ನವದೆಹಲಿ: ಕೆನಡಾದಲ್ಲಿರುವ ಭಾರತೀಯ ಪ್ರವಾಸಿಗರು ಇನ್ನು ಅಲ್ಲಿನ ಉದ್ಯೋಗ ವೀಸಾಕ್ಕೂ ಅರ್ಜಿ ಸಲ್ಲಿಸಬಹುದಂತೆ.. ಹೌದು ಐಆರ್‌ಸಿಸಿ ಇಲಾಖೆಯ ಮಾಹಿತಿ ಪ್ರಕಾರ ಇನ್ನು ಮುಂದೆ ಕೆನಡಾ ಪ್ರವಾಸದಲ್ಲಿರುವ ಭಾರತೀಯರು ಅಲ್ಲಿನ ಉದ್ಯೋಗ ವೀಸಾಕ್ಕೂ ಅರ್ಜಿ ಸಲ್ಲಿಸಬಹುದೆಂಬ ಸಂತಸದ ಮಾಹಿತಿಯನ್ನು ಹಂಚಿಕೊಂಡಿದೆ.
ಒಂದು ವೇಳೆ ಭಾರತೀಯರು ಕೆನಡಾ ದೇಶಕ್ಕೆ ಪ್ರವಾಸಕ್ಕೆ ತೆರಳಿದ್ದ ವೇಳೆ ಅಲ್ಲಿ ಉದ್ಯೋಗಾವಕಾಶ ಲಭಿಸಿತೆಂದಾದರೆ ಎರಡು ವರ್ಷದ ಅವಧಿಗೆ ವೀಸಾಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಹೇಳಿಕೊಂಡಿದೆ, ಈ ಹಿಂದೆಯೂ ಈ ಪ್ರಕ್ರಿಯೆ ಚಾಲ್ತಿಯಲ್ಲಿದ್ದು ಅಲ್ಲಿನ ಸರಕಾರ ಈ 2023ರ ಫೆಬ್ರವರಿ ಅಂತ್ಯಕ್ಕೆ ವೀಸಾ ನೀತಿಯನ್ನು ಕೊನೆಗೊಳಿಸಲು ನಿರ್ಧರಿಸಿತ್ತು ಆದರೆ ಕೆನಡಾ ಕಾರ್ಮಿಕರ ಕೊರತೆ ಎದುರಿಸುತ್ತಿರುವುದರಿಂದ ಈ ನೀತಿಯನ್ನು 2025 ರವರೆಗೆ ಮುಂದುವರಿಸಲು ನಿರ್ಧರಿಸಿದೆಯಂತೆ.