Advertisement

16 ಹಾಕಿ ಆಟಗಾರರ ಸಾವಿಗೆ ಕಾರಣನಾಗಿದ್ದ ಭಾರತೀಯನ ಗಡಿಪಾರು

07:49 PM May 25, 2024 | Shreeram Nayak |

ಒಟ್ಟಾವ: 2018ರಲ್ಲಿ ಕೆನಡಾದಲ್ಲಿ ಭೀಕರ ಅಪಘಾತಕ್ಕೆ ಕಾರಣವಾಗಿದ್ದ ಭಾರತೀಯ ಮೂಲದ ಟ್ರಕ್‌ ಚಾಲಕನನ್ನು ಭಾರತಕ್ಕೆ ಗಡಿಪಾರು ಮಾಡಲು ಆದೇಶಿಸಲಾಗಿದೆ.

Advertisement

ಜಸ್ಕಿರತ್‌ ಸಿಂಗ್‌ ಸಿಧು ಟ್ರಕ್‌ ಡ್ರೈವರ್‌ ಆಗಿದ್ದು, ಸಿಗ್ನಲ್‌ ದಾಟಿ ಜ್ಯೂನಿಯರ್‌ ಹಾಕಿ ತಂಡದ ಆಟಗಾರರನ್ನು ಹೊತ್ತೂಯ್ಯುತ್ತಿದ್ದ ಬಸ್‌ಗೆ ಡಿಕ್ಕಿ ಹೊಡೆದಿದ್ದರು. ಈ ದುರಂತದಲ್ಲಿ ಬಸ್‌ನಲ್ಲಿದ್ದ 16 ಆಟಗಾರರು ಮೃತಪಟ್ಟು, 13 ಮಂದಿ ಗಾಯಗೊಂಡಿದ್ದರು.

ಶುಕ್ರವಾರ ವಿಚಾರಣೆ ಬಳಿಕ ಸಿಧು ಗಂಭೀರ ಅಪರಾಧ ಮಾಡಿರುವುದು ದೃಢಪಟ್ಟಿದ್ದು, ಆತ ಕೆನಡಾ ಪ್ರಜೆಯಲ್ಲದ ಕಾರಣ ಆತನನ್ನು ಗಡಿಪಾರು ಮಾಡಲು ನಿರ್ಧರಿಸಲಾಗಿದೆ ಎಂದು ಕೋರ್ಟ್‌ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next