ 2 ಲೀಟರ್‌ ನಷ್ಟಿತ್ತು. ಈ ಪ್ರಾಚೀನ ಅಂತರ್ಜಲದಲ್ಲಿ ಹೀಲಿಯಂ, ನಿಯಾನ್‌, ಆರ್ಗನ್‌, ಕ್ಸೆನಾನ್‌ ಮತ್ತಿತರ ಅನಿಲಗಳು ಕರಗಿರುವುದು ನೋಡಿದರೆ, ಈ ನೀರು ಬರೋಬ್ಬರಿ 200 ಕೋಟಿ ವರ್ಷಗಳಷ್ಟು ಹಿಂದಿನದು ಎಂಬುದು ಸ್ಪಷ್ಟವಾಗುತ್ತದೆ ಎಂದಿದ್ದಾರೆ ಸಂಶೋಧಕರು.

ಈ ಸಂಶೋಧನ ವರದಿಯನ್ನು ಸ್ಯಾನ್‌ ಫ್ರಾನ್ಸಿಸ್ಕೋದಲ್ಲಿ 2016ರ ಡಿಸೆಂಬರ್‌ ನಲ್ಲಿ ನಡೆದ ಅಮೆರಿಕನ್‌ ಜಿಯೋಫಿಸಿಕಲ್‌ ಯೂನಿಯನ್‌ ಎಂಬ ಕಾರ್ಯಕ್ರಮದಲ್ಲಿ ಪ್ರಸ್ತುತಪಡಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next